Recent Posts

Sunday, September 13, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ ಪ್ರೌಢಶಾಲಾ ವಿಭಾಗದ ಶಾಲಾ ಮಂತ್ರಿ ಮಂಡಲ ರಚನೆ -ಕಹಳೆ ನ್ಯೂಸ್

ಪಟ್ಟೆ ಬಡಗನ್ನೂರು: ಪ್ರತಿಭಾ ಪ್ರೌಢಶಾಲೆ ಪಟ್ಟೆ ಇದರ 2026-27 ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು. ಶಾಲಾ ಮುಖ್ಯಮಂತ್ರಿ ಯಾಗಿ 10ನೇ ತರಗತಿಯ ನಿಶಾಂತ್, ಉಪಮುಖ್ಯಮಂತ್ರಿಯಾಗಿ 9ನೇ ತರಗತಿಯ ಸೂರಜ್ ಪಿ.ಎಸ್ ಆಯ್ಕೆಯಾಗಿರುತ್ತಾರೆ.
ಶಾಲಾ ವಿರೋಧ ಪಕ್ಷದ ನಾಯಕನಾಗಿ 9ನೇ ತರಗತಿಯ ವರುಣ್ ಕುಮಾರ್, ಗೃಹ ಮಂತ್ರಿಯಾಗಿ 9ನೇ ತರಗತಿಯ ಚರಣ್, 8ನೇ ತರಗತಿಯ ಭುವನ್ , ಸಾಂಸ್ಕೃತಿಕ ಮಂತ್ರಿಯಾಗಿ 9ನೇ ತರಗತಿಯ ಅಹನ, 8ನೇ ತರಗತಿಯ ಶ್ರೀಕಲಾ, ಆರೋಗ್ಯಮಂತ್ರಿಯಾಗಿ 9ನೇ ತರಗತಿ ದೃತಿ ರೈ, 9ನೇ ತರಗತಿ ಪ್ರತೀಕ್, ಕ್ರೀಡಾಮಂತ್ರಿಯಾಗಿ 9ನೇ ತರಗತಿಯ ಪ್ರತ್ವಿಶ್, 8ನೇ ತರಗತಿ ಆದಿ, ಅಕ್ಷರ ದಾಸೋಹ ಮಂತ್ರಿಯಾಗಿ 9ನೇ ತರಗತಿಯ ಲಾವಿಕ ರೈ, 8ನೇ ತರಗತಿಯ ಶನ್ಮಿತ, ಕೃಷಿ ಮಂತ್ರಿಯಾಗಿ 9ನೇ ತರಗತಿ ದೀವಿತ್ ಎಸ್.ಪಿ ಮತ್ತು ನಿಕ್ಷಿತ್ 9ನೇ ತರಗತಿ ಆಯ್ಕೆಯಾಗಿರುತ್ತಾರೆ.

ಜಾಹೀರಾತು

ಮತ ಪೆಟ್ಟಿಗೆಯ ಜೊತೆಗೆ ಆಧುನಿಕ ತಂತ್ರಜ್ಞಾನದ ಡಿಜಿಟಲ್ ಇವಿಎಂ ಬಳಸಿ ವಿದ್ಯಾರ್ಥಿಗಳು ಡಿಜಿಟಲ್ ಮತದಾನ ಮಾಡಿದ್ದು ಚುನಾವಣೆಯ ವಿಶೇಷವಾಗಿತ್ತು. ಪ್ರೌಢಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಸುಮನ ಮಾತಾಜಿ ಅವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರೌಢಶಾಲಾ ಎಲ್ಲಾ ಶಿಕ್ಷಕರು ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು