
ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ವತಿಯಿಂದ ಶ್ರೀರಾಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಉತ್ಕರ್ಷ್ 2026 ಫೆಸ್ಟ್ ಕಾರ್ಯಕ್ರಮವು ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಬೆಳಿಗ್ಗೆ ಇದರ ಉದ್ಘಾಟನಾ ಕಾರ್ಯಕ್ರಮವು ನಡೆದಿದ್ದು, ದೀಪ ಪ್ರಜ್ವಲನ ಹಾಗೂ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮವು ಚಾಲನೆಗೊಂಡಿತು. ಶ್ರೀ ಕ್ಷೇತ್ರ ಮೋಂತಿಮಾರು ಇದರ ಆಡಳಿತ ಸಹ ಮೊಕ್ತೇಸರರು ಹಾಗೂ ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಇದರ ನಿವೃತ್ತ ಪ್ರಾಧ್ಯಾಪಕರಾದ ಡಾ. ಮುಕುಂದ ಪ್ರಭು ಇವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ವಿದ್ಯಾಕೇಂದ್ರದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ದೇವಕಿ, ಶ್ರೀರಾಮ ಪದವಿ ವಿಭಾಗದ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಶ್ರೀ ಸುರೇಶ್ ರೈ ಇರಾ, ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯ ಶ್ರೀ ಧೀರಜ್ ಬಲ್ಲೆಕೋಡಿ, ಮೋಂತಿಮಾರು ದೇವಸ್ಥಾನದ ವ್ಯವಸ್ಥಾಪಕರಾದ ಶ್ರೀ ಅಶೋಕ್ ನಾಡಾಜೆ, ಅಭ್ಯಾಗತರಾಗಿ ಆಗಮಿಸಿ ಶುಭ ಹಾರೈಸಿದರು.
ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಹಾಗೂ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ, ಕಾರ್ಯಕ್ರಮದ ಸಂಯೋಜಕರಾದ ಕು. ನವಿತ ಹಾಗೂ ಸಹಸಂಯೋಜಕರಾದ ಕು. ಅನನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಯತಿರಾಜ್ ಪೆರಾಜೆ ಗಣ್ಯರನ್ನು ಸ್ವಾಗತಿಸಿ, ಪ್ರಾಚಾರ್ಯ ಕೃಷ್ಣ
ಪ್ರಸಾದ್ ಪ್ರಸ್ತಾವಿಸಿ, ವಿದ್ಯಾರ್ಥಿಗಳಾದ ಕು. ಅಕ್ಷತ ಲಕ್ಷ್ಮೀ ದ್ವಿತೀಯ ಬಿಎ ವಂದಿಸಿ, ಕು. ತ್ರಿಶಾ ಅಂತಿಮ ಬಿಸಿಎ ಕಾರ್ಯಕ್ರಮ ನಿರ್ವಹಿಸಿದರು. ಬಿಕಾಂ ವಿದ್ಯಾರ್ಥಿ ಲಿಖಿತ್
ನಾಯಕ್ ಪ್ರಾರ್ಥಿಸಿದರು.











