Recent Posts

Sunday, April 26, 2026

ಬೆಳ್ತಂಗಡಿ

ಬೆಳ್ತಂಗಡಿ

ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡಕ್ಕದಲ್ಲಿ ಪೋಷಕರ ಸಭೆ-ಕಹಳೆ ನ್ಯೂಸ್

ಮೈರೋಳ್ತಡಕ್ಕ: ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡಕ್ಕದಲ್ಲಿ ಪೋಷಕರ ಸಭೆ ಕೋವಿಡ್ ನಿಯಮಕ್ಕೆ ಅನುಸಾರವಾಗಿ ನಡೆಯಿತು. ಸಭೆಯಲ್ಲಿ ಮಕ್ಕಳ ಪಠ್ಯ ಮತ್ತು ಪಠ್ಯಯೇತರ ಚಟುವಟಿಕೆಯ ಕುರಿತು ಚರ್ಚೆ ಹಾಗೂ ಶಾಲೆಯಲ್ಲಿ ಶ್ರಮದಾನ ನಡೆಸುವ ಬಗ್ಗೆ ಮತ್ತು ಕೈ ತೋಟದ ಏಲಂ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಾಯ್ಯ ಆಚಾರ್ಯ, ಪಂಚಾಯತ್ ಸದಸ್ಯರಾದ ಸುಚಿತ್ರ, ಮುಖ್ಯೋಪಾಧ್ಯಾಯರಾದ ಚಂದ್ರಾವತಿ ಕಾರ್ಯಕ್ರಮಕ್ಕೆ...
ಬೆಳ್ತಂಗಡಿ

ವಿದ್ಯುತ್ ವಿತರಣಾ ಕಂಪನಿ ಖಾಸಗೀಕರಣವನ್ನು ವಿರೋಧಿಸಿ ನಾಳೆ ಬೆಳ್ತಂಗಡಿ ಮೆಸ್ಕಾಂ ಕಚೇರಿಯಲ್ಲಿ ರಾಷ್ಟ್ರ ವ್ಯಾಪ್ತಿ ಮುಷ್ಕರ-ಕಹಳೆ ನ್ಯೂಸ್

ಮೆಸ್ಕಾಂ ಮತ್ತು ಇತರ ಎಸ್ಕಾಂಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಪುಯತ್ನ ಪಡುತ್ತಿದ್ದು ಇದರ ವಿರುದ್ಧ ಮತ್ತು 2003 ನೇ ಇಸವಿಯ ಕಾಯಿದೆಗೆ ತಿದ್ದುಪಡಿ ತರುವುದರ ವಿರುದ್ಧ ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ ನಾಳೆ ನಡೆಯಲಿದೆ. ಈ ಹಿನ್ನಲೆಯಲ್ಲಿ ನಾಳೆ ಬೆಳ್ತಂಗಡಿ ಮತ್ತು ಉಜಿರೆ ಮೆಸ್ಕಾಂ ಕಚೇರಿಯಲ್ಲಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಹಾಗೂ ಅಧಿಕಾರಿಗಳ ಒಕ್ಕೂಟ ಮಂಗಳೂರು ವತಿಯಿಂದ ನಾಳೆ ಬೆಳಿಗ್ಗೆ 8.30 ರಿಂದ...
ಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈರೋಳ್ತಡ್ಕ ಒಕ್ಕೂಟ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಣಿಯೂರು ವಲಯದ ವತಿಯಿಂದ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ರಮ- ಕಹಳೆ ನ್ಯೂಸ್

ಗುರುವಾಯನಕೆರೆ : ಕಣಿಯೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈರೋಳ್ತಡ್ಕ ಒಕ್ಕೂಟ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಣಿಯೂರು ವಲಯದ ವತಿಯಿಂದ ಧಾರ್ಮಿಕ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಕುರಾಯ ಶ್ರೀ ಸದಾಶೀವೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ದೇವಸ್ಥಾನದ ಸುತ್ತಲೂ ಇದ್ದ ಕಸಕಡ್ಡಿ ಗಳನ್ನು ಹೆಕ್ಕಿ, ಕಳೆ ಗಿಡಗಳನ್ನು ತೆಗೆದು ಆವರಣವನ್ನು ಸ್ವಚ್ಚ ಗೊಳಿಸಲಾಯಿತು. ಈ ಸ್ವಚ್ಛತಾ ಕಾರ್ಯದಲ್ಲಿ ಮೈರೋಳ್ತಡ್ಕ ಒಕ್ಕೂಟದ ಅಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ,...
ಬೆಳ್ತಂಗಡಿ

ಬಂದಾರು ಗ್ರಾಮ ಪಂಚಾಯತ್ ಕಂದಾಯಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಬೈಪಾಡಿ ಪ್ರೌಢಶಾಲೆಯಲ್ಲಿ ಪಿಂಚಣಿ ಅದಾಲತ್ ಕಾರ್ಯಗಾರ- ಕಹಳೆ ನ್ಯೂಸ್

ಬಂದಾರು: ಕಂದಾಯಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಬೂತ್-3 ಬೈಪಾಡಿ ಗ್ರಾಮಸ್ಥರಿಗೆ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಬೈಪಾಡಿ ಪ್ರೌಢಶಾಲಾ ವಠಾರದಲ್ಲಿ ವಿವಿಧ ಜನಪರ ಕಾರ್ಯಕ್ರಮಗಳಲ್ಲಿ ಒಂದಾದ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಡಿಯಲ್ಲಿ ಸಂಧ್ಯಾಸುರಕ್ಷಾ, ವಿಧವಾ ವೇತನ, ಮನಸ್ವಿನಿ ಯೋಜನೆ ಮುಂತಾದ ಪಿಂಚಣಿ ಯೋಜನೆಗಳ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಅದಾಲತ್ ಕಾರ್ಯಾಗಾರ ಹಾಗೂ ವನಮಹೋತ್ಸವ ಪ್ರಯುಕ್ತ ಸಸಿ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ...
ಬೆಳ್ತಂಗಡಿ

ಬಂದಾರು ಗ್ರಾಮ ಪಂಚಾಯತ್ ನ ಮೈರೋಳ್ತಡ್ಕದಲ್ಲಿ ಪಿಂಚಣಿ ಅದಾಲತ್ ಕಾರ್ಯಾಗಾರ- ಕಹಳೆ ನ್ಯೂಸ್

ಬಂದಾರು: ಬಂದಾರು ಗ್ರಾಮ ಪಂಚಾಯತ್ ನ ಮೈರೋಳ್ತಡ್ಕ ಶಾಲೆಯಲ್ಲಿ ಬೂತ್-2 ರ ಗ್ರಾಮಸ್ಥರಿಗೆ ಸ್ವಾತಂತ್ರ್ಯೋತ್ಸವ ಮತ್ತು ಅಮೃತಮಹೋತ್ಸವದ ಅಂಗವಾಗಿ ವಿವಿಧ ಜನಪರ ಕಾರ್ಯಕ್ರಮಗಳಲ್ಲಿ ಒಂದಾದ ಪಿಂಚಣಿ ಅದಾಲತ್ ಸಂಧ್ಯಾ ಸುರಕ್ಷಾ ವಿಧವಾ ವೇತನ ಮನಸ್ವಿ ಯೋಜನೆ ಮುಂತಾದ ಪಿಂಚಣಿ ಯೋಜನೆಗಳ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಅದಾಲತ್ ಕಾರ್ಯಾಗಾರ ನಡೆಯಿತು.      ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ದಿನೇಶ್ ಗೌಡ, ಖಂಡಿಗ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್...
ಬೆಳ್ತಂಗಡಿ

ನಾಪತ್ತೆಯಾಗಿದ್ದ ರೆಖ್ಯ ಗ್ರಾಮದ ಮಹಿಳೆಯ ಮೃತ ದೇಹ ಪತ್ತೆ-ಕಹಳೆ ನ್ಯೂಸ್

ಬೆಳ್ತಂಗಡಿ: ತೋಟದಲ್ಲಿದ್ದ ನೆಲನೆಲ್ಲಿ ಗಿಡ ತೆಗೆದು ನದಿಯಲ್ಲಿ ತೊಳೆಯಲು ಹೋಗಿ ನದಿಗೆ ಜಾರಿ ಬಿದ್ದು ನಾಪತ್ತೆಯಾಗಿದ್ದ ಮಹಿಳೆಯ ಮೃತ ದೇಹ ಎಂಜಿರ ಎಂಬ ನದಿ ಬದಿಯಲ್ಲಿ ಪತ್ತೆ ಯಾಗಿದೆ. ರೆಖ್ಯ ಗ್ರಾಮದ ಉರ್ನಡ್ಕ ನಿವಾಸಿ ಯು. ಆರ್. ಸುಂದರ ಗೌಡ, ಎಂಬವರ ಪತ್ನಿ ಶಕುಂತಲಾ ಅವರು ಪಿತ್ತ ಖಾಯಿಲೆ ಇರುವ ಕಾರಣ ನಾಟಿ ಔಷಧಿಯಾಗಿ ನೆಲನೆಲ್ಲಿಯನ್ನು ಕಷಾಯವಾಗಿ ಸೇವಿಸಲು ತೋಟಕ್ಕೆ ಹೋದವರು ನಂತರ ನಾಪತ್ತೆಯಾಗಿದ್ದರು. ಬಳಿಕ ಮನೆಯ ಸುತ್ತಮುತ್ತ ತೋಟದ...
ಬೆಳ್ತಂಗಡಿ

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಕಟ್ಟಡ ಮತ್ತು ಇತರೆ ಕಾರ್ಮಿಕ ವರ್ಗದ ಜನರಿಗೆ ಬಂದಾರು ಗ್ರಾಮ ಪಂಚಾಯತ್‌ನಲ್ಲಿ ಕಿಟ್ ವಿತರಣೆ – ಕಹಳೆ ನ್ಯೂಸ್

ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ -19 ಲಾಕ್ ಡೌನ್ ಸಮಸ್ಯೆಯಿಂದಾಗಿ ಸಂಕಷ್ಟಕ್ಕೀಡಾದ ಕಟ್ಟಡ ಮತ್ತು ಇತರೆ ಕಾರ್ಮಿಕ ವರ್ಗದ ಬಂಧುಗಳಿಗೆ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಶಿವರಾಂ ಹೆಬ್ಬಾರ್ ಇವರ ಅನುದಾನ ಹಾಗೂ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಹರೀಶ್ ಪೂಂಜರ ಮುತುವರ್ಜಿಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಬಂದಾರು ಗ್ರಾಮ ಪಂಚಾಯತ್‌ನಲ್ಲಿ ನಡೆಯಿತು. ಈ ವೇಳೆ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ...
ಬೆಳ್ತಂಗಡಿ

ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿಯವರಿಗೆ ಧರ್ಮಸ್ಥಳದ ಪ್ರಸಾದ ನೀಡಿ ಅಭಿನಂದಿಸಿದ ಹರೀಶ್ ಪೂಂಜಾ! -ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿಯು ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಲು ಆಶೀರ್ವದಿಸಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಿ ಸ್ವಾಮಿಯ ಪ್ರಸಾದವನ್ನುನೀಡುವ ಮೂಲಕ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ಉತ್ತರದ ಶಾಸಕರಾದ ಡಾ. ಭರತ್‌ ಶೆಟ್ಟಿ ಹಾಗೂ ಮಂಗಳೂರು ದಕ್ಷಿಣದ ಶಾಸಕ ಮಿತ್ರರಾದ ಶ್ರೀ ವೇದವ್ಯಾಸ ಕಾಮತ್ ಅವರು ಜೊತೆಗಿದ್ದರು...
1 62 63 64 65 66 80
Page 64 of 80