
ಮಂಗಳೂರು : ಮಂಗಳೂರು ಜಂಕ್ಷನ್-ಸೂರತ್ ಸಂಚರಿಸುತ್ತಿದ್ದ ವಿಶೇಷ ರೈಲನ್ನು ಖಾಯಂಗೊಳಿಸಲು ರೈಲ್ವೇ ಸಚಿವಾಲಯ ಒಪ್ಪಿಗೆ ನೀಡಿದೆ. ರೈಲಿನ ಸಂಖ್ಯೆಯೂ ಬದಲಾಗಲಿದ್ದು, ನಂ. 19057 ಸೂರತ್ ಮಂಗಳೂರು ಎಕ್ಸ್ ಪ್ರೆಸ್ ಬುಧವಾರ, ರವಿವಾರ ರಾತ್ರಿ 7.35ಕ್ಕೆ ಸೂರತ್‌ನಿಂದ ಹೊರಡಲಿದ್ದು, ಗುರುವಾರ, ಸೋಮವಾರ ಮಂಗಳೂರು ತಲಪಲಿದೆ.
19058 ಮಂಗಳೂರು ಸೂರತ್ ಎಕ್ಸ್‌ಪ್ರೆಸ್ ಗುರುವಾರ, ಸೋಮವಾರ ಹೊರಟು ಶುಕ್ರವಾರ, ಮಂಗಳವಾರ ಸೂರತ್ ತಲುಪಲಿದೆ. ಈ ರೈಲಿಗೆ ಉದ್ಘಾ, ವಲ್ಸಾಡ್, ವಾಪಿ, ಪಾಲ್ಗರ್, ವಸಾಯ್ ರೋಡ್, ಭಿವಂಡಿ ರೋಡ್, ಪನ್ವೆಲ್, ಪೆನ್, ರೋಹ, ಮನ ಗಾಂವ್, ಖೇಡ್, ಚಿಪ್ಪುನ್, ಸಾವರ್ದ, ಸಂಗ ಮೇಶ್ವರ ರೋಡ್, ರತ್ನಗಿರಿ, ರಾಜಾಪುರ್ ರೋಡ್, ವೈಭವವಾಡಿ ರೋಡ್, ಕಂಕಾವಲಿ, ಕುಡಾಳ್, ಸಾವಂತವಾಡಿ ರೋಡ್, ತಿವಿಂ, ಕರ್ಮಾಲಿ, ಮಡಗಾಂವ್, ಕಾನಕೋನ, ಕಾರವಾರ, ಅಂಕೋಲ, ಗೋಕರ್ಣರೋಡ್, ಕುಮಟ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ, ಸುರತ್ಕಲ್‌ನಲ್ಲಿ ನಿಲುಗಡೆ ಇರುತ್ತದೆ.









