Sunday, September 6, 2026

ಸುದ್ದಿ

ಸುದ್ದಿ

ನಿಂತಿದ್ದ ಲಾರಿಗೆ ಕಾರು ಡಿಕ್ಕಿ : ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ – ಕಹಳೆ ನ್ಯೂಸ್

ತಿರುವನಂತಪುರಂ:ನಿಲ್ಲಿಸಿದ್ದ ಗೂಡ್ಸ್ ಲಾರಿಯ ಹಿಂಭಾಗಕ್ಕೆ ಕಾರು(Car) ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಕೇರಳದ(Kerala) ತ್ರಿಶ್ಯೂರು ಜಿಲ್ಲೆಯಲ್ಲಿ ನಡೆದಿದೆ. ಮೃತರ ಪೈಕಿ ಐವರನ್ನು ತಮಿಳುನಾಡಿನ ಸೇಲಂ ಮೂಲದ ವಿಶ್ವ (20), ದಿಂಡಿಗಲ್ ಮೂಲದ ಸೂರ್ಯ (20), ಯುವಸಂಜಿತ್ (20) ಹಾಗೂ ಮಧುರೈ ಮೂಲದ ಸಂತೋಷ್ (20) ಮತ್ತು ಪ್ರಸನ್ನ ಎಂದು ಗುರುತಿಸಲಾಗಿದೆ. ಉಳಿದ ಮೂವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಮೃತರೆಲ್ಲರೂ ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಪಿ.ಎಸ್.ಎಂ....
ಸುದ್ದಿ

ಡಿಜಿಟಲ್ ಯುಗದಲ್ಲಿ ಶಿಕ್ಷಕರ ಸವಾಲು ಮತ್ತು ಬದಲಾವಣೆಯ ಅನಿವಾರ್ಯತೆ – ಕಹಳೆ ನ್ಯೂಸ್

​ನಿಟ್ಟೆ: ಬದಲಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ಮತ್ತು 'ಜೆನ್ ಝೆಡ್' (Gen Z) ಹಾಗೂ 'ಜೆನ್ ಆಲ್ಫಾ' ಪೀಳಿಗೆಯ ಕಲಿಕಾ ಶೈಲಿಗೆ ತಕ್ಕಂತೆ ಶಿಕ್ಷಕರು ತಮ್ಮ ಪಾತ್ರವನ್ನು ಪುನರ್ ವ್ಯಾಖ್ಯಾನಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಡಾ. ಎನ್‌ ಎಸ್‌ ಎಮ್‌ ಪ ಪೂ ಕಾಲೇಜಿನ ಉಪನ್ಯಾಸಕರಾದ ಎಡ್ವರ್ಡ್ ಲಾರ್ಸನ್ ಡಿಸೋಜ ಅಭಿಪ್ರಾಯಪಟ್ಟಿದ್ದಾರೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಇಂಟರ್ನೆಟ್, ಕೃತಕ ಬುದ್ಧಿಮತ್ತೆ (AI) ಮತ್ತು ಸ್ಮಾರ್ಟ್‌ಫೋನ್‌ಗಳು ಕ್ಷಣಾರ್ಧದಲ್ಲಿ ಮಾಹಿತಿಯನ್ನು ಒದಗಿಸುತ್ತವೆ....
ಸುದ್ದಿ

ಯುವ ದಸರಾ ಉದ್ಘಾಟಕರಾಗಿ ನಟ ಪ್ರಭುದೇವಗೆ ಆಹ್ವಾನ – ಕಹಳೆ ನ್ಯೂಸ್

ಮೈಸೂರು: ಈ ಬಾರಿಯ ಮೈಸೂರು ದಸರಾದ  ಸಾಂಸ್ಕೃತಿಕ ಕಾರ್ಯಕ್ರಮ ಯುವ ದಸರಾ ಉದ್ಘಾಟಕರಾಗಿ ನಟ ಪ್ರಭುದೇವಗೆ ಆಹ್ವಾನ ನೀಡಲಾಗಿದೆ. ನಟ ಪ್ರಭುದೇವ ಅವರಿಗೆ ಮೈಸೂರು ಜಿಲ್ಲಾಡಳಿತ ಅಧಿಕೃತ ಆಹ್ವಾನ ಕೊಟ್ಟಿದೆ. ಪೇಟಾ ತೊಡಸಿ, ಶಾಲು-ಹೂವಿನ ಹಾರ ಹಾಕಿ ನಟನಿಗೆ ಗೌರವಪೂರ್ವಕವಾಗಿ ಆಹ್ವಾನ ನೀಡಲಾಗಿದೆ. ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯುವ ದಸರಾ ಒಂದು ಪ್ರಮುಖ ಆಕರ್ಷಣೆ. ಈ ಸಮಾರಂಭದಲ್ಲಿ ಸಿನಿತಾರೆಯರು, ಖ್ಯಾತ ಗಾಯಕರು ಪಾಲ್ಗೊಂಡು ಯುವಜನತೆಗೆ ಮನರಂಜನೆಯ ರಸದೌತಣ ಉಣಬಡಿಸುತ್ತಾರೆ. ವಿವಿಧ...
ಸುದ್ದಿ

ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಹೂವಿನಿಂದ ಕಂಗೊಳಿಸಿದ ಕೃಷ್ಣ ಮಠ – ಕಹಳೆ ನ್ಯೂಸ್

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ  ಹಿನ್ನೆಲೆಯಲ್ಲಿ ಕೃಷ್ಣನ ನಾಡು ಉಡುಪಿಯಲ್ಲಿ ಅಷ್ಟಮಿ ಸಂಭ್ರಮ ಜೋರಾಗಿತ್ತು. ಹಗಲೆಲ್ಲ ಉಪವಾಸವಿದ್ದು ಕೃಷ್ಣದೇವರ ಆರಾಧನೆಯಲ್ಲಿ ಭಕ್ತರು ತೊಡಗಿಸಿಕೊಂಡಿದ್ದರು. ನಗರದಾದ್ಯಂತ ವಿವಿಧ ವೇಷಗಳ ಕಲರವ ಕಂಡುಬಂತು. ಕೃಷ್ಣದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯದ ವಿವಿಧೆಡೆಯಿಂದ ಭಕ್ತರು ಉಡುಪಿಗೆ ಆಗಮಿಸಿ ಕೃಷ್ಣ ದೇವರ ದರ್ಶನ ಪಡೆದರು. ಮಧ್ಯರಾತ್ರಿ 12 ಗಂಟೆ 12 ನಿಮಿಷಕ್ಕೆ ಕೃಷ್ಣದೇವರಿಗೆ ಅರ್ಘ್ಯ ಸಮರ್ಪಣೆ ನಡೆಯಲಿದೆ. ಕೃಷ್ಣ ಮಠದಲ್ಲಿ ಮುದ್ದುಕೃಷ್ಣ ಸ್ಪರ್ಧೆ ಸೇರಿದಂತೆ ವಿವಿಧ ಧಾರ್ಮಿಕ...
ಸುದ್ದಿ

ʻಅಭಿಮನ್ಯುʼ ದಸರೆಯಲ್ಲಿ ಪಾಲ್ಗೊಳ್ಳಲು ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ – ಕಹಳೆ ನ್ಯೂಸ್

ಬೆಂಗಳೂರು/ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ಅಭಿಮನ್ಯು ಆನೆ ಭಾಗವಹಿಸಲು ಕೊನೆಗೂ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಒಟ್ಟಿನಲ್ಲಿ ಕೋಟ್ಯಂತರ ಅಭಿಮಾನಿಗಳ ಆಸೆಯಂತೆ 6 ಬಾರಿ ಅಂಬಾರಿ ಹೊತ್ತ ಅಭಿಮನ್ಯು ಈ ಬಾರಿ ನಿಶಾನೆ ಆನೆಯಾಗಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿದ್ದಾನೆ.   ಪ್ರಕಟಣೆಯಲ್ಲಿ ಏನಿದೆ? ಮೈಸೂರು ದಸರಾ ಕರ್ನಾಟಕದ ನಾಡಹಬ್ಬವಾಗಿದ್ದು, ನಾಡಿನ ಕಲೆ, ಸಂಸ್ಕೃತಿ, ಪರಂಪರೆ...
ಸುದ್ದಿ

ಯೆಮನ್‌ ಹೌತಿಗಳು-ಸೌದಿ ಬೆಂಬಲಿತ ಸರ್ಕಾರಿ ಪಡೆಗಳ ನಡುವೆ ಘರ್ಷಣೆ; 81 ಮಂದಿ ಸಾವು – ಕಹಳೆ ನ್ಯೂಸ್

ಸನಾ: ಯೆಮನ್‌ನ ಹೌತಿಗಳು ಮತ್ತು ಸೌದಿ ಬೆಂಬಲಿತ ಸರ್ಕಾರಿ ಪಡೆಗಳ ನಡುವಿನ ಘರ್ಷಣೆಯಲ್ಲಿ 81 ಜನರು ಸಾವನ್ನಪ್ಪಿದ್ದಾರೆ. ಇರಾನ್ ಬೆಂಬಲಿತ ಬಂಡುಕೋರರು ಕೆಂಪು ಸಮುದ್ರದ ಗಡಿಯಲ್ಲಿರುವ ಪ್ರದೇಶದತ್ತ ಸಾಗುತ್ತಿದ್ದಾರೆ. ಕೆಂಪು ಸಮುದ್ರದ ದಕ್ಷಿಣ ಪ್ರವೇಶದ್ವಾರದಲ್ಲಿರುವ ಕಿರಿದಾದ ಬಾಬ್ ಅಲ್-ಮಂದಾಬ್ ಜಲಸಂಧಿಯ ನಿಯಂತ್ರಣಕ್ಕಾಗಿ ಹೌತಿಗಳು ಕರಾವಳಿ ಪ್ರದೇಶಗಳ ಬಳಿ ರಾಕೆಟ್ ಮತ್ತು ಡ್ರೋನ್ ದಾಳಿ ನಡೆಸಿದ ಬಳಿಕ ಸಂಘರ್ಷ ಭುಗಿಲೆದ್ದಿದೆ. ಇತ್ತೀಚಿನ ವಾರಗಳಲ್ಲಿ ಹೌತಿಗಳು ಕೆಂಪು ಸಮುದ್ರದಲ್ಲಿ ಸೌದಿ ಹಡಗುಗಳ ಮೇಲೆ...
ಸುದ್ದಿ

ಅಕ್ಷಯ ಪದವಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಯ ಗುಣಮಟ್ಟದ ರೋಡ್‌ಮ್ಯಾಪ್  ಕಾರ್ಯಾಗಾರ – ಕಹಳೆ ನ್ಯೂಸ್

ಅಕ್ಷಯ ಪದವಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಯ ಗುಣಮಟ್ಟದ ರೋಡ್‌ಮ್ಯಾಪ್ ಕುರಿತು ವಿಶೇಷ ಕಾರ್ಯಾಗಾರ ನಡೆಯಿತು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಕಲಾವತಿ ಜಯಂತ್ ಅವರು ದೀಪ ಪ್ರಜ್ವಲಿಸುವ  ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಪಿ. ದಯಾನಂದ ಪೈ ಹಾಗೂ ಶ್ರೀ ಪಿ. ಸತೀಶ್ ಪೈ, ಪ್ರಾಂಶುಪಾಲರು, GFGC ಕಾಲೇಜು, ಮಂಗಳೂರು ಅವರು ಮಾತನಾಡಿ, “ಒಳ್ಳೆಯ ನಿರ್ಧಾರ ನಮ್ಮನ್ನು...
ಸುದ್ದಿ

ಬ್ಯಾಡ್ಮಿಂಟನ್ ಪಂದ್ಯಾಟ: ಫಿಲೋಮಿನಾ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ – ಕಹಳೆ ನ್ಯೂಸ್

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ  ಮಂಗಳೂರು ಹಾಗೂ ಅಂಬಿಕಾ ಪ. ಪೂ ಕಾಲೇಜು, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಸೆ 2 ರಂದು ಸುಧಾನ ಸ್ಪೋರ್ಟ್ಸ್ ಕ್ಲಬ್ ಸಾಮೆತಡ್ಕ ಪುತ್ತೂರಿನಲ್ಲಿ ನಡೆದ ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸಂತ ಫಿಲೋಮಿನಾ ಪ. ಪೂ ಕಾಲೇಜಿನ ಬಾಲಕರ ವಿಭಾಗವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ದ್ವಿತೀಯ ವಿಜ್ಞಾನ ವಿಭಾಗದ ಅಲೆನ್ ಪಿ ಜಾನ್ ಪ್ರಥಮ...
1 2 3 4 5 6 3,531
Page 4 of 3531