Recent Posts

Saturday, May 9, 2026

ಪ್ರಾದೇಶಿಕ

ಸುಳ್ಯ

ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಮೋಹನ್ ಜ್ಯುವೆಲ್ಲರಿ ಮಾರ್ಟ್‍ಗೆ ನುಗ್ಗಿದ ಕಳ್ಳರು ; ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಸಿಸಿ ಕ್ಯಾಮರಾ ಕಳವು-ಕಹಳೆ ನ್ಯೂಸ್

ಸುಳ್ಯ : ಬುಧವಾರ ರಾತ್ರಿ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಂಗಡಿ ಮಾಲಕರು ಮತ್ತು ಪೋಲೀಸರು ಅಂಗಡಿ ಬಾಗಿಲು ತೆರೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುಮಾರು 50 ಸಾವಿರ ನಗದು ಹಾಗೂ 10 ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನ ಕಳವಾಗಿರುವುದು ಬೆಳಕಿಗೆ ಬಂದಿದೆ. ಇನ್ನು...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಇತಿಹಾಸ ಪ್ರಸಿದ್ಧ ಹತ್ತೂರ ಒಡೆಯ ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವರ ಜಾತ್ರಾಮಹೋತ್ಸವಕ್ಕೆ ಗೊನೆ ಮುಹೂರ್ತ ; ಕೋವಿಡ್ – 19 ನಿಯಮಾವಳಿಯಂತೆ ನಡೆಯಲಿದೆ ಜಾತ್ರೋತ್ಸವ – ಕಹಳೆ ನ್ಯೂಸ್

ಪುತ್ತೂರು : ಇತಿಹಾಸ ಪ್ರಸಿದ್ಧ ಹತ್ತೂರ ಒಡೆಯ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಏ.1 ( ಇಂದು ) ರಂದು ಗೊನೆ ಮುಹೂರ್ತ ನಡೆಯಿತು.     ದೇವಸ್ಥಾನದ ಎದುರು ಭಾಗದ ಕಂಬಳಕೋಡಿ ಮೋನಪ್ಪ ಸಪಲ್ಯರವರ ತೋಟದಲ್ಲಿ ಗೊನೆಗೆ ಪೂಜೆ ನೆರವೇರಿಸಿ, ದೇವಸ್ಥಾನದ ಪ್ರಧಾನ ಅರ್ಚಕರಾದ ವಿ. ಎಸ್ ಭಟ್ ರವರು ಗೊನೆ ಮುಹೂರ್ತ ನಡೆಸಿಕೊಟ್ಟರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ ಮುಳಿಯ, ವ್ಯವಸ್ಥಾಪನಾ...
ಬಂಟ್ವಾಳ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮವೊಂದರಲ್ಲೇ 33 ಮನೆಗಳನ್ನು ಜಖಂಗೊಳಿಸಿದ ಬಿರುಗಾಳಿ-ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಹಲವೆಡೆ ಸುಮಾರು ಒಂದು ಗಂಟೆಗಳ ಕಾಲ ಗುಡುಗು, ಸಿಡಿಲಿನ ಆರ್ಭಟದ ಜೊತೆಗೆ ಭಾರಿ ಗಾಳಿಯೊಂದಿಗೆ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿ.ಮೂಡ ಗ್ರಾಮದ ಕಾಮಾಜೆ, ಮೈರಾನ್ ಪಾದೆ, ದೈಪಲ ಎಂಬಲ್ಲಿ ರಾತ್ರಿ ಬೀಸಿದ ಭಾರಿ ಗಾಳಿ, ಮಳೆಗೆ ಒಟ್ಟು 33 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 2 ಮನೆಗಳಿಗೆ ತೀವ್ರ ಹಾನಿಯುಂಟಾಗಿದ್ದು, ಸುಮಾರು 3,53,000 ರೂ ನಷ್ಟವುಂಟಾಗಿದೆ ಎಂದು ಕಂದಾಯ ಇಲಾಖೆ ಅಂದಾಜಿಸಿದೆ. ಬಂಟ್ವಾಳ...
ಪುತ್ತೂರು

ಪುತ್ತೂರು, ಕಡಬದಲ್ಲಿ 6 ಮಂದಿಗೆ ಕೊರೋನಾ ದೃಢ-ಕಹಳೆ ನ್ಯೂಸ್

ಪುತ್ತೂರು : ಮಾರ್ಚ್ 31ರ ಆರೋಗ್ಯ ಇಲಾಖೆಯ ವರದಿಯಿಂದ, ಪುತ್ತೂರಿನ ಪತ್ರಕರ್ತರೊಬ್ಬರು ಸೇರಿದಂತೆ ಪುತ್ತೂರು ಕಡಬದಲ್ಲಿ 6 ಮಂದಿಗೆ ಕೊರೋನಾ ದೃಢಗೊಂಡಿದೆ ಎಂದು ಮಾಹಿತಿ ಲಭ್ಯವಾಗಿದೆ. ಪುತ್ತೂರು ತಾಲೂಕಿನ ಬನ್ನೂರಿನ 64 ವರ್ಷದ ಪುರುಷ, ಬೊಳುವಾರಿನ 51 ವರ್ಷದ ಪುರುಷ, ಸರ್ವೆಯ 12 ವರ್ಷದ ಬಾಲಕಿ, ಮುಂಡೂರಿನ 70 ವರ್ಷದ ವೃದ್ಧ, ಬನ್ನೂರಿನ 63 ವಷದ ಪುರುಷ ಹಾಗೂ ಕಡಬ ತಾಲೂಕಿನ ಉದನೆಯ 21 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೋನಾ ದೃಢಗೊಂಡಿದೆ....
ಬಂಟ್ವಾಳ

ಬೆಂಗಳೂರಿನಿಂದ ಪಾರ್ಸೆಲ್ ತರುತ್ತಿದ್ದ ಲಾರಿಯಿಂದ ಟಿವಿ, ಏರ್ ಕೂಲರ್ ಕಳವು ಮಾಡಿದ ಚಾಲಕ-ಕಹಳೆ ನ್ಯೂಸ್

ಬಂಟ್ವಾಳ : ಮಾರ್ಚ್ 25ರಂದು ಬೆಂಗಳೂರಿನಿಂದ ಪಾರ್ಸೆಲ್ ತರುತ್ತಿದ್ದ ಲಾರಿಯನ್ನು ಅದರ ಚಾಲಕ ಮೆಲ್ಕಾರ್ ನಲ್ಲಿ ನಿಲ್ಲಿಸಿ ಅದರಲ್ಲಿ 96 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ದೋಚಿದ ಘಟನೆ ನಡೆದಿದೆ. ಈ ಕುರಿತು ಲಾರಿ ಮಾಲಕ ಬೆಂಗಳೂರು ಮೂಲದ ಹೆಚ್. ಆರ್. ಲೋಕೇಶ್ ಅವರು ದೂರು ನೀಡಿದ್ದು, ಲಾರಿಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಪಾರ್ಸೆಲ್ ಸಾಗಿಸಲಾಗುತ್ತಿತ್ತು. ಲಾರಿ ಚಾಲಕ ತುಮಕೂರು ಮೂಲದ ಮಂಜುನಾಥ್ ಮೆಲ್ಕಾರ್ ನಲ್ಲಿ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ. ಲಾರಿಯನ್ನು...
ಪುತ್ತೂರು

ಪುತ್ತೂರು ಪ್ರಗತಿ ಸ್ಟಡಿ ಸೆಂಟರ್‍ನ 4ನೇ ಶಾಖೆ ಕೊಡಗಿನ ಕುಶಾಲನಗರದಲ್ಲಿ ಲೋಕಾರ್ಪಣೆ- ಕಹಳೆನ್ಯೂಸ್

ಪುತ್ತೂರು: ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ಕಳೆದ 13ವರುಷಗಳಿಂದ ಕಾರ್ಯಪ್ರವೃತ್ತರಾಗಿರುವ ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್ (ರಿ.)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್‍ನ 4ನೇ ಶಾಖೆ ಇದೀಗ ಕೊಡಗಿನ ಕುಶಾಲನಗರದ ಕೊಡುಗು ಟವರ್ರ್‍ನ ಯುನಿಯನ್ ಬ್ಯಾಂಕ್ ಬಿಲ್ಡಿಂಗ್‍ನಲ್ಲಿ ಕನ್ನಿಕಾ ವಿ.ಎಸ್.ಎಸ್.ಎನ್. ಸಹಯೋಗದೊಂದಿಗೆ ದಿನಾಂಕ 24 ಮಾರ್ಚ್ 2021 ನೇ ಬುಧವಾರ ಹೋಟೆಲ್ ಮತ್ತು ರೆಸಾರ್ಟ್ ಉದ್ದಿಮೆದಾರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ...
ಪುತ್ತೂರು

ಭಾರತೀಯ ಸೇನೆಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಪುತ್ತೂರಿನ ಬಲ್ನಾಡ್ ಗ್ರಾಮದ ರಮ್ಯಾ ಹಾಗೂ ಕಬಡ್ಡಿ ಸಾಧಕಿ ವಿನುಶ್ರೀ ಅವರಿಗೆ ಬಜರಂಗದಳ ಪುತ್ತೂರು ವತಿಯಿಂದ ಸನ್ಮಾನ-ಕಹಳೆ ನ್ಯೂಸ್

ಪುತ್ತೂರು: ಭಾರತೀಯ ಸೇನೆಯ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿ ದೇಶದ ರಕ್ಷಣೆಗೆ ತೆರಳುತ್ತಿರುವ ಪುತ್ತೂರು ತಾಲೂಕಿನ ಬಲ್ನಾಡ್ ಗ್ರಾಮದ ರಮ್ಯಾ.ಡಿ ಅವರನ್ನು ಹಾಗೂ ಕಬಡ್ಡಿ ಕ್ರೀಡೆಯಲ್ಲಿ ಸಾಧನೆ ಗೈದು ಕರ್ನಾಟಕ ರಾಜ್ಯ ಜೂನಿಯರ್ ಕಬಡ್ಡಿ ತಂಡಕ್ಕೆ ಅಯ್ಕೆಯಾದ ಬಲ್ನಾಡ್ ಗ್ರಾಮದ ಕೆಲ್ಲಾಡಿಯ ವಿನುಶ್ರೀ ಅವರನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ವತಿಯಿಂದ ಜಿಲ್ಲಾ ಕಾರ್ಯಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜು...
ಸುಬ್ರಹ್ಮಣ್ಯ

ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿ ಬಿದ್ದ ಕಾರು-ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದ ಘಟನೆ ಧರ್ಮಸ್ಥಳ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳದ ಬಳಿ ನಡೆದಿದೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಟೊಯೋಟಾ ಕಂಪನಿಯ ಇಟಿಯೋಸ್ ಕಾರು ಮರ್ಧಾಳ ಸಮೀಪದ ಚಾಕಟೆಕೆರೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟದಲ್ಲಿದ್ದ ರಬ್ಬರ್ ಶೀಟ್ ಮಾಡುವ ಶೆಡ್ ಮೇಲೆ ಉರುಳಿ ಬಿದ್ದಿದೆ. ಇನ್ನು ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ...
1 771 772 773 774 775 874
Page 773 of 874