Recent Posts

Sunday, September 13, 2026
ಉಡುಪಿಜಿಲ್ಲೆಸಂತಾಪಸುದ್ದಿ

ತಾಯಿ ಮಡಿಲಲ್ಲಿದ್ದ ಕಂದಮ್ಮನ ಮೇಲೆ ಬಿದ್ದ ತೆಂಗಿನಕಾಯಿ : ಮಗು ದುರಂತ ಸಾವು – ಕಹಳೆ ನ್ಯೂಸ್

ಉಡುಪಿ: ತಾಯಿಯ ಮಡಿಲಲ್ಲಿದ್ದ ಕಂದಮ್ಮನ ಮೇಲೆ ತೆಂಗಿನಕಾಯಿ ಬಿದ್ದು, ಮಗು ದುರಂತ ಸಾವು ಕಂಡಿರುವ ಘಟನೆ ಉಡುಪಿಯಲ್ಲಿ (Udupi) ನಡೆದಿದೆ.

ಜಾಹೀರಾತು

ಒಂದೂವರೆ ವರ್ಷದ ದಕ್ಷ ಮೃತ ಮಗು. ಬ್ರಹ್ಮಾವರ ತಾಲೂಕು ಚಾಂತಾರು ಹೆರಂಜಾಲು ಗ್ರಾಮದಲ್ಲಿ ಘಟನೆ ನಡೆದಿದೆ. ಕಂದಮ್ಮನ ಅಕಾಲಿಕ ಮರಣಕ್ಕೆ ಗ್ರಾಮ ಕಂಬನಿ ಮಿಡಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಶಾಂತ್ ಮತ್ತು ಸುಚಿತ್ರಾ ದಂಪತಿ ಎರಡನೇ ಪುತ್ರ ದಕ್ಷ. ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ತಾಯಿ ತೆಂಗಿನಮರದ ಕೆಳಗೆ ಕುಳಿತಿದ್ದರು. ಈ ವೇಳೆ, ಅಚಾನಕ್ ಆಗಿ ತೆಂಗಿನಕಾಯಿ ಉದುರಿದೆ. ಕಾಯಿ ತಲೆ ಮೇಲೆ ಬಿದ್ದು ಮಗು ತೀವ್ರವಾಗಿ ಗಾಯಗೊಂಡಿತ್ತು.

ಸ್ಥಳೀಯರ ನೆರವಿನಿಂದ ಮಗುವನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಮಗು ಮೃತಪಟ್ಟಿದೆ. ಕಂದಮ್ಮನ ಅಕಾಲಿಕ ಮರಣಕ್ಕೆ ಇಡೀ ಗ್ರಾಮದ ಜನತೆ ಕಂಬನಿ ಮಿಡಿದಿದ್ದಾರೆ. ಘಟನೆ ಕುರಿತು ಬ್ರಹ್ಮಾವರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.