Friday, April 24, 2026
ಸುದ್ದಿ

ಮಕ್ಕಳಿಗಾಗಿ ಉಚಿತ ಬೇಸಿಗೆ ಸಂಸ್ಕಾರ ಶಿಬಿರ – ಕಹಳೆ ನ್ಯೂಸ್ 

ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆಯು, ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ, 2021ರಿಂದ, ದೇವಸ್ಥಾನದ ಆವರಣದಲ್ಲೇ ಪ್ರಾರಂಭಗೊಂಡು ಇದೀಗ 21 ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲಾ ಕೇಂದ್ರಗಳಲ್ಲಿ ಸುಮಾರು 2,500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಈ ಮೌಲ್ಯಯುತ ಶಿಕ್ಷಣದ ಸದುಪಯೋಗವನ್ನು ಪಡೆದು ಕೊಂಡಿರುತ್ತಾರೆ. 50ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಸೇವಾ ರೂಪದಲ್ಲಿ ಕೈಜೋಡಿಸಿಕೊಂಡಿರುತ್ತಾರೆ.

ಬೇಸಿಗೆ ರಜೆಯಲ್ಲಿ ಬಿಡುವಾಗಿರುವ ಮಕ್ಕಳಿಗಾಗಿ *”ಮಕ್ಕಳ ಕಲರವ*” ಎಂಬ ಬೇಸಿಗೆ ಶಿಬಿರವನ್ನು ಸಂಪೂರ್ಣ ಉಚಿತವಾಗಿ ಈ ಯೋಜನೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಪಾಂಗಳಾಯಿ ಅರಸು ಮುಂಡಿತ್ತಾಯ ದೈವಸ್ಥಾನದ ಪಠಾರದಲ್ಲಿ, ಇದೇ 2.4.2026ನೇ ಗುರುವಾರ, 3.4.2026ನೇ ಶುಕ್ರವಾರ ಮತ್ತು 4.4.2026ನೇ ಶನಿವಾರದಂದು ಮೂರು ದಿನಗಳ ಬೇಸಿಗೆ ಶಿಬಿರವನ್ನು ಮಕ್ಕಳಿಗಾಗಿ ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 9:30 ರಿಂದ ಪ್ರಾರಂಭಗೊಂಡು ಮಧ್ಯಾಹ್ನ 12:30ಕ್ಕೆ ಕೊನೆಗೊಳ್ಳುವ ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ, ಅರ್ಥ ಸಹಿತ ಶ್ಲೋಕ, ನೀತಿಯುಕ್ತ ಕಥೆಗಳು, ಬುದ್ಧಿ ವಿಕಸನ ಆಟಗಳು, ಚಟುವಟಿಕೆಗಳು, ಯೋಗ ಮತ್ತು ಧ್ಯಾನ ಭಜನೆ ಮತ್ತು ಕುಣಿತ ಭಜನೆ, ತೆಂಗಿನ ಗರಿ ಮಾವಿನ ಎಲೆ ಇತ್ಯಾದಿಗಳಿಂದ ಸಾಂಪ್ರದಾಯಿಕ ಕರಕುಶಲ ಮುಂತಾದವುಗಳನ್ನು ಕಲ್ಪಿಸಿಕೊಡಲಾಗುವುದು. ಗೋವಿನ ಮಹತ್ವ ಹಾಗೂ ಮನೆಯಲ್ಲೇ ಮಕ್ಕಳೇ ಪೂಜೆ ಮಾಡುವ ಸರಳ ವಿಧಿ ವಿಧಾನವನ್ನು ಹೇಳಿಕೊಡಲಾಗುವುದು. ಸ್ವಚ್ಛತೆ ಗೆ ಆಧ್ಯತೆ ನೀಡುವುದರೊಂದಿಗೆ ಶಿಬಿರದ ಬಳಿಕ ಪ್ರತಿದಿನವೂ ಶಿಬಿರಾರ್ಥಿಗಳಿಗೆ, ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ .

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳು ತಮ್ಮ ವೈಯಕ್ತಿಕ ಜ್ಞಾನ ಹಾಗೂ ಸಂಸ್ಕಾರದ ಮಟ್ಟವನ್ನು ಹೆಚ್ಚಿಸಲು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಲು, ಪೋಷಕರು ಸಹಕರಿಸಬೇಕಾಗಿ ವಿನಂತಿ.

ಸ್ಥಳ : ಅರಸುಮುಂಡ್ಯತ್ತಾಯ ದೈವಸ್ಥಾನ, ಪಾಂಗಳಾಯಿ ಪರ್ಲಡ್ಕ, ಪುತ್ತೂರು ದ. ಕ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ:
9035888916
8095333678