ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಬೆಳಾಲು ವತಿಯಿಂದ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ-ಕಹಳೆ ನ್ಯೂಸ್
ಬೆಳಾಲು: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಬೆಳಾಲು ಇದರ ವತಿಯಿಂದ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಏಳನೇ ವರ್ಷದ ವರಮಹಾಲಕ್ಷ್ಮಿ ಪೂಜೆ ನಡೆಯಿತು. ಪೂಜಾ ಕಾರ್ಯಕ್ರಮವನ್ನು ಶ್ರೀ ದುರ್ಗಾ ಪ್ರಸಾದ್ ಕೆರ್ಮುಣ್ಣಾಯ ಮತ್ತು ಗಿರೀಶ್ ಬಾರಿತ್ತಾಯ ನೆರವೇರಿಸಿಕೊಟ್ಟರು. ಅದರಂತೆ ವೃತಧಾರಿಗಳು ಪೂಜೆಗೆ ಕುಳಿತು ಪೂಜೆಯನ್ನು ಯಶಸ್ವಿಗೊಳಿಸಿದರು. ಈ ಪೂಜೆಗೆ ವಿಶೇಷವಾಗಿ ರವಕೆ ಕಣದ ದಾನಿಗಳಾಗಿ ಶ್ರೀ ಅನಿಲ್ ಕುಂಬ್ಲೆ ಸಂಪೂರ್ಣ ಟೆಕ್ಸ್ ಟೈಲ್ ಉಜಿರೆ ಹಾಗೂ ಅಡುಗೆ ಸಾಮಾನು...







