Monday, June 15, 2026

ರಾಜ್ಯ

ದೆಹಲಿರಾಜ್ಯಸುದ್ದಿ

ದೆಹಲಿಗೆ ಸಚಿವರ ದಂಡು : ಮುಖ್ಯಮಂತ್ರಿ ಗೊಂದಲ ಇತ್ಯರ್ಥಪಡಿಸಲು ಸಚಿವರ ಒತ್ತಡ -ಕಹಳೆ ನ್ಯೂಸ್

ನವದೆಹಲಿ: ಪಂಚರಾಜ್ಯಗಳ ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಿದೆ. ಪ್ರಮುಖ ಸಚಿವರು, ನಾಯಕರು ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ನಾಯಕರಿಗೆ ಗೊಂದಲ ಇತ್ಯರ್ಥಪಡಿಸಲು ಒತ್ತಡ ಹೇರುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಸಚಿವರಾದ ಸತೀಶ್ ಜಾರಕಿ‌ಹೊಳಿ, ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಳೆದ ಏಳೆಂಟು ತಿಂಗಳಿಂದ ಮುಖ್ಯಮಂತ್ರಿ ಬದಲಾವಣೆ ವಿಚಾರ...
ಮುಂಬೈರಾಜ್ಯಸುದ್ದಿ

ಕಲ್ಮಾ ಪಠಿಸದ ಇಬ್ಬರು ಹಿಂದೂಗಳಿಗೆ ಚಾಕು ಇರಿದ ದುಷ್ಕರ್ಮಿ -ಕಹಳೆ ನ್ಯೂಸ್

ಮುಂಬೈ: ಇಲ್ಲಿನ  ಮೀರಾ ರಸ್ತೆಯಲ್ಲಿ ಇಂದು (ಏ.28) ಮುಂಜಾನೆ ಪಹಲ್ಗಾಮ್‌ ಮಾದರಿಯ ದಾಳಿ  ನಡೆದಿದೆ. ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹಿಂದುಗಳು ಕಲ್ಮಾ ಪಠಿಸದೇ ಇದ್ದಿದ್ದಕ್ಕೆ ದುಷ್ಕರ್ಮಿಯೊಬ್ಬ ಚಾಕು ಇರಿದಿದ್ದಾನೆ. ಚಾಕು ಇರಿಯುವ ಮುನ್ನ ಧರ್ಮ ಕೇಳಿ, ಕಲ್ಮಾ  ಪಠಿಸಲು ಸೂಚಿಸಿದ್ದ ಎಂದು ವರದಿಯಾಗಿದೆ. ಚಾಕು ಇರಿತಕ್ಕೊಳಗಾದವರನ್ನು ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋತೋ ರಮೇಶ್ ಸೇನ್ ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿ ಜೈಬ್ ಜುಬೈರ್ ಅನ್ಸಾರಿ (31)...
ಬೆಂಗಳೂರುರಾಜ್ಯಸುದ್ದಿ

ರಸ್ತೆಯಲ್ಲಿ ನಿಂತು ವೇಶ್ಯವಾಟಿಕೆಗೆ ಪ್ರಚೋದನೆ : ಬೆಂಗ್ಳೂರಲ್ಲಿ 6 ವಿದೇಶಿ ಮಹಿಳೆಯರು ವಶಕ್ಕೆ-ಕಹಳೆ ನ್ಯೂಸ್

ಬೆಂಗಳೂರು: ನಗರದ ಕೋರಮಂಗಲ  ಚೆಕ್‌ಪೋಸ್ಟ್‌ ಬಳಿ ರಸ್ತೆಯಲ್ಲಿ ನಿಂತು ವೇಶ್ಯವಾಟಿಕೆಗೆ ಪ್ರಚೋದನೆ ನೀಡುತ್ತಿದ್ದ 6 ವಿದೇಶಿ ಮಹಿಳೆಯರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಸ್ತೆಯಲ್ಲಿ ನಿಂತು ಆರು ಮಹಿಳೆಯರು ಪುರುಷರನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ. 6 ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ವಿದೇಶಿ ಮಹಿಳೆಯರ ಬಳಿ ಇರುವ ಪಾಸ್‌ಪೋರ್ಟ್, ವೀಸಾ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ಕೋರಮಂಗಲ ಪೊಲೀಸ್...
ರಾಜ್ಯಸುದ್ದಿ

ಇಂಡೋನೇಷ್ಯಾದಲ್ಲಿ ಎರಡು ರೈಲುಗಳ ನಡುವೆ ಭೀಕರ ಅಪಘಾತ : 7 ಪ್ರಯಾಣಿಕರು ಸಾವು, 81 ಮಂದಿಗೆ ಗಾಯ-ಕಹಳೆ ನ್ಯೂಸ್

ಜಕಾರ್ತಾ: ಇಂಡೋನೇಷ್ಯಾದ  ಜಕಾರ್ತಾ ಹೊರವಲಯದಲ್ಲಿ ಎರಡು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 81 ಮಂದಿ ಗಾಯಗೊಂಡಿದ್ದಾರೆ. ಜಕಾರ್ತಾ ಹೊರವಲಯದ ಬೆಕಾಸಿಯಲ್ಲಿ  ಸೋಮವಾರ ತಡರಾತ್ರಿ ಪ್ರಯಾಣಿಕ ರೈಲು ಹಾಗೂ ಮತ್ತೊಂದು ರೈಲಿನ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಇನ್ನೂ ಹಲವು ಪ್ರಯಾಣಿಕರು ರೈಲಿನೊಳಗೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಲೆವೆಲ್ ಕ್ರಾಸಿಂಗ್‌ನಲ್ಲಿ ಟ್ಯಾಕ್ಸಿಯೊಂದು ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲು ಹಳಿಯಲ್ಲಿ ನಿಂತಿತ್ತು....
ಬೆಂಗಳೂರುರಾಜ್ಯಸುದ್ದಿ

ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಅಗ್ನಿ ಅವಘಡ : ಗೋಡೆ ಹಾರಿ ಜೀವ ಉಳಿಸಿಕೊಂಡ ಬೆಂಗಳೂರಿನ ಪಿಜಿ ಯುವತಿಯರು -ಕಹಳೆ ನ್ಯೂಸ್

ಬೆಂಗಳೂರು: ರಾಜಧಾನಿಯ ನಂದಿನಿ ಲೇಔಟ್‌ನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ  ಅವಘಡದಲ್ಲಿ ಪ್ಲಾಸ್ಟಿಕ್ ಗೋಡೌನ್‌ವೊಂದು ಸಂಪೂರ್ಣ ಭಸ್ಮವಾಗಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದ ಲೇಡಿಸ್ ಪಿಜಿಗೂ ಹಬ್ಬಿದ ಪರಿಣಾಮ ಯುವತಿಯರು ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ನಂದಿನಿ ಲೇಔಟ್ ವ್ಯಾಪ್ತಿಯ ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್ ವಸ್ತುಗಳಿದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಮನೆಗಳಿಗೆ ವ್ಯಾಪಿಸಿದೆ. ಬೆಂಕಿಯ ತೀವ್ರತೆಗೆ ಮನೆಯ ಮುಂಭಾಗದ ಮರಗಳು ಹಾಗೂ ಕಬ್ಬಿಣದ ಗೇಟ್‌ಗಳು ಕೂಡ...
ಬೆಂಗಳೂರುರಾಜ್ಯಸುದ್ದಿ

ರಾಜ್ಯದ ಎಲ್ಲಾ ಶಾಲೆಗಳಲ್ಲಿ ನ್ಯೂಸ್ ಪೇಪರ್ ಓದುವುದು ಇನ್ನು ಕಡ್ಡಾಯ -ಕಹಳೆ ನ್ಯೂಸ್

ಬೆಂಗಳೂರು: ಮಕ್ಕಳಲ್ಲಿ (Students) ಸಾಮಾನ್ಯ ಜ್ಞಾನ ಹೆಚ್ಚಿಸಲು ಮತ್ತು ಅವರನ್ನು ಇತ್ತೀಚಿನ ಸುದ್ದಿಗಳ ಬಗ್ಗೆ ತಿಳಿದುಕೊಳ್ಳುವಂತೆ ಮಾಡಲು, ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಶಾಲೆಗಳಲ್ಲಿ ನ್ಯೂಸ್ ಪೇಪರ್ (News Paper) ಓದುವುದನ್ನು ಕಡ್ಡಾಯಗೊಳಿಸಿದೆ. ಈ ಕುರಿತು ಇಲಾಖೆಯು ಅಧಿಕೃತ ಸುತ್ತೋಲೆಯನ್ನು ಹೊರಡಿಸಿದೆ. ಪ್ರಾರ್ಥನೆ ಮುಗಿದ ತಕ್ಷಣ, ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ದಿನಪತ್ರಿಕೆಗಳನ್ನು ಓದಿಸುವುದು ಕಡ್ಡಾಯವಾಗಿದೆ. ಈ ನಿಯಮವು ರಾಜ್ಯದ (Karnataka) ಸರ್ಕಾರಿ, ಅನುದಾನಿತ, ಖಾಸಗಿ ಮತ್ತು...
ಬೆಂಗಳೂರುರಾಜ್ಯಸುದ್ದಿ

ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ : ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌  -ಕಹಳೆ ನ್ಯೂಸ್

ಬೆಂಗಳೂರು: ವರನಟ ಡಾ.ರಾಜ್‌ ಕುಮಾರ್ ಸಮಾಧಿಗೆ ಸರ್ಕಾರ ಜಾಗ ಕೊಟ್ಟಿದ್ದರ ಬಗ್ಗೆ ವಿವಾದಾತ್ಮಕ ಪೋಸ್ಟ್‌ ಮಾಡಿದ್ದ ನಟ ಚೇತನ್‌  ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ನನ್ನ ಹೇಳಿಕೆಯಿಂದ ಯಾರದಾದ್ರೂ ಮನಸ್ಸಿಗೆ ನೋವು ಆಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಕ್ಷಮೆನೂ ಕೇಳುತ್ತೇನೆ, ಯಾರಿಗೂ ನೋವು ಮಾಡುವ ಉದ್ದೇಶ ನನಗಿರಲಿಲ್ಲ. ನಾನು ಸಹ ರಾಜ್ ಕುಮಾರ್ ಅಭಿಮಾನಿ ಎಂದಿದ್ದಾರೆ. ನಟ ಚೇತನ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿನಾ? ಅಂತ...
ದೆಹಲಿರಾಜ್ಯಸುದ್ದಿ

ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ: ಮೋದಿ -ಕಹಳೆ ನ್ಯೂಸ್

ನವದೆಹಲಿ: ವಾಷಿಂಗ್ಟನ್‌ನ  ಹಿಲ್ಟನ್ ಹೋಟೆಲ್‌ನಲ್ಲಿ  ಡೊನಾಲ್ಡ್ ಟ್ರಂಪ್  ಭಾಗವಹಿಸಿದ್ದ ಡಿನ್ನರ್ ಕಾರ್ಯಕ್ರದಲ್ಲಿ ಗುಂಡಿನ ದಾಳಿ ನಡೆದ ಘಟನೆ ಕುರಿತು ಪ್ರಧಾನಿ ಮೋದಿ  ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ ಎಂದಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ವಾಷಿಂಗ್ಟನ್ ಡಿಸಿ ಹೋಟೆಲ್‌ನಲ್ಲಿ ನಡೆದ ಭದ್ರತಾ ಲೋಪದ ಘಟನೆಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯ ಮತ್ತು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ನಿರಾಳವಾಯಿತು. ಅವರ ಸುರಕ್ಷತೆ...
1 17 18 19 20 21 299
Page 19 of 299