ಯುವವಾಹಿನಿ( ರಿ.) ಮಾಣಿ ಘಟಕದ ಪದಗ್ರಹಣ ಸಮಾರಂಭ : ಪಾಶ್ಚಿಮಾತ್ಯ ಸಂಸ್ಕೃತಿಯಿಂದ ದಿಕ್ಕು ತಪ್ಪಿದ ಯುವಕರನ್ನು ಸರಿದಾರಿಗೆ ತರಬೇಕು.. ಕುಮಾರಚಂದ್ರ – ಕಹಳೆ ನ್ಯೂಸ್
ಕಲ್ಲಡ್ಕ : ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದಾಗಿ ದಿಕ್ಕು ತಪ್ಪಿದ್ದು, ಅಂಥವರನ್ನು ಸರಿ ಮಾಡುವ ಉತ್ತಮ ಕೆಲಸ ಯುವವಾಹಿನಿ ಸಂಘಟನೆಯ ಮೂಲಕ ಆಗಬೇಕು ಎಂದು ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ಕಾರವಾರ ಹೇಳಿದರು. ಅವರು ಮಾರ್ಚ್ 29 ರವಿವಾರ ಮಾಣಿ ಕೊಡಾಜೆಯ ನಕ್ಷತ್ರ ಅಡಿಟೋರಿಯಂನಲ್ಲಿ ನಡೆದ ಯುವವಾಹಿನಿ( ರಿ.) ಮಾಣಿ ಘಟಕದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಶಿವರಾಜ್...






