ವಿಧಾತ್ರಿ ಕಲಾವಿದೆರ್ ಕುಡ್ಲ ಕಲಾ ಸಂಸ್ಥೆಯ ಆಶ್ರಯದಲ್ಲಿ ನಾಳೆ ವಿಧಾತ್ರಿ ಸಂಭ್ರಮ -2026; ‘ಜೈ ಹನುಮಾನ್’ ನಾಟಕ ಪ್ರದರ್ಶನ -ಕಹಳೆ ನ್ಯೂಸ್
ಮಂಗಳೂರು : ಕಳೆದ 17 ವರ್ಷಗಳಿಂದ ತುಳು ರಂಗಭೂಮಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ವಿಧಾತ್ರಿ ಕಲಾವಿದೆರ್ ಕುಡ್ಲ (ರಿ.) ಸಂಸ್ಥೆಯ ವತಿಯಿಂದ ವಿಧಾತ್ರಿ ಸಂಭ್ರಮ-2026 ಕಾರ್ಯಕ್ರವು ಜೂ. 28ರಂದು ಸಂಜೆ 4:30ಕ್ಕೆ ನಗರದ ಪುರಭವನ (ಟೌನ್‌ಹಾಲ್) ನಲ್ಲಿ ಜರಗಲಿದೆ ಮತ್ತು ಚಿದಾನಂದ ಅದ್ಯಪಾಡಿ ಸಾರಥ್ಯದಲ್ಲಿ, ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ, ಭರತ್ ಎಸ್. ಕರ್ಕೇರ ರಚನೆಯ ತುಳು ಮತ್ತು ಕನ್ನಡ ಭಾಷೆಯಲ್ಲಿ ರಚನೆಯಾದ 'ಜೈ ಹನುಮಾನ್' ನಾಟಕ ಪ್ರದರ್ಶನ ನಡೆಯಲಿದೆ....






