Sunday, June 14, 2026

ಸುದ್ದಿ

ಮುಂಬೈರಾಜ್ಯಸುದ್ದಿ

ಶಾಲಾ-ಕಾಲೇಜು ತೆರೆಯಲು 8 ಎಕರೆ ಜಾಗ ಖರೀದಿಸಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ ಆರೋಪಿ -ಕಹಳೆ ನ್ಯೂಸ್

ಮುಂಬೈ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ರೇಣುಕೈ ಕೆಮಿಸ್ಟ್ರಿ ಕ್ಲಾಸಸ್ (ಆರ್‍ಸಿಸಿ) ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್ 8 ಎಕರೆ ಜಾಗದಲ್ಲಿ ಶಾಲೆ ಹಾಗೂ ಕಾಲೇಜು ಆರಂಭಿಸಲು ಮುಂದಾಗಿದ್ದ ವಿಚಾರ ಬಹಿರಂಗವಾಗಿದೆ. ಸಿಬಿಐ ಬಂಧನದ ಬಳಿಕ ಮೋಟೆಗಾಂವ್ಕರ್ ಆಸ್ತಿ ಹಾಗೂ ಹಣದ ಮೂಲದ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬಂದಿವೆ. ಮೋಟೆಗಾಂವ್ಕರ್ ನಡೆಸುತ್ತಿದ್ದ ಆರ್‍ಸಿಸಿ ಕೋಚಿಂಗ್ ಸಂಸ್ಥೆ ಮಹಾರಾಷ್ಟ್ರದ ಸುತ್ತಲೂ ಜನಪ್ರಿಯತೆ ಪಡೆದಿದ್ದು, ಲಾತೂರ್ ಸೇರಿ ಒಟ್ಟು 9 ಶಾಖೆಗಳಿವೆ....
ಬೆಂಗಳೂರುರಾಜ್ಯಸುದ್ದಿ

ಹುಡುಗಿ ಕೈಕೊಟ್ಟಿದ್ದಕ್ಕೆ ಹೈಟೆನ್ಷನ್ ಕಂಬ ಹತ್ತಿದ ಪಾಗಲ್‌ ಪ್ರೇಮಿ -ಕಹಳೆ ನ್ಯೂಸ್

ಬೆಂಗಳೂರು: ಹುಡುಗಿ ಕೈಕೊಟ್ಟಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ  ಹೈಟೆನ್ಷನ್ ಕಂಬ   ಏರಿದ ಘಟನೆ ಆನೇಕಲ್  ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ. ಸೋಮಶೇಖರ್ ಹೈಟೆನ್ಷನ್ ಕಂಬ ಹತ್ತಿದ ಲವರ್ ಬಾಯ್. ಚಿನ್ನಯ್ಯನಪಾಳ್ಯ ನಿವಾಸಿಯಾದ ಸೋಮಶೇಖರ್ ಕಳೆದ ಮೂರು ವರ್ಷಗಳಿಂದ ಯುವತಿಯನ್ನ ಪ್ರೀತಿಸುತ್ತಿದ್ದ. ಇತ್ತೀಚಿಗೆ ಯುವತಿ ಮದುವೆಗೆ ನಿರಾಕರಿಸಿದ್ದಾಳೆ. ಲವ್ ಬ್ರೇಕಪ್ ಮಾಡಿಕೊಳ್ಳಲು ಯುವತಿ ಮುಂದಾದ ಹಿನ್ನೆಲೆ ಸೋಮಶೇಖರ್ ಮನೆಯ ಶೀಟ್ ಹೊಡೆದು ದಾಂಧಲೆ ಮಾಡಿದ್ದಾನೆ. ಬಳಿಕ ಮನೆ ಸಮೀಪದ ಹೈಟೆನ್ಷನ್ ಕಂಬ ಹತ್ತಿ ಹುಡುಗಿ...
ಬೆಂಗಳೂರುರಾಜ್ಯಸುದ್ದಿ

ಇಂದು ದೇಶಾದ್ಯಂತ ಮೆಡಿಕಲ್ ಶಾಪ್‍ಗಳು ಬಂದ್ : ಅಗತ್ಯ ಔಷಧಿಗೆ ವಿಶೇಷ ಕೌಂಟರ್‌-ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಮೆಡಿಕಲ್ ಶಾಪ್‍ಗಳು ಬಂದ್  ಆಗಲಿವೆ. ಆನ್‍ಲೈನ್ ಇ-ಫಾರ್ಮಸಿಗಳು ಮತ್ತು ಕ್ವಿಕ್ ಕಾಮರ್ಸ್ ಆಪ್‍ಗಳ ಮೂಲಕ ಕಾನೂನು ಬಾಹಿರವಾಗಿ ಔಷಧಿ ಮಾರಾಟ ಮಾಡುವುದನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ (ಎಐಓಸಿಡಿ) ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಕರ್ನಾಟಕದಲ್ಲೂ ರಾಜ್ಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘ ಬಂದ್‍ಗೆ ಬೆಂಬಲ ನೀಡಿದೆ. ರಾಜ್ಯಾದ್ಯಂತ 26 ಸಾವಿರಕ್ಕೂ ಅಧಿಕ ಮೆಡಿಕಲ್‍ಗಳು ಇಂದು ಬಂದ್ ಆಗಲಿವೆ....
ಜಿಲ್ಲೆದಕ್ಷಿಣ ಕನ್ನಡಪುತ್ತೂರುಬೆಂಗಳೂರುರಾಜ್ಯವಾಣಿಜ್ಯಸುದ್ದಿ

ದಿ ಆರ್ಟ್ ಆಫ್‌ ಜ್ಯುವೆಲ್ಲರಿ ಮ್ಯಾಗಜೀನ್ ವಿಶೇಷ ಸಂಚಿಕೆಯಲ್ಲಿ ಜ್ಯುವೆಲ್ಲರಿಗಳಿಗೆ ಶ್ರೇಯಾಂಕ : ಭಾರತದ 100 ಜ್ಯುವೆಲ್ಲರಿ ಮಳಿಗೆಗಳಲ್ಲಿ ಪುತ್ತೂರಿನ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಸ್ಥಾನ..!!-ಕಹಳೆ ನ್ಯೂಸ್

ಪುತ್ತೂರು: ದಿ ಆರ್ಟ್ ಆಫ್ ಜ್ಯುವೆಲ್ಲರಿ (ಎಒಜೆ) ಮ್ಯಾಗಜೀನ್ 2025-26ರ ಅವಧಿಗೆ ಭಾರತದ ಅತ್ಯುತ್ತಮ 100 ಜ್ಯುವೆಲ್ಲರಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಪುತ್ತೂರು ಸಹಿತ ಹಲವು ಕಡೆ ಶಾಖೆಗಳನ್ನು ಹೊಂದಿರುವ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆ ಕೂಡಾ ಟಾಪ್ ಪಟ್ಟಿಗೆ ಸೇರಿದೆ. ದಿ ಆರ್ಟ್ ಆಫ್ ಜ್ಯುವೆಲ್ಲರಿ ಸಂಚಿಕೆಯಲ್ಲಿ ಭಾರತದಲ್ಲಿ ಚಿನ್ನ ಮತ್ತು ಆಭರಣಗಳ ಉದ್ಯಮದಲ್ಲಿ ಸಾಧಕರನ್ನು ಗುರುತಿಸುತ್ತದೆ. ಈ ಭಾರಿ ಟಾಪ್ 100 ಚಿನ್ನದ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಈಜಲು ಹೋಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಸಾವು -ಕಹಳೆ ನ್ಯೂಸ್

ಮಂಗಳೂರು: ನದಿಯಲ್ಲಿ ಈಜಲು ಹೋಗಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ಪಜಿರಡ್ಕದ ಬಳಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ನಿವಾಸಿ ಶ್ರೀಪೂರ್ಣ (21) ಎಂದು ಗುರುತಿಸಲಾಗಿದೆ. ಉಜಿರೆಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇವರು ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದರು. ಏಳು ಜನ ಸ್ನೇಹಿತರ ತಂಡ ನೇತ್ರಾವತಿ ನದಿಗೆ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಈಜಾಡಲು ತೆರಳಿತ್ತು. ಈ ವೇಳೆ ಯುವಕ ನೀರಿನಲ್ಲಿ ಮುಳುಗಿ...
ಜಿಲ್ಲೆಮಂಡ್ಯಸುದ್ದಿ

ಅಮ್ಮ-ಅಪ್ಪ ಸ್ವಾರಿ, ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ: ಪತ್ರ ಬರೆದಿಟ್ಟು ಸಹೋದರಿಯರು ನಾಪತ್ತೆ -ಕಹಳೆ ನ್ಯೂಸ್

