Thursday, June 18, 2026

ಸುದ್ದಿ

ಜಿಲ್ಲೆಮಂಗಳೂರುಸುದ್ದಿ

ಮಂಗಳೂರಿಗೆ ಬಂತು ಎಲ್‌ಪಿಜಿ ಹೊತ್ತ ಟ್ಯಾಂಕರ್‌ -ಕಹಳೆ ನ್ಯೂಸ್

ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ ನವಮಂಗಳೂರು ಬಂದರಿಗೆ (New Mangalore Port) ಎಲ್‌ಪಿಜಿ ಹೊತ್ತ ಹಡಗು ಆಗಮಿಸಿದೆ. 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ (LPG) ಇರುವ ಅಪೋಲೋ ಓಷನ್(Apollo Ocean) ಹೆಸರಿನ ಹಡಗು ಮಂಗಳೂರಿಗೆ ಆಗಮಿಸಿದ್ದು ಇಳಿಸುವ ಕಾರ್ಯಾಚರಣೆಗಳು ನಡೆಯುತ್ತಿವೆ. ಕತಾರಿನ ರಾಸ್ ಲಫಾನ್‌ನಿಂದ 46 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತ ಶಿವಾಲಿಕ್ ಸರಕು ಹಡಗು ಗುಜರಾತಿನ ಮುದ್ರಾ ಬಂದರಿಗೆ ಮಾ.16ಕ್ಕೆ ಬಂದಿತ್ತು. ಈ ಹಡಗು...
ರಾಜ್ಯರಾಷ್ಟ್ರೀಯಸುದ್ದಿ

‌ರಷ್ಯಾದ 10 ಲಕ್ಷ ಬ್ಯಾರಲ್‌ ಕಚ್ಚಾ ತೈಲ ಹೊತ್ತೊಯ್ಯುತ್ತಿದ್ದ ಟರ್ಕಿ ಚಾಲಿತ ಟ್ಯಾಂಕರ್‌ ಮೇಲೆ ದಾಳಿ – ಕಹಳೆ ನ್ಯೂಸ್

ಅಂಕಾರ:‌ ಇಸ್ತಾನ್‌ಬುಲ್‌ ಬಳಿಯ ಕಪ್ಪು ಸಮುದ್ರದಲ್ಲಿ ಟರ್ಕಿ ನಿರ್ವಹಿಸುತ್ತಿದ್ದ ಕಚ್ಚಾ ತೈಲ ಟ್ಯಾಂಕರ್‌ ಹಡಗಿನ ಮೇಲೆ ದಾಳಿ ನಡೆದಿದೆ. ಕಪ್ಪು ಸಮುದ್ರವನ್ನು ಮರ್ಮರ ಸಮುದ್ರ (ದ್ವೀಪ ಸಮುದ್ರ) ಮತ್ತು ಮೆಡಿಟರೇನಿಯನ್‌ನೊಂದಿಗೆ ಸಂಪರ್ಕಿಸುವ ಪ್ರಮುಖ ಜಲಮಾರ್ಗವಾದ ಬಾಸ್ಪರಸ್‌ನಿಂದ ಸುಮಾರು 33 ಕಿಮೀ ದೂರದಲ್ಲಿ ದಾಳಿ ನಡೆದಿದೆ. ಸಿಯೆರಾ ಲಿಯೋನ್‌ ಧ್ವಜ ಹೊತ್ತ ಟ್ಯಾಂಕರ್‌ ರಷ್ಯಾದ ಕಚ್ಚಾ ತೈಲ ಸಾಗಿಸುತ್ತಿತ್ತು. ಸುಮಾರು 10 ಲಕ್ಷ ಬ್ಯಾರಲ್‌ಗಳನ್ನ ಹಡಗಿನಲ್ಲಿ ಲೋಡ್‌ ಮಾಡಲಾಗಿತ್ತು. ರಷ್ಯಾದ ತೈಲ...
ಸುದ್ದಿ

ಶಾಲಾಭಿವೃದ್ಧಿ ಸಮಿತಿಯ ಇಚ್ಛಾಶಕ್ತಿ ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ :ಅಬೂಬಕ್ಕರ್ ಅಶ್ರಫ್- ಕಹಳೆ ನ್ಯೂಸ್

ಕಲ್ಲಡ್ಕ : ಶಾಲಾಭಿವೃದ್ಧಿ ಸಮಿತಿಯ ಇಚ್ಛಾಶಕ್ತಿ ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಲ್ಲಡ್ಕ ಮಾದರಿ ಶಾಲಾ ಪದವೀಧರ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್ ಹೇಳಿದರು. ಅವರು ಮಾರ್ಚ್ 26 ಗುರುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ಕಲ್ಲಡ್ಕ ಕ್ಲಸ್ಟರ್ನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಜಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪಾಂಡವರಕಲ್ಲು ಶ್ರೀ ಬ್ರಹ್ಮಬೈದೆರೆ ಗರೋಡಿ ಕ್ಷೇತ್ರದಲ್ಲಿ ಮಾ.26 ರಿಂದ ಏ.2 ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ – ಕಹಳೆ ನ್ಯೂಸ್

ಬಂಟ್ವಾಳ : ಪಾಂಡವರಕಲ್ಲು ಶ್ರೀ ಬ್ರಹ್ಮಬೈದೆರೆ ಗರೋಡಿ ಕ್ಷೇತ್ರದಲ್ಲಿ ಮಾ.26 ರಿಂದ ಏ.2 ರ ತನಕ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿರುವುದು. ಮಾ.26 ರಂದು ಬೆಳಿಗ್ಗೆ 10.ಕ್ಕೆ ಸಾರಿ ಹಾಕುವುದು ಅದೇ ದಿನ ರಾತ್ರಿ ದೊಂಪದಬಲಿ ನೇಮೋತ್ಸವ ನಡೆಯಲಿದೆ. ಮಾ.29 ರಂದು ರಾತ್ರಿ ಕಜೆಕಾರುಗುತ್ತಿನಿಂದ ಶ್ರೀ ರಾಜನ್ ದೈವ ಕೊಡಮಾಣಿತ್ತಾಯ ಮತ್ತು ಪಟ್ರಾಡಿ ತಾವಿನಿಂದ ಶ್ರೀ ಬ್ರಹ್ಮಬೈದೆರೆ ಭಂಡಾರ ಬಂದು ಬಲಿ ಉತ್ಸವ ನಡೆಯಲಿದೆ. ಮಾ.30 ರಂದು ಬೆಳಿಗ್ಗೆ ಧ್ವಜಾರೋಹಣ...
ಬೆಂಗಳೂರುಸುದ್ದಿ

ಒಂದು ಸಿಲಿಂಡರ್ ಕೊಟ್ರೆ ತಿಂಗಳ ಪೂರ್ತಿ ಬಿರಿಯಾನಿ ಫ್ರೀ -ಕಹಳೆ ನ್ಯೂಸ್

ಆನೇಕಲ್: ಒಂದು ಸಿಲಿಂಡರ್ ಕೊಟ್ರೆ ಒಂದು ತಿಂಗಳು ಕಾಲ ಉಚಿತವಾಗಿ ಬಿರಿಯಾನಿ ನೀಡುವುದಾಗಿ ಹೋಟೆಲ್‌ವೊಂದು ಭರ್ಜರಿ ಆಫರ್ ನೀಡಿದೆ. ಬೆಂಗಳೂರು ಹೊರವಲಯದ ಆನೇಕಲ್ ಗಡಿಭಾಗದ ಹೊಸೂರಿನಲ್ಲಿರುವ ಹೋಟೆಲ್‌ವೊಂದು ಈ ಆಫರ್ ನೀಡಿದೆ. ಒಂದು ಸಿಲಿಂಡರ್ ಕೊಟ್ಟರೆ ದಿನಕ್ಕೆ ಒಂದು ಬಿರಿಯಾನಿಯಂತೆ ಒಂದು ತಿಂಗಳು ಕಾಲ ಉಚಿತವಾಗಿ ಕೊಡುವುದಾಗಿ ತಿಳಿಸಿದೆ. ನಮಗೆ ಅಡುಗೆಗೆ ನೀವು ಸಹಾಯ ಮಾಡಿ, ನಿಮ್ಮ ಹೊಟ್ಟೆ ನಾವು ತುಂಬಿಸುತ್ತೇವೆ ಎಂದು ಟ್ಯಾಗ್ ಕೂಡ ಹಾಕಿಕೊಂಡಿದೆ. ವಿಶಿಷ್ಟ ಜಾಹೀರಾತಿನ...
ಸುದ್ದಿ

ಪಾಲ್ದನೆ ಸಮೀಪದ ನೆಕ್ಕರೆ ಹಾಗೂ ಆಸುಪಾಸಿನಲ್ಲಿ ಓಡಾಡುತ್ತಿದ್ದ ಚಿರತೆ ಸೆರೆ- ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನ ಪಾಲ್ದನೆ ಸಮೀಪದ ನೆಕ್ಕರೆ ಹಾಗೂ ಆಸುಪಾಸಿನಲ್ಲಿ ಕಳೆದ ಕೆಲವು ದಿನಗಳಿಂದ ಓಡಾಡುತ್ತಿದ್ದ ಬೃಹತ್ ಗಾತ್ರದ ಚಿರತೆಯನ್ನು ಕೆಲರಾಯ್ ಕ್ರಾಸ್ ನೆಕ್ಕರೆ ಪದವು ಎಂಬಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನು ಇರಿಸಿ ಸೆರೆ ಹಿಡಿದಿದ್ದಾರೆ. ಚಿರತೆಯ ಇರುವಿಕೆ ಬಗ್ಗೆ ಸ್ಥಳೀಯರು ಸ್ಥಳೀಯ ಮಾಜಿ ಕಾರ್ಪೊರೇಟರ್ ಹಾಗೂ ಮಾಜಿ ಮೇಯರ್ ಭಾಸ್ಕರ್ ಕೆ. ಅವರಿಗೆ ದೂರು ನೀಡಿದ್ದು, ಅವರು ಸಕಾಲದಲ್ಲಿ ಸ್ಪಂದಿಸಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ ಕಾರ್ಯಾಚರಣೆ ನಡೆಸುವ...
ಸುದ್ದಿ

ಬಿಳಿ ಗೆಣಸು ಒಂದುವರೆ ಕೆಜಿಯ ಗದೆ ಬಾಟಲ್ ನಂತೆ ಒಂದು ಕೆಜಿಯ ತೆಂಗಿನಕಾಯಿಯಂತೆ ಅದ್ಭುತ…!- ಕಹಳೆ ನ್ಯೂಸ್

ನಮ್ಮ ಮಲೆನಾಡಿನ ಪ್ರದೇಶದಲ್ಲಿ ಬಹುತೇಕ ಎಲ್ಲೆಡೆ ಕೈತೋಟ ತರಕಾರಿ ಇರುವುದೇ ಆಗಿದೆ ಬಿಡಿ. ಆದರೆ ಇದರ ಕುರಿತು ಮನೆ ಹಿತ್ತಲು ಈಗ ಕಣ್ಮರೆಯಾಗಿದೆ ತರಕಾರಿಗೆ ಪೇಟೆ ಪಟ್ಟಣವೇ ನಮ್ಮಲ್ಲೇ ಮಾಡಿದರು ಈಗ ಕಾಡು ಪ್ರಾಣಿಗಳ ಉಪಟಳ ದಿಂದ ರಕ್ಷಿಸುವುದೇ ಕಷ್ಟ ಹಾಗಿದ್ದಲ್ಲು ಈ ಸಲ ಗೆಣಸು ಕೃಷಿಯಲ್ಲಿ ಚಿಕ್ಕ ಚಿಕ್ಕ ಗಡ್ಡೆಗಳಾಗುವುದು ಸಾಮಾನ್ಯ ಅದರಲ್ಲೂ ಒಂದುವರೆ ಕೆಜಿ ಗಾತ್ರದ್ದು ಬಾಟಲಿನಂತೆ ಗದೆಯಂತೆ ಇದ್ದು ಒಂದು ಕೆಜಿಯ ತೆಂಗಿನಕಾಯಿಯ ಗಾತ್ರದಲ್ಲೂ ಬೆಳಿಗ್ಗೆ...
ಉಡುಪಿಜಿಲ್ಲೆದಕ್ಷಿಣ ಕನ್ನಡಸುದ್ದಿ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಮುಂದಿನ ಎರಡು-ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ -ಕಹಳೆ ನ್ಯೂಸ್

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಮುಂದಿನ ಎರಡು-ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬಿ ಸಮುದ್ರದಲ್ಲಿ ಗಾಳಿ ಒತ್ತಡ ಇರುವುದರಿಂದ ವಿವಿಧೆಡೆ ಗಾಳಿ ಮತ್ತು ಸಿಡಿಲಿನ ಸಹಿತ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳೂರಿನಲ್ಲಿ ಮಂಗಳವಾರ 33.5 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ...
1 88 89 90 91 92 3,395
Page 90 of 3395