ಸಾಮಾನ್ಯಳಂತೆ ಪಬ್ಗೆ ತೆರಳಿ ಬೃಹತ್ ಸೆಕ್ಸ್ ದಂಧೆ ಜಾಲ ಬಯಲಿಗೆಳೆದ ಐಪಿಎಸ್ ಅಧಿಕಾರಿ -ಕಹಳೆ ನ್ಯೂಸ್
ಹೈದರಾಬಾದ್: ಕಾನೂನು ಸುವ್ಯವಸ್ಥೆ ಕಾಪಾಡಲು ಕೆಲವೊಮ್ಮೆ ಅಧಿಕಾರಿಗಳೇ ರಿಯಾಲಿಟಿ ಚೆಕ್ಗೆ ಇಳಿಯುತ್ತಾರೆ. ಅನೇಕ ಸಂದರ್ಭದಲ್ಲಿ ಖುದ್ದು ಅಧಿಕಾರಿಗಳೇ ಮಾರುವೇಷದಲ್ಲಿ ಹೋಗಿ ದೊಡ್ಡದೊಡ್ಡ ಪ್ರಕರಣಗಳನ್ನ ಬಯಲಿಗೆಳೆದಿರುವ ಉದಾಹರಣೆಗಳಿವೆ. ಹೈದರಾಬಾದ್ನಲ್ಲಿ ನಡೆದ ಘಟನೆ ಇದಕ್ಕೆ ತಾಜಾ ಉದಾಹರಣೆಯಾಗಿದೆ. ಹೈದರಾಬಾದ್ (Hyderabad) ನಗರದ ಖಾಸಗಿ ಪಬ್ನಲ್ಲಿ ನಡೆಯುತ್ತಿದ್ದ ಸೆಕ್ಸ್ ದಂಧೆಯನ್ನ (sex rocket) ಬಯಲಿಗೆಳೆಯಲು ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ. ಸಾಮಾನ್ಯ ಮಹಿಳೆಯಂತೆ ಪಬ್ಗೆ ತೆರಳಿ ರಹಸ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ....







