Recent Posts

Sunday, April 26, 2026
ಬೆಳ್ತಂಗಡಿ

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಕಟ್ಟಡ ಮತ್ತು ಇತರೆ ಕಾರ್ಮಿಕ ವರ್ಗದ ಜನರಿಗೆ ಬಂದಾರು ಗ್ರಾಮ ಪಂಚಾಯತ್‌ನಲ್ಲಿ ಕಿಟ್ ವಿತರಣೆ – ಕಹಳೆ ನ್ಯೂಸ್

ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ -19 ಲಾಕ್ ಡೌನ್ ಸಮಸ್ಯೆಯಿಂದಾಗಿ ಸಂಕಷ್ಟಕ್ಕೀಡಾದ ಕಟ್ಟಡ ಮತ್ತು ಇತರೆ ಕಾರ್ಮಿಕ ವರ್ಗದ ಬಂಧುಗಳಿಗೆ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಶಿವರಾಂ ಹೆಬ್ಬಾರ್ ಇವರ ಅನುದಾನ ಹಾಗೂ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಹರೀಶ್ ಪೂಂಜರ ಮುತುವರ್ಜಿಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಬಂದಾರು ಗ್ರಾಮ ಪಂಚಾಯತ್‌ನಲ್ಲಿ ನಡೆಯಿತು.
ಈ ವೇಳೆ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ ಗೌಡ,ಉಪಾಧ್ಯಕ್ಷರಾದ ಗಂಗಾಧರ,ಪ0ಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಮೋಹನ್ ಬಂಗೇರ, ಭಾರತೀಯ ಮಜ್ದೂರ್ ಸಂಘದ ತಾಲ್ಲೂಕು ಅಧ್ಯಕ್ಷರಾದ ಉದಯ್.ಬಿ.ಕೆ,  ಗ್ರಾ.ಪಂ ಸದಸ್ಯರಾದ ದಿನೇಶ್ ಗೌಡ,ಚೇತನ್ ಗೌಡ,ಮೋಹನ್ ಗೌಡ,ಸುಚಿತ್ರಾ, ಮಂಜುಶ್ರೀ, ಪುಷ್ಪಾವತಿ, ಅನಿತಾ, ವಿಮಲಾ, ಶಿವ ಗೌಡ ಶಿವ ಪ್ರಸಾದ್ ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಗಿರೀಶ್ ಗೌಡ ಬಿ.ಕೆ,  ಪ್ರಶಾಂತ್ ಗೌಡ ಸಹಕರಿಸಿದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು