Thursday, June 18, 2026

ಸುದ್ದಿ

ಸುದ್ದಿ

ಮಕ್ಕಳಿಗಾಗಿ ಉಚಿತ ಬೇಸಿಗೆ ಸಂಸ್ಕಾರ ಶಿಬಿರ – ಕಹಳೆ ನ್ಯೂಸ್ 

ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆಯು, ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ, 2021ರಿಂದ, ದೇವಸ್ಥಾನದ ಆವರಣದಲ್ಲೇ ಪ್ರಾರಂಭಗೊಂಡು ಇದೀಗ 21 ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲಾ ಕೇಂದ್ರಗಳಲ್ಲಿ ಸುಮಾರು 2,500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಈ ಮೌಲ್ಯಯುತ ಶಿಕ್ಷಣದ ಸದುಪಯೋಗವನ್ನು ಪಡೆದು ಕೊಂಡಿರುತ್ತಾರೆ. 50ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಸೇವಾ ರೂಪದಲ್ಲಿ ಕೈಜೋಡಿಸಿಕೊಂಡಿರುತ್ತಾರೆ. ಬೇಸಿಗೆ ರಜೆಯಲ್ಲಿ ಬಿಡುವಾಗಿರುವ ಮಕ್ಕಳಿಗಾಗಿ *"ಮಕ್ಕಳ ಕಲರವ*" ಎಂಬ ಬೇಸಿಗೆ ಶಿಬಿರವನ್ನು ಸಂಪೂರ್ಣ ಉಚಿತವಾಗಿ ಈ...
ಸುದ್ದಿ

ಮೇ.08ರಿಂದ ಮೇ.10ರ ವರೆಗೆ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಲೋಕಾರ್ಪಣೆ ಹಾಗೂ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಪ್ರತಿಷ್ಠಾ ಸಾನ್ನಿಧ್ಯಾ ಕಳಶಾಭಿಷೇಕ ಕಾರ್ಯಕ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ : ಮೇ.08ರಿಂದ ಮೇ.10ರ ವರೆಗೆ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಲೋಕಾರ್ಪಣೆ ಹಾಗೂ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಪ್ರತಿಷ್ಠಾ ಸಾನ್ನಿಧ್ಯಾ ಕಳಶಾಭಿಷೇಕ ಕಾರ್ಯಕ್ರಮ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ನಾರಾಯಣ ಗುರು ಮಂದಿರದ ವಠಾರದಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ.)...
ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷದ ಕಮೆಂಟ್: ಆರೋಪಿ ಗಣೇಶ್ ಪ್ರಸಾದ್ ಬಂಧನ -ಕಹಳೆ ನ್ಯೂಸ್

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರದ ಗಣೇಶ್ ಪ್ರಸಾದ್ (41) ಬಂಧಿತ ಆರೋಪಿ. 2026ರ ಜನವರಿಯಲ್ಲಿ ಮಂಗಳೂರು ನಗರದ ಇಂಡಿಯಾನ ಕನ್ವೆನ್ಸನ್ ಸೆಂಟರ್ ನಲ್ಲಿ ನಡೆದ ಕಿರಾಅತ್ (ಕುರ್ ಆನ್ ಪಠಣ ) ಸ್ಪರ್ಧೆಯ ವೀಡಿಯೊ ದಿನಪತ್ರಿಕೆಯೊಂದರ ಫೇಸ್ ಬುಕ್ ಪುಟದಲ್ಲಿ ಪ್ರಸಾರವಾಗಿತ್ತು. ಈ ಸಂದರ್ಭ ಗಣೇಶ್ ಪ್ರಸಾದ್ ಎಂಬಾತ ತನ್ನ ಫೇಸ್ ಬುಕ್...
ಸುದ್ದಿ

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 8 ವರ್ಷಗಳಿಂದ  ತಲೆಮರೆಸಿಕೊಂಡಿದ್ದ ಆರೋಪಿ ಬಂಧನ -ಕಹಳೆ ನ್ಯೂಸ್

ಮಂಗಳೂರು : ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 8 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳ ಪಲಕ್ಕಾಡ್ ನಿವಾಸಿ ಶಕೀಲ್ ಪಿ.(43) ಬಂಧಿತ. ಆತನನ್ನು ಮಾ. 27ರಂದು ಬಂಟ್ವಾಳ ಗ್ರಾಮಾಂತರ ಠಾಣಾ ಸಿಬಂದಿ ಸಂತೋಷ್ ಹಾಗೂ ಶಿವಾನಂದ ಮಡ್ಡಿ ಅವರು ಕೇರಳ ತಿರೂರಿನಲ್ಲಿ ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ....
ಸುದ್ದಿ

ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ , ಎನ್.ಎಂ.ಅಜೀಜ್ ತಲೆಮರೆಸಿಕೊಂಡಿದ್ದ ಆರೋಪಿ -ಕಹಳೆ ನ್ಯೂಸ್

ಮಂಗಳೂರು : ಹಲವು ಅಪರಾಧಗಳಲ್ಲಿ ಆರೋಪಿಯಾಗಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಜ್ಞಾವರ ಗ್ರಾಮದ ನಿವಾಸಿ ಎನ್.ಎಂ.ಅಜೀಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಡಬ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕನ್ವಿಕ್ಷನ್ ವಾರಂಟ್ ಆರೋಪಿ ಅಜೀಜ್‌ಗೆ ಕರ್ನಾಟಕ ಉಚ್ಚ ನ್ಯಾಯಾಲಯ 10 ವರ್ಷ ಶಿಕ್ಷೆ ವಿಧಿಸಿರುತ್ತದೆ. ಅಜೀಜ್ ನನ್ನು 2018ರಲ್ಲಿ ಕೇರಳ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪೊಲೀಸರಿಗೆ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದು, ಅನಂತರ ಆಂಧ್ರಪ್ರದೇಶದಲ್ಲಿ ಜೇವರ್ಗಿ ನಿವಾಸಿ ಬಸವರಾಜು...
ಕ್ರೈಮ್ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಆರೀಫ್‌ ಹತ್ಯೆ ಪ್ರಕರಣ: ಸಿಸಿಬಿ ಪೊಲೀಸರು ಸೇರಿ ವಿಶೇಷ ಪತ್ತೆ ದಳ ರಚನೆ , ತೊಕ್ಕೊಟ್ಟು ಫೈಓವ‌ರ್ ಬಳಿ ಹತ್ಯೆಯಾದ ಆರೀಫ್ ಹಂತಕರ ಶೋಧ ಚುರುಕು -ಕಹಳೆ ನ್ಯೂಸ್

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಫೈಓವರ್ ಮೇಲೆ ಮೀನಿನ ವ್ಯಾಪಾರಿ, ರೌಡಿ ಶೀಟರ್‌ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ ಹುಸೇನ್ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಕಾರ್ಯದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಕೊಲೆಯಾದ ಆರೀಫ್‌ ಪುತ್ರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೌಫಾಲ್ ಸಹಚರ ಮಹಮ್ಮದ್ ರಿಫಾತ್ ಆಲಿ ನೇತೃತ್ವದ ತಂಡ ಕೊಲೆ ಮಾಡಿದ್ದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆರೀಫ್‌ ಕೊಲೆ ನಡೆಸಿದ್ದ ಹಂತಕರು ಇನ್ನೋವಾ ಕಾರನ್ನು ವಿಟ್ಲ ಬುಡೋಳಿಯಲ್ಲಿ ಬಿಟ್ಟು...
ಸುದ್ದಿ

ಹಾರ್ಮುಜ್‌ ದಾಟಲು ಗ್ರೀನ್‌ ಸಿಗ್ನಲ್‌ : ಭಾರತಕ್ಕೆ ಬಂತು LPG ಟ್ಯಾಂಕರ್‌, ಪೈನ್‌ ಗ್ಯಾಸ್‌ ಹೊತ್ತ ಮತ್ತೆರಡು ಹಡಗು -ಕಹಳೆ ನ್ಯೂಸ್

ನವದೆಹಲಿ/ಟೆಹ್ರಾನ್‌: ಹಾರ್ಮುಜ್‌ ಜಲಸಂಧಿಯಲ್ಲಿ ಕ್ಲಿಯರೆನ್ಸ್‌ ಪಡೆದ ಬಳಿಕ ಭಾರತೀಯ ಎಲ್‌ಪಿಜಿ ಟ್ಯಾಂಕರ್‌ ಹೊತ್ತ ʻಜಗ್‌ ವಸಂತ್‌ʼ ಹಡಗು ಮತ್ತು ಪೈನ್‌ ಗ್ಯಾಸ್‌ ಹೊತ್ತ ಹಡಗು ಸುರಕ್ಷಿತವಾಗಿ ಭಾರತ ತಲುಪಿವೆ. ಇನ್ನೂ ಎರಡು ಹಡಗು ಮಾರ್ಗಮಧ್ಯದಲ್ಲಿದ್ದು, ಸುಮಾರು 20 ಹಡಗುಗಳು  ಅನುಮತಿಗಾಗಿ ಕಾಯುತ್ತಾ ಹಾರ್ಮುಜ್‌ ಜಲಸಂಧಿಯಲ್ಲೇ ಸಿಲುಕಿಕೊಂಡಿವೆ. ಹೌದು. ಲಿಕ್ವಿಡ್‌ ಪೆಟ್ರೋಲಿಯಂ ಗ್ಯಾಸ್‌ (LPG) ಸಾಗಿಸುತ್ತಿದ್ದ ಭಾರತದ ಧ್ವಜ ಹೊತ್ತ ಎರಡು ಟ್ಯಾಂಕರ್‌ಗಳು ಸುರಕ್ಷಿತವಾಗಿ ಇರಾನ್‌ನ ಹಾರ್ಮುಜ್‌ ಜಲಸಂಧಿ ದಾಟಿ ಭಾರತಕ್ಕೆ...
ಸುದ್ದಿ

ವಾರದಲ್ಲಿ ಆಟೋ LPG ದರ 30 ರಿಂದ 40 ರೂ. ಏರಿಕೆ – ಕಲಬುರಗಿಯಲ್ಲಿ ಚಾಲಕರ ಆಕ್ರೋಶ- ಕಹಳೆ ನ್ಯೂಸ್

ಕಲಬುರಗಿ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಜಾಗತಿಕ ಪರಿಣಾಮ ಇದೀಗ ಕಲಬುರಗಿಯ ಬೀದಿ ಬದಿಯ ಸಾಮಾನ್ಯ ಆಟೋ ಚಾಲಕರ ಬದುಕಿನ ಮೇಲೂ ಬೀರಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ವ್ಯತ್ಯಯದ ನೆಪವೊಡ್ಡಿ ಆಟೋ ಎಲ್‌ಪಿಜಿ ದರವನ್ನ ಕ್ಷಣಕ್ಷಣಕ್ಕೂ ಏರಿಕೆ ಮಾಡುತ್ತಿರುವುದನ್ನ ವಿರೋಧಿಸಿದ್ದಾರೆ. ನಗರದ ಮಾರ್ಕೆಟ್ ಪ್ರದೇಶದಲ್ಲಿರುವ ಗ್ಯಾಸ್ ಬಂಕ್ ಮುಂದೆ ಆಟೋ ಚಾಲಕರು ಶನಿವಾರ ಪಂಪ್ ಬಂದ್ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಕಳೆದ 20 ದಿನಗಳ ಹಿಂದಷ್ಟೇ ಲೀಟರ್‌ಗೆ...
1 84 85 86 87 88 3,395
Page 86 of 3395