Friday, September 11, 2026
ಸುದ್ದಿ

ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಘಟನೆಗೆ 25 ವರ್ಷ : ಇದೇ ದಿನ ಅಮೆರಿಕದ WTC ಮೇಲೆ ನಡೆದಿತ್ತು ಭಯೋತ್ಪಾದಕ ದಾಳಿ – ಕಹಳೆ ನ್ಯೂಸ್

ನ್ಯೂಯಾರ್ಕ್‌: ಅಮೆರಿಕದ  ಇತಿಹಾಸದಲ್ಲೇ ಅತ್ಯಂತ ಕ್ರೂರವಾದ ಭಯೋತ್ಪಾದಕ ದಾಳಿಗೆ ಇಂದಿಗೆ 25 ವರ್ಷ ತುಂಬಿದೆ. ಇದೇ ದಿನ ಎರಡು ವಿಮಾನಗಳು ನ್ಯೂಯಾರ್ಕ್‌ನ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಅನ್ನು ಧ್ವಂಸಗೊಳಿಸಿ 2,996 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಜಾಹೀರಾತು
2001ರ ಸೆ.11 ರಂದು (9/11) ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಘಟನೆ ನಡೆದಿತ್ತು. ಅಲ್‌ ಕೈದಾ ಆತ್ಮಾಹುತಿ ದಾಳಿಕೋರರು ದೇಶದ ಅಮೆರಿಕದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ವಿಮಾನ ಏರಿ ಮಾರ್ಗಮಧ್ಯೆ ವಿಮಾನ ಅಪಹರಿಸಿ ಡಬ್ಲ್ಯೂಟಿಸಿ ಗೋಪುರ ಮತ್ತು ಅಮೆರಿಕದ ರಕ್ಷಣಾ ಇಲಾಖೆ ಕೇಂದ್ರ ಕಚೇರಿ ಪೆಂಟಗನ್‌ ಬಳಿ ಅಪ್ಪಳಿಸುವಂತೆ ಮಾಡಿದ್ದರು.

ಈ ಭಯೋತ್ಪಾದಕ ದಾಳಿಯಲ್ಲಿ 2,996 ಜನರು ಮೃತಪಟ್ಟಿದ್ದರು. 25 ಸಾವಿರಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು. ಆಗ ಜಾರ್ಜ್‌ ಬುಷ್‌ ಅವರು ಅಮೆರಿಕದ ಅಧ್ಯಕ್ಷರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದುರಂತ ಬೆನ್ನಲ್ಲೇ ಮೂರು ಯುದ್ಧವಿಮಾನಗಳ ಬೆಂಗಾವಲಿನೊಂದಿಗೆ ಬುಷ್ ವಾಷಿಂಗ್ಟನ್‌ಗೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಉಪಾಧ್ಯಕ್ಷ ಡಿಕ್ ಚೆನಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಕೊಂಡೊಲೀಜಾ ರೈಸ್ ಅವರು ಶ್ವೇತಭವನದ ಆಳದಲ್ಲಿರುವ ‘ಸಿಚುವೇಷನ್ ರೂಮ್’ನಿಂದ (ಪರಿಸ್ಥಿತಿ ನಿರ್ವಹಣಾ ಕೊಠಡಿ) ಕಾರ್ಯನಿರ್ವಹಿಸಿದರು.

ಮಾಜಿ ಅಧ್ಯಕ್ಷ ಜಾರ್ಜ್ ಬುಷ್ (ಹಿರಿಯ) ಅವರ ಆಡಳಿತಾವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಲಾರೆನ್ಸ್ ಈಗಲ್‌ಬರ್ಗರ್, ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳ ವಿರುದ್ಧ ತಕ್ಷಣವೇ ದಾಳಿ ನಡೆಸಬೇಕೆಂದು ಆಗ್ರಹಿಸಿದರು. ಅಧ್ಯಕ್ಷರು ಭಯೋತ್ಪಾದನೆಯ ವಿರುದ್ಧ ಯುದ್ಧವನ್ನು ಘೋಷಿಸಬೇಕೆಂದು ಪ್ರತಿಪಾದಿಸಿದರು.

ಅಮೆರಿಕ ಮೇಲಿನ ಈ ದಾಳಿಯು ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಪತ್ಯ ಅಂತ್ಯಕ್ಕೆ ಕಾರಣವಾಗಿತ್ತು. ಒಸಾಮಾ ಬಿನ್‌ ಲಾಡೆನ್‌ ಮೇಲೆ ಶಂಕೆ ಹೊಂದಿದ್ದ ಅಮೆರಿಕವು ಅಪ್ಘಾನ್‌ ಮೇಲೆ ಆಗ ದಾಳಿಗಳನ್ನು ನಡೆಸಿತ್ತು.