Recent Posts

Sunday, June 7, 2026
ದೆಹಲಿರಾಜ್ಯಸುದ್ದಿ

ದೆಹಲಿ ರೆಸ್ಟೋರೆಂಟ್‌ನಲ್ಲಿ ಅಗ್ನಿ ದುರಂತ : ಮತ್ತೊಬ್ಬ ಆರೋಪಿ ಬಂಧನ -ಕಹಳೆ ನ್ಯೂಸ್

ನವದೆಹಲಿ: ಇತ್ತೀಚೆಗೆ ದೆಹಲಿಯ ಮಾಳವೀಯ ನಗರದ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನ ಪೊಲೀಸರು  ಬಂಧಿಸಿದ್ದಾರೆ.
ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ದಿಲ್ಶಾದ್ ಗಾರ್ಡನ್ ನಿವಾಸಿ ಕೇಶವ್ ನೇಗಿ (65) ಬಂಧಿತ ಆರೋಪಿ. ಈ ಅಗ್ನಿ ದುರಂತಕ್ಕೆ ಹೋಟೆಲ್‌ನ ಅಡುಗೆಯವರ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದ್ದರಿಂದ ಅಡುಗೆ ಕೆಲಸಗಾರನನ್ನ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು

ಏನಾಗಿತ್ತು ಆ ದಿನ?
ಇದೇ ತಿಂಗಳ ಜೂನ್ 3 ರಂದು ಮಾಳವಿಯ ನಗರದ ಹೌಜ್‌ರಾಣಿ ಪ್ರದೇಶದ ಹೋಟೆಲ್‌ವೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಬೆಂಕಿಯ ಕೆನ್ನಾಲಿಗೆ ಇಡೀ ಹೋಟೆಲ್‌ಗೆ ವ್ಯಾಪಿಸಿ 20 ಮಂದಿ ಸಾವನ್ನಪ್ಪಿದ್ದರು. ಬಳಿಕ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಹೋಟೆಲ್ ಸಿಬ್ಬಂದಿಯಿಂದ ಸುರಕ್ಷತಾ ಲೋಪ ನಡೆದಿರುವುದಾಗಿ ಕಂಡುಬಂದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೋಟೆಲ್ ಮಾಲೀಕ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‌ಓಸಿ) ಪಡೆಯದೇ ಹೋಟೆಲ್ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಅಗ್ನಿ ಅವಘಡ ನಡೆದ ಕಟ್ಟಡದಿಂದ ಹೊರಬರಲು ಕೇವಲ ಒಂದೇ ಒಂದು ಮಾರ್ಗ ಮಾತ್ರ ಇದೆ. ಹಾಗಾಗಿ ಕೂಡಲೇ ಬೆಂಕಿಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟಿರುವಲ್ಲಿ 21 ಜನರಲ್ಲಿ 10 ಜನ ಭಾರತೀಯರು. ಒಂಬತ್ತು ಜನ ಆಫ್ರಿಕಾ ಹಾಗೂ ಇಬ್ಬರು ತುರ್ಕಮೆನಿಸ್ತಾನ್ ನಾಗರಿಕರು ಎಂದು ಗುರುತಿಸಲಾಗಿದೆ.