Friday, April 24, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪಾಂಡವರಕಲ್ಲು ಶ್ರೀ ಬ್ರಹ್ಮಬೈದೆರೆ ಗರೋಡಿ ಕ್ಷೇತ್ರದಲ್ಲಿ ಮಾ.26 ರಿಂದ ಏ.2 ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ – ಕಹಳೆ ನ್ಯೂಸ್

ಬಂಟ್ವಾಳ : ಪಾಂಡವರಕಲ್ಲು ಶ್ರೀ ಬ್ರಹ್ಮಬೈದೆರೆ ಗರೋಡಿ ಕ್ಷೇತ್ರದಲ್ಲಿ ಮಾ.26 ರಿಂದ ಏ.2 ರ ತನಕ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿರುವುದು.

ಮಾ.26 ರಂದು ಬೆಳಿಗ್ಗೆ 10.ಕ್ಕೆ ಸಾರಿ ಹಾಕುವುದು ಅದೇ ದಿನ ರಾತ್ರಿ ದೊಂಪದಬಲಿ ನೇಮೋತ್ಸವ ನಡೆಯಲಿದೆ.
ಮಾ.29 ರಂದು ರಾತ್ರಿ ಕಜೆಕಾರುಗುತ್ತಿನಿಂದ ಶ್ರೀ ರಾಜನ್ ದೈವ ಕೊಡಮಾಣಿತ್ತಾಯ ಮತ್ತು ಪಟ್ರಾಡಿ ತಾವಿನಿಂದ ಶ್ರೀ ಬ್ರಹ್ಮಬೈದೆರೆ ಭಂಡಾರ ಬಂದು ಬಲಿ ಉತ್ಸವ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಾ.30 ರಂದು ಬೆಳಿಗ್ಗೆ ಧ್ವಜಾರೋಹಣ ಬಳಿಕ ರಾತ್ರಿ 8.ಕ್ಕೆ ಕಂರ್ಬಡ್ಕಗುತ್ತಿನಿAದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಬಂದು ದೈವದ ನೇಮೋತ್ಸವ ನಡೆಯಲಿದೆ.

ಮಾ.31 ರಾತ್ರಿ ಶ್ರೀ ರಾಜನ್ ದೈವ ಕೋಡಮಣಿತ್ತಾಯ ಮತ್ತು ಕಲ್ಕುಡ ದೈವದ ನೇಮೋತ್ಸವ ನಡೆಯಲಿದೆ.

ಏ.1 ರಂದು ಮುಂಜಾನೆ 5.ಗಂಟೆಗೆ ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆಯಲಿದ್ದು.ಅದೇ ದಿನ ರಾತ್ರಿ ಶ್ರೀ ಬ್ರಹ್ಮಬೈದೆರೆ ಜಾತ್ರೋತ್ಸವ ನಡೆಯಲಿದೆ . ನಂತರ ಶಾಶ್ವತ ಅನ್ನಸಂತರ್ಪಣೆ ದಾನಿಗಳ ಸೇವಾರ್ಥದಲ್ಲಿ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ರಾತ್ರಿ 10.ಕ್ಕೆ ಬೈದೇರುಗಳು ಗರೋಡಿ ಇಳಿಯುವುದು, ಸುಡುಮದ್ದು ಪ್ರದರ್ಶನ ನಡೆಯಲಿದೆ.

ಮಾರನೆ ದಿನ ಏ.2 ರಂದು ಧ್ವಜಾವರೋಹಣ, ಕುರುಸಂಬಿಲ ನೇಮ ಭಂಡಾರ ಇಳಿಯುವುದು.