ಪದ್ಯಾಣ ಬ್ರಹ್ಮಕಲಶೋತ್ಸವ : ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ನಡೆದ ಸಮಿತಿ ಸಭೆ – ಕಹಳೆ ನ್ಯೂಸ್
ಶ್ರೀ ಕ್ಷೇತ್ರ ಪದ್ಯಾಣದಲ್ಲಿ ಮಾ.30ರಂದ ನಡೆಯುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ, ಪದ್ಯಾಣಕ್ಕೆ ಏಕಾದಶ ಕಲಶ ತೀರ್ಥಗಳು ಹಾಗೂ ಹಸಿರುವಾಣಿಯ ಭವ್ಯ ಮೆರವಣಿಗೆ ನಡೆಯಲಿದ್ದು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ಸಭೆ ನಡೆಯಿತು. ಉಪ್ಪಿನಂಗಡಿಯಲ್ಲಿ ರಥ ಚಾಲನಾ ಸಮಿತಿ ರಚನೆ ಮಾಡಿದ್ದು, ಸಮಿತಿ ಅಧ್ಯಕ್ಷರಾಗಿ ಉಪ್ಪಿನಂಗಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ನಾಯ್ಕ್, ಸಂಚಾಲಕರಾಗಿ ಸುದರ್ಶನ್ ಉಪ್ಪಿನಂಗಡಿ, ಸಂಯೋಜಕರಾಗಿ ಮಹೇಶ್ ಬಜತ್ತೂರು ಹಾಗೂ ಭಜನಾ ಸಂಕೀರ್ತನೆಗಳ ಸಂಯೋಜಕರಾಗಿ ಉಷಾ ಮುಳಿಯ,...






