ಹಠಾತ್ ಬಿರುಗಾಳಿ ಸಹಿತ ಮಳೆ : ದೆಹಲಿ ಏರ್‌ಪೋರ್ಟ್‌ನಲ್ಲಿ 3 ಏರ್ ಇಂಡಿಯಾ ವಿಮಾನಗಳು ಜಖಂ -ಕಹಳೆ ನ್ಯೂಸ್
ನವದೆಹಲಿ: ಹಠಾತ್ ಬಿರುಗಾಳಿ ಸಹಿತ ಭಾರೀ ಮಳೆಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ಏರ್ ಇಂಡಿಯಾ ವಿಮಾನಗಳು ಜಖಂಗೊಂಡಿವೆ. ಬಿರುಗಾಳಿಗೆ ಸಿಕ್ಕಿ ರನ್‌ವೇನಲ್ಲಿದ್ದ ಏಣಿಗಳು ಮತ್ತು ಇತರ ತಾಂತ್ರಿಕ ಉಪಕರಣಗಳು ವಿಮಾನಗಳಿಗೆ ಡಿಕ್ಕಿಯಾದ ಪರಿಣಾಮ ಏರ್ ಇಂಡಿಯಾ ಸಂಸ್ಥೆಯ ಮೂರು ವಿಮಾನಗಳು ಜಖಂಗೊಂಡಿವೆ. ಭಾನುವಾರ (ಜೂ.7) ಸಂಜೆ 4:40ರ ಸುಮಾರಿಗೆ ವಿಮಾನ ನಿಲ್ದಾಣದ ಟರ್ಮಿನಲ್ 2ರ ಬಳಿ ಘಟನೆ ನಡೆದಿದೆ. ಏಕಾಏಕಿ ಬೀಸಿದ ಬಿರುಗಾಳಿಯ ರಭಸಕ್ಕೆ...







