Friday, September 11, 2026
ಸುದ್ದಿ

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ : ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ನೀಡುವ ಗೌರವ: ಆದರ್ಶ ಗೋಖಲೆ- ಕಹಳೆ ನ್ಯೂಸ್

ಪುತ್ತೂರು: ಭಾರತ ದೇಶದಲ್ಲಿ ಗುರುಪರಂಪರೆಗೆ ವಿಶೇಷವಾದ ಸ್ಥಾನವಿದೆ. ಗುರುವಿನ ಮಾರ್ಗದರ್ಶನದ ಮೂಲಕ ಅಧ್ಯಯನ ಮಾಡಿದಲ್ಲಿ ನರ ನಾರಾಯಣನಾಗಬಹುದು, ಮಾನವ
ಮಾಧವನಾಗಬಹುದು, ಉತ್ತಮ ಸರ್ವೋತ್ತಮನಾಗಬಹುದು, ಅದ್ಭುತವಾಗಿದ್ದರೆ ಪರಮಾದ್ಭುತವಾಗಬಲ್ಲ. ಶಿಷ್ಯನೊಬ್ಬ ಗುರುವಿಗಿಂತ ಉಚ್ಛ ಸ್ಥಾನದ ಸಾಧನೆ ಮಾಡಿದಾಗ ಗುರುವಿಗೆ ಆಗುವ ಆನಂದಕ್ಕೆ ಪಾರವೇ ಇಲ್ಲ. ವಿದ್ಯಾರ್ಥಿಗಳು ಸಾಧನೆಯ ಮೂಲಕ ನೀಡುವುದೇ ನಿಜವಾದ ಗೌರವ ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು.

ಜಾಹೀರಾತು

ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನಗರದ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಇತ್ತೀಚೆಗೆ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶಿಕ್ಷಕರ ದಿನಾಚರಣೆಯೆಂದರೆ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರನ್ನು ನೆನಪಿಸುವ ದಿನ, ಜೊತೆಗೆ ಸಾವಿರಾರು ಶಿಕ್ಷಕರನ್ನು ಗೌರವಿಸುವ ದಿನ. ಶಿಕ್ಷಕರು ಸದಾ ಕಾಲ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವವರು. ಹಿಂದಿನಿಂದಲೂ ವಿದ್ಯಾರಣ್ಯ, ಸುದತ್ತ ಮುನಿ, ದಾದಾಜಿ ಕೊಂಡದೇವ, ಸಮರ್ಥ ರಾಮದಾಸ ಹೀಗೆ ಹಲವಾರು ಗುರುಗಳು ತಮ್ಮ ಶಿಷ್ಯರನ್ನು ಅತ್ಯುನ್ನತ ಶಿಖರಕ್ಕೆ ಏರಿಸಿದ್ದಾರೆ. ಶಿಷ್ಯರ ಮೂಲಕ ತಮ್ಮ ಹೆಸರನ್ನು ಉಳಿಸಿಕೊಂಡವರು ನಿಜವಾದ ಗುರುಗಳು ಎಂದು  ಹೇಳಿದರು.
ಕಾಲೇಜಿನ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು    ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ, ಉಪ
ಪ್ರಾಂಶುಪಾಲೆ ವಿನುತಾ ಎಂ. ಸಾಲೆ ಹಾಗೂ ವಿದ್ಯಾಲಯದ  ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅವನಿ ಪ್ರಾರ್ಥಿಸಿ, ದಕ್ಷ ಸ್ವಾಗತಿಸಿದರು. ವೈಷ್ಣವಿ ಜಿ. ಪೈ ನಿರೂಪಿಸಿ, ರಿಧಿ ಆರ್. ಗೌಡ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು