Thursday, June 11, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಮರಣದಂಡನೆ ಪ್ರಕರಣಗಳ ಪರಿಶೀಲನೆಗೆ ವಿಶೇಷ ಸಮಿತಿ ರಚಿಸಿದ ಹೈಕೋರ್ಟ್ : ಡಾ. ಅರುಣ್‌ಶ್ಯಾಮ್‌ ನೇಮಕ – ಕಹಳೆ ನ್ಯೂಸ್

ಪುತ್ತೂರು: ಮರಣದಂಡನೆ ವಿಧಿಸಲಾದ ಪ್ರಕರಣಗಳ ದೃಢೀಕರಣ ಮತ್ತು ಮೇಲ್ಮನವಿ ವಿಚಾರಣೆ ವೇಳೆ ಕಾನೂನು ನೆರವು ಒದಗಿಸಲು ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ವಕೀಲ ಡಾ. ಅರುಣ್‌ಶ್ಯಾಮ್ ಪುತ್ತೂರು ನೇತೃತ್ವದಲ್ಲಿ ವಕೀಲರ ವಿಶೇಷ ಸಮಿತಿ ರಚಿಸಿದೆ.

ಜಾಹೀರಾತು

ಸುಪ್ರೀಂಕೋರ್ಟ್ ಮಾನದಂಡಗಳಂತೆ ರಚಿತವಾದ ಸಮಿತಿಯಲ್ಲಿ ಪದಾಂಕಿತ ಹಿರಿಯ ವಕೀಲರಾದ ಅರುಣ್ ಶ್ಯಾಮ್ ಅವರ ಜೊತೆ ನ್ಯಾಯವಾದಿಗಳಾದ ವೆಂಕಟೇಶ್ ಪಿ. ದಳವಾಯಿ ಮತ್ತು ಡಿ. ನಾಗರಾಜ ರೆಡ್ಡಿ ಅವರು ಕಾರ್ಯ ನಿರ್ವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಿಹಾರದ ಬಕ್ಸರ್ ಜೈಲಿನ ಅಮನ್ ಸಿಂಗ್ ಮತ್ತು ಸೋನಲ್ ಸಿಂಗ್ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಮರಣದಂಡನೆ ಪ್ರಕರಣಗಳಲ್ಲಿ ಅಪರಾಧಿಗಳ ಹಿನ್ನೆಲೆ, ಮಾನಸಿಕ ಸ್ಥಿತಿ, ಸುಧಾರಣೆಯ ಸಾಧ್ಯತೆಗಳ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಕೇವಲ ಅಪರಾಧದ ಭೀಕರತೆಯನ್ನು ಪರಿಗಣಿಸಿ ಪ್ರತಿಕಾರದ ಧೋರಣೆಯಿಂದ ಮರಣದಂಡನೆ ವಿಧಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ತಪ್ಪು ತೀರ್ಪಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿ ಮಾರ್ಗಸೂಚಿ ಹೊರಡಿಸಿತ್ತು. ಶಿಕ್ಷೆ ಪ್ರಮಾಣ ಪ್ರಕಟಿಸುವ ಮುನ್ನವೇ ಅಪರಾಧಿಯ ಸಾಮಾಜಿಕ, ಆರ್ಥಿಕ ಹಿನ್ನೆಲೆ ಹಾಗೂ ಸುಧಾರಣೆಯ ಸಾಧ್ಯತೆಗಳ ಬಗ್ಗೆ ವಿಚಾರಣಾ ನ್ಯಾಯಾಲಯಗಳು ಕಡ್ಡಾಯವಾಗಿ ವರದಿ ಪಡೆಯಬೇಕು. ವಿಚಾರಣಾ ನ್ಯಾಯಾಲಯ ವರದಿ ಪಡೆಯದಿದ್ದರೆ ಹೈಕೋರ್ಟ್‌ಗಳು ಮರಣದಂಡನೆ ದೃಢೀಕರಣದ ಆರಂಭಿಕ ಹಂತದಲ್ಲೇ ವರದಿ ತರಿಸಿಕೊಳ್ಳಬೇಕು. ಹೈಕೋರ್ಟ್‌ಗೆ ಬರುವ ಮರಣದಂಡನೆ ಪ್ರಕರಣಗಳಿಗೆ ಒಬ್ಬರು ಪದಾಂಕಿತ ಹಿರಿಯ ವಕೀಲರು ಮತ್ತು ಕನಿಷ್ಠ 7 ವರ್ಷ ಅನುಭವದ ಇಬ್ಬರು ವಕೀಲರ ಸಮಿತಿ ರಚಿಸಬೇಕು. ಸಮಿತಿಗೆ ಸಂಪೂರ್ಣ ದಾಖಲೆ ನೀಡಿ, ಆಳವಾದ ಸಂಶೋಧನೆ ನಡೆಸಿ ವರದಿ ನೀಡಲು ಕಾಲಾವಕಾಶ ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಮಾರ್ಗಸೂಚಿ ಹೊರಡಿಸಿತ್ತು. ಅಪರಾಧಿಯ ಪೂರ್ವಾಪರ ವಿವರ, ಆತನ ಹಿನ್ನೆಲೆ ಸಂಗ್ರಹಿಸಲಿರುವ ಸಮಿತಿ ಯಾವುದೇ ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥನಿಗೆ ಮರಣ ದಂಡನೆ ವಿಧಿಸಲೇಬೇಕಾ ಅಥವಾ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದರೆ ಸಾಕಾ ಎಂದೂ ನ್ಯಾಯಾಲಯಕ್ಕೆ ಮಾಹಿತಿ ನೀಡಲಿದೆ. ಇವರು ನೀಡುವ ಮಾಹಿತಿಯ ಆಧಾರದಲ್ಲಿ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ.