
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರದ ಗಣೇಶ್ ಪ್ರಸಾದ್ (41) ಬಂಧಿತ ಆರೋಪಿ.
2026ರ ಜನವರಿಯಲ್ಲಿ ಮಂಗಳೂರು ನಗರದ ಇಂಡಿಯಾನ ಕನ್ವೆನ್ಸನ್ ಸೆಂಟರ್ ನಲ್ಲಿ ನಡೆದ ಕಿರಾಅತ್ (ಕುರ್ ಆನ್ ಪಠಣ ) ಸ್ಪರ್ಧೆಯ ವೀಡಿಯೊ ದಿನಪತ್ರಿಕೆಯೊಂದರ ಫೇಸ್ ಬುಕ್ ಪುಟದಲ್ಲಿ ಪ್ರಸಾರವಾಗಿತ್ತು. ಈ ಸಂದರ್ಭ ಗಣೇಶ್ ಪ್ರಸಾದ್ ಎಂಬಾತ ತನ್ನ ಫೇಸ್ ಬುಕ್ ಅಕೌಂಟ್ ನಿಂದ “ಮಕ್ಕಳ ತಲೆಯನ್ನು ಟ್ರೈನ್ ವಾಶ್ ಮಾಡಿ ನಾಳೆ ದೇಶಕ್ಕೆ ಬಾಂಬ್ ಇಡೋಕೆ ಕಳಿಸೋದು ಅಷ್ಟೇ” ಎಂದು ಪ್ರಚೋದನಕಾರಿಯಾಗಿ ಕಮೆಂಟ್ ಹಾಕಿದ್ದ ಎನ್ನಲಾಗಿದೆ.
ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 15/2026 ಕಲಂ 196 ಬಿಎನ್ಎಎಸ್ ಮತ್ತು 66 ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಕಂಕನಾಡಿ ನಗರ ಪೊಲೀಸರು, ಆರೋಪಿ ಗಣೇಶ್ ಪ್ರಸಾದ್ ನನ್ನು ಮಾ.27ರಂದು ಬಂಧಿಸಿದ್ದಾರೆ.