ಮಂಡ್ಯ : ಮನೆಯಲ್ಲಿ ತಾಯಿ ಬೈದಿದ್ದಕ್ಕೆ ಮನನೊಂದು ಅಪ್ರಾಪ್ತ ಸಹೋದರಿಯರು ನಾಪತ್ತೆಯಾಗಿದ್ದಾರೆ. ಮನೆ ಬಿಟ್ಟು ಹೋಗುವ ಮುನ್ನ ಆಘಾತಕಾರಿ ಪತ್ರವೊಂದು ಬರೆದಿಟ್ಟು ಹೋಗಿರುವುದು ಕುಟುಂಬದಲ್ಲಿ ಆತಂಕ ಮನೆ ಮಾಡಿದ್ದು, ಗಾಬರಿಗೊಂಡ ಪೋಷಕರು ಪತ್ರದೊಂದಿಗೆ ಪೊಲೀಸರ ಮೊರೆ ಹೋಗಿದ್ದಾರೆ.  ತಾಯಿ ಬೈದಿದ್ದಕ್ಕೆ ಅಪ್ರಾಪ್ತ ಸಹೋದರಿಯರು (Sisters) ಭಾವುಕವಾಗಿ ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ರಾಮಚಂದ್ರ ಮಕ್ಕಳಾದ ಸುಜಾತಾ(16), ರುಕ್ಮಿಣಿ(14) ಮನೆಬಿಟ್ಟು ಹೋಗಿರುವ ಸಹೋದರಿಯರು. ಯಾವುದೋ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಸಹಾಯರೂಪದಲ್ಲಿ ಹೊಲಿಗೆ ಯಂತ್ರ ಹಸ್ತಾಂತರ -ಕಹಳೆ ನ್ಯೂಸ್

ಪುತ್ತೂರು  : ದ್ವಾರಕಾ ಪ್ರತಿಷ್ಠಾನ (ರಿ.), ಪುತ್ತೂರು ಇದರ ವತಿಯಿಂದ 'ದ್ವಾರಕಾ - ಆರ್ತ ಸಹಾಯ ಯೋಜನೆ'ಯಡಿಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪುತ್ತೂರು ತಾಲೂಕು, ಪಂಚಾಯತ್ ಕಾರ್ಯಾಲಯ ಇವರ ಮುಖೇನ ಬಂದ ಮನವಿಯನ್ನು ಪರಿಗಣಿಸಿ, ಸ್ವಾವಲಂಬಿ ಜೀವನಕ್ಕಾಗಿ ಸಹಾಯ ರೂಪದಲ್ಲಿ ಹೊಲಿಗೆ ಯಂತ್ರವನ್ನು ಮರೀಲ್ ನ ಶ್ರೀ ನಾಗರಾಜ ಇವರಿಗೆ ದಿನಾಂಕ 18-05-2026ರಂದು ಹಸ್ತಾಂತರಿಸಲಾಯಿತು. ಫಲಾನುಭವಿಯು ತೀವ್ರತರವಾದ ದೈಹಿಕ ವಿಕಲಚೇತನರಾಗಿದ್ದು, ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಈ...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆ, ರಾಜ್ಯದಲ್ಲಿ ಉತ್ತಮ ಮಳೆಗಾಗಿ ತಿಮ್ಮಪ್ಪನ ಬಳಿ ಪ್ರಾರ್ಥನೆ: ಡಿಕೆಶಿ -ಕಹಳೆ ನ್ಯೂಸ್

ಬೆಂಗಳೂರು: ದೇಶವು ಆರ್ಥಿಕ ಬಿಕ್ಕಟ್ಟಿನಿಂದ ಬಳಲಬಾರದು. ಎಲ್ಲರಿಗೂ ಶಕ್ತಿ, ಉತ್ತಮ ಆರೋಗ್ಯ ಲಭಿಸಲಿ. ರಾಜ್ಯದಲ್ಲಿ ಉತ್ತಮ ಮಳೆ ಬರಲಿ ಎಂದು ಭಗವಂತ ವೆಂಕಟೇಶ್ವರನ ಬಳಿ ಪ್ರಾರ್ಥಿಸಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್  ಹೇಳಿದರು. ಡಿಸಿಎಂ ಡಿಕೆಶಿ ಅವರು ತಿರುಮಲದಲ್ಲಿ  ಮಂಗಳವಾರ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು, ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಇಡೀ ದೇಶ ಶಾಂತಿಯಿಂದ ಕೂಡಿರಲಿ. ಸವಾಲುಗಳನ್ನು ಸಮರ್ಥವಾಗಿ ಎದುರಿಸಲಿ ಎಂದು ಕೋರಿಕೊಂಡಿದ್ದೇನೆ. ಈ ಮಹತ್ವದ ದಿನದಂದು ಇಲ್ಲಿಗೆ ಬಂದಿರುವುದಕ್ಕೆ...
1 33 34 35 36 37 3,392
Page 35 of 3392