ಬ್ರೇಕಪ್‌ಗೆ ನಿರ್ಧರಿಸಿದ್ದಕ್ಕೆ ಕೊಲೆ ಶಂಕೆ – ಪ್ರಿಯತಮೆ ಸಾವು, ಭಾರತೀಯ ಮೂಲದ ಪ್ರಿಯಕರ ಅರೆಸ್ಟ್ -ಕಹಳೆ ನ್ಯೂಸ್
ವಾಷಿಂಗ್ಟನ್: ಅಮೆರಿಕದ ಅರಿಝೋನಾದಲ್ಲಿ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಭಾರತೀಯ ಮೂಲದ ಪ್ರಿಯಕರನನ್ನು ಪೊಲೀಸರು ಜರ್ಮನಿಯಲ್ಲಿ ಬಂಧಿಸಿದ್ದಾರೆ. ಟಕ್ಸನ್‌ನಲ್ಲಿರುವ ಅರಿಝೋನಾ ವಿಶ್ವವಿದ್ಯಾಲಯದ ಸಮೀಪದ ಅಪಾರ್ಟ್ಮೆಂಟ್‌ನಲ್ಲಿ ಕಾಲೇಜು ವಿದ್ಯಾರ್ಥಿನಿ ಜುಲಿಸ್ಸಾ ರೂಬಿ ಸಲಾಜರ್ ಮೃತದೇಹ ಪತ್ತೆಯಾಗಿತ್ತು. ಆಕೆಯ ಪ್ರಿಯಕರ ಭಾರತೀಯ ಮೂಲದ ವರುಣ್ ಬಚ್ಚಿಗಾರಿ ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿತ್ತು. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಸದ್ಯ ಬಂಧಿಸಲಾಗಿದೆ. ವಿದ್ಯಾರ್ಥಿನಿಯ ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ...







