ಗುಜರಾತ್‌ಗೆ ಬಂತು 47,600 ಮೆಟ್ರಿಕ್ ಟನ್ LPG ಹೊತ್ತ `ಜಗ್ ವಸಂತ್’ ಹಡಗು – ಕಹಳೆ ನ್ಯೂಸ್
ಗಾಂಧೀನಗರ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ 47,600 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತ `ಜಗ್ ವಸಂತ್’ ಹಡಗು ಗುಜರಾತ್‌ನ ವಾಡಿನಾರ್ ಬಂದರಿಗೆ ಆಗಮಿಸಿದೆ. ಸುಮಾರು ಒಂದು ತಿಂಗಳ ಕಾಲ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ ಹಡಗುಗಳ ಪೈಕಿ ಇದು ಒಂದು. ಇದೀಗ ಗುಜರಾತ್‌ನ ವಾಡಿನಾರ್ ಬಂದರಿಗೆ ಆಗಮಿಸಿದ್ದು, ಗುರುವಾರ (ಮಾ.26) ತಡರಾತ್ರಿ 47,600 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತುತಂದಿದೆ. ಈ ಮೂಲಕ ದೇಶದಲ್ಲಿ ಉಂಟಾಗುತ್ತಿರುವ ಅನಿಲ ಪೂರೈಕೆ ಒತ್ತಡ ಕಡಿಮೆಯಾಗಲಿದೆ. ಇನ್ನೂ...







