Wednesday, June 17, 2026
ಬೆಂಗಳೂರುರಾಜ್ಯಸುದ್ದಿ

ಸರ್ಕಾರಿ ನೌಕರರ ಕುಟುಂಬಕ್ಕೆ ‘ಗೃಹಲಕ್ಷ್ಮಿ’ ಕಟ್ -ಕಹಳೆ ನ್ಯೂಸ್

ಬೆಂಗಳೂರು: ಗೃಹಲಕ್ಷ್ಮಿ ಗ್ಯಾರಂಟಿ ಹೊಸ ಅರ್ಜಿಗೆ 4 ಪ್ರಶ್ನೆಗಳು ಸೇರ್ಪಡೆಯಾಗಿದ್ದು, ಸರ್ಕಾರಿ ನೌಕರರ ಕುಟುಂಬವನ್ನು ಯೋಜನೆಯಿಂದ ಹೊರಗಿಡುವ ಸಾಧ್ಯತೆ ಇದೆ.

ಜಾಹೀರಾತು

ಗೃಹಲಕ್ಷ್ಮಿ ಯೋಜನೆಯ ಅರ್ಜಿಗೆ ಹೊಸ ನಾಲ್ಕು ಪ್ರಶ್ನೆಗಳನ್ನು ಸೇರಿಸಲಾಗಿದೆ. ಹೊಸ ನಾಲ್ಕು ಪ್ರಶ್ನೆಗಳ ಸೇರ್ಪಡೆ ಮಾಡೋದಕ್ಕೆ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಅರ್ಜಿ ಸಲ್ಲಿಕೆ ಮಾಡುವಾಗ 12 ಪ್ರಶ್ನೆಗಳಿಗೆ ಫಲಾನುಭವಿಗಳು ಉತ್ತರಿಸಬೇಕಿದೆ. ಹೊಸ ನಾಲ್ಕು ಪ್ರಶ್ನೆಗಳ ಮಾಹಿತಿ ‘ಪಬ್ಲಿಕ್ ಟಿವಿ’ಗೆ ಲಭ್ಯ ಆಗಿದೆ. ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಆಗಿದೆ. ಹೊಸ ಅರ್ಜಿ ರಚನೆ ಮಾಡುವಂತೆ ಮುಖ್ಯಮಂತ್ರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಿದ್ದಾರೆ. ಹೀಗಾಗಿ, ಇಲಾಖೆ ಗೃಹಲಕ್ಷ್ಮೀ ಯೋಜನೆಗೆ ಹೊಸ ಅರ್ಜಿ ಸಲ್ಲಿಕೆ ಮಾಡಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಯೋಮೆಟ್ರಿಕ್ ಜೊತೆಗೆ ಸುಮಾರು ಎಂಟರಿಂದ ಹತ್ತು ಪ್ರಶ್ನೆಗಳಿಗೆ ಉತ್ತರವನ್ನ ಫಲಾನುಭವಿಗಳು ಕೊಡಬೇಕಿದೆ. ಈ ಹಿಂದೆ ಆರು ಪ್ರಶ್ನೆಗಳನ್ನ ಕೇಳಲಾಗಿತ್ತು. ಈಗ 12 ಪ್ರಶ್ನೆಗಳಿಗೆ ಫಲಾನುಭವಿಗಳು ಉತ್ತರವನ್ನ ಕೊಡಬೇಕಿದೆ. ಗೃಹಲಕ್ಷ್ಮೀ ಅರ್ಜಿಗೆ ಹೊಸ ನಾಲ್ಕು ಪ್ರಶ್ನೆಗಳನ್ನ ಸೇರಿಸಲಾಗಿದೆ. ಅರ್ಜಿಯಲ್ಲಿ ಹೊಸ ನಾಲ್ಕು ಪ್ರಶ್ನೆ ಸೇರಿಸಿರೋದಾಗಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ‘ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ.