Monday, April 27, 2026
ಬೆಂಗಳೂರುರಾಜ್ಯಸುದ್ದಿ

ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ : ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌  -ಕಹಳೆ ನ್ಯೂಸ್

ಬೆಂಗಳೂರು: ವರನಟ ಡಾ.ರಾಜ್‌ ಕುಮಾರ್ ಸಮಾಧಿಗೆ ಸರ್ಕಾರ ಜಾಗ ಕೊಟ್ಟಿದ್ದರ ಬಗ್ಗೆ ವಿವಾದಾತ್ಮಕ ಪೋಸ್ಟ್‌ ಮಾಡಿದ್ದ ನಟ ಚೇತನ್‌  ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ.

ನನ್ನ ಹೇಳಿಕೆಯಿಂದ ಯಾರದಾದ್ರೂ ಮನಸ್ಸಿಗೆ ನೋವು ಆಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಕ್ಷಮೆನೂ ಕೇಳುತ್ತೇನೆ, ಯಾರಿಗೂ ನೋವು ಮಾಡುವ ಉದ್ದೇಶ ನನಗಿರಲಿಲ್ಲ. ನಾನು ಸಹ ರಾಜ್ ಕುಮಾರ್ ಅಭಿಮಾನಿ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಟ ಚೇತನ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿನಾ? ಅಂತ ಪ್ರಶ್ನೆ ಮಾಡಿದ್ದರು. 21ನೇ ಶತಮಾನದಲ್ಲಿ ಪ್ರಮುಖ ಹೋರಾಟವೇ ಭೂಮಿಯಾಗಿದೆ. ಸರ್ಕಾರ ಅದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಉಪಯೋಗಕ್ಕೆ ಹಂಚಬೇಕು. ಮತಗಳ ಲಾಭದ ಉದ್ದೇಶದಿಂದ ಹಂಚಬಾರದು ಎಂದು ಪೋಸ್ಟ್ ಮಾಡಿದ್ದರು.

ಚೇತನ್ ಪೋಸ್ಟ್‌ನಿಂದ ಡಾ. ರಾಜ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ನಿರ್ಮಾಪಕ ಸಾರಾ ಗೋವಿಂದು, ಫಿಲ್ಮ್ ಚೇಂಬರ್ ಅಧ್ಯಕ್ಷೆ-ನಟಿ ಜಯಮಾಲ, ಹಿರಿಯ ನಟ ಸುಂದರ್‌ ರಾಜ್ ಅವರು ಚೇತನ್ ವಿರುದ್ಧ ಕೆಂಡಕಾರಿದ್ದರು. ಇನ್ನು, ಡಾ.ರಾಜ್‍ಕುಮಾರ್ ಸೇನೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಅಲ್ಲದೇ ನಿರ್ಮಾಪಕ ಸಾರಾ ಗೋವಿಂದು ಸೇರಿದಂತೆ ಹಲವಾರು ಅಭಿಮಾನಿಗಳು ಚೇತನ್‌ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು.