Thursday, June 18, 2026

ಸುದ್ದಿ

ಸುದ್ದಿ

ತೊಕ್ಕೊಟ್ಟು ಫ್ಲೈ ಓವರಲ್ಲಿ ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ..!! – ಕಹಳೆ ನ್ಯೂಸ್

ಮಂಗಳೂರು, ಮಾ.27: ನಗರದ ಹೊರವಲಯದ ತೊಕ್ಕೊಟ್ಟು ಫೈಓವ‌ರ್ ಮೇಲ್ಬಾಗದಲ್ಲಿ ಶುಕ್ರವಾರ ಬೆಳಿಗ್ಗೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮುಳ್ಳುಗುಡ್ಡೆ ಹೌಸ್, ತಲಪಾಡಿ ನಿವಾಸಿ ಆರಿಫ್ ಯಾನೆ ‘ಟಾಬ್ಲೆಟ್ ಆರಿಫ್’ (46) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರಿಫ್‌ ಬೈಕ್‌ ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯಿಂದ ರಸ್ತೆಗೆ ಬಿದ್ದ ತಕ್ಷಣವೇ, ಮಾರಕಾಸ್ತ್ರಗಳಿಂದ ಕಡಿದು...
ಸುದ್ದಿ

ಮುಳಿಯದಲ್ಲಿ ಮಾ. 27ರಿಂದ ಡೈಮಂಡ್ ಫೆಸ್ಟ್   : 50,000ಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಗ್ಯಾರಂಟಿ ಗಿಫ್ಟ್ – ಕಹಳೆ ನ್ಯೂಸ್

ಪುತ್ತೂರು: ಪ್ರಸಿದ್ಧ ಆಭರಣ ಸಂಸ್ಥೆಯಾದ ಮುಳಿಯ ಗೋಲ್ಡ್ & ಡೈಮಂಡ್ಸ್‌ ತನ್ನ ಗ್ರಾಹಕರಿಗಾಗಿ “ಡೈಮಂಡ್ ಫೆಸ್ಟ್” ವಿಶೇಷ ಉತ್ಸವವನ್ನು ಮಾರ್ಚ್ 27ರಿಂದ ಆರಂಭಿಸುತ್ತಿದೆ. ‘ವೈಡೆಸ್ಟ್ ರೇಂಜ್, ಎಂಡ್‌ಲೆಸ್ ವಾವ್ಸ್!’ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಉತ್ಸವವು ವಜ್ರಾವರಣ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಫೆಸ್ಟ್‌ನ ಅಂಗವಾಗಿ ಗ್ರಾಹಕರು ₹50,000 ಹೆಚ್ಚಿನ ಖರೀದಿಗೆ ಖಚಿತ ಉಡುಗೊರೆಯನ್ನು ಪಡೆಯಬಹುದಾಗಿದೆ. ಜೊತೆಗೆ, ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲುವ ಅವಕಾಶವೂ ಇದೆ.ಈ...
ಸುದ್ದಿ

ಮಂಗಳೂರು ಜಂಕ್ಷನ್-ಸೂರತ್ ವಿಶೇಷ ರೈಲು ಇನ್ನು ಖಾಯಂ – ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ಜಂಕ್ಷನ್-ಸೂರತ್ ಸಂಚರಿಸುತ್ತಿದ್ದ ವಿಶೇಷ ರೈಲನ್ನು ಖಾಯಂಗೊಳಿಸಲು ರೈಲ್ವೇ ಸಚಿವಾಲಯ ಒಪ್ಪಿಗೆ ನೀಡಿದೆ. ರೈಲಿನ ಸಂಖ್ಯೆಯೂ ಬದಲಾಗಲಿದ್ದು, ನಂ. 19057 ಸೂರತ್ ಮಂಗಳೂರು ಎಕ್ಸ್ ಪ್ರೆಸ್ ಬುಧವಾರ, ರವಿವಾರ ರಾತ್ರಿ 7.35ಕ್ಕೆ ಸೂರತ್‌ನಿಂದ ಹೊರಡಲಿದ್ದು, ಗುರುವಾರ, ಸೋಮವಾರ ಮಂಗಳೂರು ತಲಪಲಿದೆ. 19058 ಮಂಗಳೂರು ಸೂರತ್ ಎಕ್ಸ್‌ಪ್ರೆಸ್ ಗುರುವಾರ, ಸೋಮವಾರ ಹೊರಟು ಶುಕ್ರವಾರ, ಮಂಗಳವಾರ ಸೂರತ್ ತಲುಪಲಿದೆ. ಈ ರೈಲಿಗೆ ಉದ್ಘಾ, ವಲ್ಸಾಡ್, ವಾಪಿ, ಪಾಲ್ಗರ್, ವಸಾಯ್ ರೋಡ್,...
ಜಿಲ್ಲೆಮಂಗಳೂರುಸುದ್ದಿ

