Monday, July 20, 2026
ದಕ್ಷಿಣ ಕನ್ನಡಮಂಗಳೂರುಸುದ್ದಿ

ಪ್ರತಿಷ್ಠಿತ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ನ ಸ್ವತಂತ್ರ ಹೆಚ್ಚುವರಿ ನಿರ್ದೇಶಕರಾಗಿ ಡಾ. ಅರುಣ್ ಶ್ಯಾಮ್ ನೇಮಕ – ಕಹಳೆ ನ್ಯೂಸ್

ಮಂಗಳೂರು : ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಮತ್ತು ರಾಜ್ಯದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಡಾ. ಅರುಣ್ ಶ್ಯಾಮ್ ಅವರನ್ನು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ನ ಸ್ವತಂತ್ರ ಹೆಚ್ಚುವರಿ ನಿರ್ದೇಶಕರನ್ನಾಗಿ (Non-Executive, Independent Director) ನೇಮಕ ಮಾಡಲಾಗಿದೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಡಪದವು ನಿವಾಸಿಯಾಗಿರು ಅರುಣ್ ಶ್ಯಾಮ್ ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ಬಳಿಕ ಪುತ್ತೂರಿನ ವಿವೇಕಾನಂದ ಲಾ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದರು. ಹಾಗೂ ಆ ಸಂದರ್ಭದಲ್ಲಿ ABVP ಯ ಪುತ್ತೂರು ನಗರ ವಿದ್ಯಾರ್ಥಿ ಪ್ರಮುಖ್ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು., ಬಳಿಕ ಶ್ರೀ ರಾಮಚಂದ್ರಾಪುರ ಮಠದ ಶ್ರೀಗಳ ಜೊತೆ ಪರಿವಾರದಲ್ಲೂ ಸೇವಿ ಸಲ್ಲಿಸದ ಹೆಗ್ಗಳಿಕೆ ಇವರದ್ದು, ನಂತರ ಬೆಂಗಳೂರಿನ ಹೈಕೋರ್ಟಿನಲ್ಲಿ ಖ್ಯಾತ ಹಿರಿಯ ನ್ಯಾಯವಾದಿಗಳಾದ ಕೆ.ಎಂ. ನಟರಾಜ್ ಅವರ ಜ್ಯೂನಿಯರ್ ಆಗಿ ವೃತ್ತಿಜೀವನ ಆರಂಭಿಸಿ, ಇಂದು ನ್ಯಾಯಾಂಗ ವೃತ್ತಿಯಲ್ಲಿ ದಿನದಿಂದ ದಿನಕ್ಕೆ ಹಂತ ಹಂತವಾಗಿ ಬೆಳೆಯುತ್ತಾ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಇಂದು ಬಹುತೇಕ ಹಿಂದೂ ಸಂಘಟನೆಗಳ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು , ಪ್ರಮುಖ ಕ್ಷೇತ್ರಗಳು, ಪ್ರಮುಖ ರಾಜಕೀಯ ನಾಯಕರ ನ್ಯಾಯವಾದಿಯಾಗಿ ವಾದ ಹೈಕೋರ್ಟ್ ನಲ್ಲಿ ಮಂಡಿಸುತ್ತಿದ್ದಾರೆ. ಆದೇ ಇತ್ತೀಚಿನ ದಿನಗಳಲ್ಲಿ ಧಾರ್ಮಿಕವಾಗಿಯೂ ತೊಡಗಿಸಿಕೊಳ್ಳುತ್ತಿರುವ ಇವರು ಪದ್ಯಾಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾಗಿ ಜನಮನ್ನಣೆ ಒಡೆದಿದ್ದರು. ಅಲ್ಲದೆ, ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿಯವರ ಆಗಮನ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಸ್ವಾಗತಿಸಿರುವುದು ಗಮನಾರ್ಹ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು