ಇನ್‌ಸ್ಟಾದಲ್ಲಿ ಶುರುವಾದ ಲವ್ – ಲಿವ್ ಇನ್ ಗೆಳತಿಯ ಕತ್ತು ಹಿಸುಕಿ ಕೊಂದ ಪ್ರಿಯಕರ! -ಕಹಳೆ ನ್ಯೂಸ್

ಬೆಂಗಳೂರು: ತನ್ನ ಲಿವ್ ಇನ್ ಗೆಳತಿಯನ್ನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ಬೆಂಗಳೂರಿನ ಮಲ್ಲೇಶ್ವರದ ಮನೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಅನುಷಾ (20) ಕೊಲೆಯಾದ ಯುವತಿಯಾಗಿದ್ದು, ಶರತ್(25) ಬಂಧಿತ ಆರೋಪಿಯಾಗಿದ್ದಾನೆ. ಘಟನೆ ಸಂಬಂಧ ಈಗಾಗಲೇ ಆರೋಪಿಯನ್ನ (Accused) ಬಂಧಿಸಲಾಗಿದೆ.
ಶರತ್ ಹಾಗೂ ಅನುಷಾ ಹಾಸನ ಮೂಲದವರು, ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಶರತ್ ವಾಟರ್ ಟ್ಯಾಂಕ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. 6 ತಿಂಗಳಿನಿಂದ ಇ ಜೋಡಿ ಮಲ್ಲೇಶ್ವರದಲ್ಲಿ ಲಿವ್ ಇನ್‌ನಲ್ಲೇ ವಾಸವಿದ್ದರು. ಆದ್ರೆ ವೈಯಕ್ತಿಕ ವಿಚಾರಕ್ಕೆ ಜಗಳ ನಡೆದು ಕೊಲೆಯಾಗಿದೆ.
ಕೊಲೆಯಾದ ಬಗ್ಗೆ ಶರತ್ ಸೋಮವಾರ ವಕೀಲರಿಗೆ ವಿಚಾರ ತಿಳಿಸಿದ್ದ. ಬಳಿಕ ವಕೀಲರು ಪೊಲೀಸರಿಗೆ ವಿಚಾರ ತಿಳಿಸಿದ್ರು. ಬಳಿಕ ಶೇಷಾದ್ರಿಪುರಂ ಪೊಲೀಸರು ಪರಿಶೀಲನೆ ನಡೆಸಿ, ಕೇಸ್ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿದ್ರು.
ಸದ್ಯ ಅನುಷಾ ಮೃತದೇಹವನ್ನ ಪೋಷಕರಿಗೆ ಹಸ್ತಾಂತರಿಸಿದ್ದು, ಆರೋಪಿ ಶರತ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.