ಮಂಗಳೂರಿಗೆ ಬಂತು ಎಲ್‌ಪಿಜಿ ಹೊತ್ತ ಟ್ಯಾಂಕರ್‌ -ಕಹಳೆ ನ್ಯೂಸ್

ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ ನವಮಂಗಳೂರು ಬಂದರಿಗೆ (New Mangalore Port) ಎಲ್‌ಪಿಜಿ ಹೊತ್ತ ಹಡಗು ಆಗಮಿಸಿದೆ. 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ (LPG) ಇರುವ ಅಪೋಲೋ ಓಷನ್(Apollo Ocean) ಹೆಸರಿನ ಹಡಗು ಮಂಗಳೂರಿಗೆ ಆಗಮಿಸಿದ್ದು ಇಳಿಸುವ ಕಾರ್ಯಾಚರಣೆಗಳು ನಡೆಯುತ್ತಿವೆ. ಕತಾರಿನ ರಾಸ್ ಲಫಾನ್‌ನಿಂದ 46 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತ ಶಿವಾಲಿಕ್ ಸರಕು ಹಡಗು ಗುಜರಾತಿನ ಮುದ್ರಾ ಬಂದರಿಗೆ ಮಾ.16ಕ್ಕೆ ಬಂದಿತ್ತು. ಈ ಹಡಗು...
ರಾಜ್ಯರಾಷ್ಟ್ರೀಯಸುದ್ದಿ

‌ರಷ್ಯಾದ 10 ಲಕ್ಷ ಬ್ಯಾರಲ್‌ ಕಚ್ಚಾ ತೈಲ ಹೊತ್ತೊಯ್ಯುತ್ತಿದ್ದ ಟರ್ಕಿ ಚಾಲಿತ ಟ್ಯಾಂಕರ್‌ ಮೇಲೆ ದಾಳಿ – ಕಹಳೆ ನ್ಯೂಸ್

ಅಂಕಾರ:‌ ಇಸ್ತಾನ್‌ಬುಲ್‌ ಬಳಿಯ ಕಪ್ಪು ಸಮುದ್ರದಲ್ಲಿ ಟರ್ಕಿ ನಿರ್ವಹಿಸುತ್ತಿದ್ದ ಕಚ್ಚಾ ತೈಲ ಟ್ಯಾಂಕರ್‌ ಹಡಗಿನ ಮೇಲೆ ದಾಳಿ ನಡೆದಿದೆ. ಕಪ್ಪು ಸಮುದ್ರವನ್ನು ಮರ್ಮರ ಸಮುದ್ರ (ದ್ವೀಪ ಸಮುದ್ರ) ಮತ್ತು ಮೆಡಿಟರೇನಿಯನ್‌ನೊಂದಿಗೆ ಸಂಪರ್ಕಿಸುವ ಪ್ರಮುಖ ಜಲಮಾರ್ಗವಾದ ಬಾಸ್ಪರಸ್‌ನಿಂದ ಸುಮಾರು 33 ಕಿಮೀ ದೂರದಲ್ಲಿ ದಾಳಿ ನಡೆದಿದೆ. ಸಿಯೆರಾ ಲಿಯೋನ್‌ ಧ್ವಜ ಹೊತ್ತ ಟ್ಯಾಂಕರ್‌ ರಷ್ಯಾದ ಕಚ್ಚಾ ತೈಲ ಸಾಗಿಸುತ್ತಿತ್ತು. ಸುಮಾರು 10 ಲಕ್ಷ ಬ್ಯಾರಲ್‌ಗಳನ್ನ ಹಡಗಿನಲ್ಲಿ ಲೋಡ್‌ ಮಾಡಲಾಗಿತ್ತು. ರಷ್ಯಾದ ತೈಲ...
ಸುದ್ದಿ

ಶಾಲಾಭಿವೃದ್ಧಿ ಸಮಿತಿಯ ಇಚ್ಛಾಶಕ್ತಿ ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ :ಅಬೂಬಕ್ಕರ್ ಅಶ್ರಫ್- ಕಹಳೆ ನ್ಯೂಸ್

ಕಲ್ಲಡ್ಕ : ಶಾಲಾಭಿವೃದ್ಧಿ ಸಮಿತಿಯ ಇಚ್ಛಾಶಕ್ತಿ ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಲ್ಲಡ್ಕ ಮಾದರಿ ಶಾಲಾ ಪದವೀಧರ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್ ಹೇಳಿದರು. ಅವರು ಮಾರ್ಚ್ 26 ಗುರುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ಕಲ್ಲಡ್ಕ ಕ್ಲಸ್ಟರ್ನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಜಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪಾಂಡವರಕಲ್ಲು ಶ್ರೀ ಬ್ರಹ್ಮಬೈದೆರೆ ಗರೋಡಿ ಕ್ಷೇತ್ರದಲ್ಲಿ ಮಾ.26 ರಿಂದ ಏ.2 ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ – ಕಹಳೆ ನ್ಯೂಸ್

ಬಂಟ್ವಾಳ : ಪಾಂಡವರಕಲ್ಲು ಶ್ರೀ ಬ್ರಹ್ಮಬೈದೆರೆ ಗರೋಡಿ ಕ್ಷೇತ್ರದಲ್ಲಿ ಮಾ.26 ರಿಂದ ಏ.2 ರ ತನಕ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿರುವುದು. ಮಾ.26 ರಂದು ಬೆಳಿಗ್ಗೆ 10.ಕ್ಕೆ ಸಾರಿ ಹಾಕುವುದು ಅದೇ ದಿನ ರಾತ್ರಿ ದೊಂಪದಬಲಿ ನೇಮೋತ್ಸವ ನಡೆಯಲಿದೆ. ಮಾ.29 ರಂದು ರಾತ್ರಿ ಕಜೆಕಾರುಗುತ್ತಿನಿಂದ ಶ್ರೀ ರಾಜನ್ ದೈವ ಕೊಡಮಾಣಿತ್ತಾಯ ಮತ್ತು ಪಟ್ರಾಡಿ ತಾವಿನಿಂದ ಶ್ರೀ ಬ್ರಹ್ಮಬೈದೆರೆ ಭಂಡಾರ ಬಂದು ಬಲಿ ಉತ್ಸವ ನಡೆಯಲಿದೆ. ಮಾ.30 ರಂದು ಬೆಳಿಗ್ಗೆ ಧ್ವಜಾರೋಹಣ...
ಬೆಂಗಳೂರುಸುದ್ದಿ

ಒಂದು ಸಿಲಿಂಡರ್ ಕೊಟ್ರೆ ತಿಂಗಳ ಪೂರ್ತಿ ಬಿರಿಯಾನಿ ಫ್ರೀ -ಕಹಳೆ ನ್ಯೂಸ್

ಆನೇಕಲ್: ಒಂದು ಸಿಲಿಂಡರ್ ಕೊಟ್ರೆ ಒಂದು ತಿಂಗಳು ಕಾಲ ಉಚಿತವಾಗಿ ಬಿರಿಯಾನಿ ನೀಡುವುದಾಗಿ ಹೋಟೆಲ್‌ವೊಂದು ಭರ್ಜರಿ ಆಫರ್ ನೀಡಿದೆ. ಬೆಂಗಳೂರು ಹೊರವಲಯದ ಆನೇಕಲ್ ಗಡಿಭಾಗದ ಹೊಸೂರಿನಲ್ಲಿರುವ ಹೋಟೆಲ್‌ವೊಂದು ಈ ಆಫರ್ ನೀಡಿದೆ. ಒಂದು ಸಿಲಿಂಡರ್ ಕೊಟ್ಟರೆ ದಿನಕ್ಕೆ ಒಂದು ಬಿರಿಯಾನಿಯಂತೆ ಒಂದು ತಿಂಗಳು ಕಾಲ ಉಚಿತವಾಗಿ ಕೊಡುವುದಾಗಿ ತಿಳಿಸಿದೆ. ನಮಗೆ ಅಡುಗೆಗೆ ನೀವು ಸಹಾಯ ಮಾಡಿ, ನಿಮ್ಮ ಹೊಟ್ಟೆ ನಾವು ತುಂಬಿಸುತ್ತೇವೆ ಎಂದು ಟ್ಯಾಗ್ ಕೂಡ ಹಾಕಿಕೊಂಡಿದೆ. ವಿಶಿಷ್ಟ ಜಾಹೀರಾತಿನ...
1 88 89 90 91 92 3,396
Page 90 of 3396