Wednesday, May 20, 2026
ಜಿಲ್ಲೆಮಂಡ್ಯಸುದ್ದಿ

ಅಮ್ಮ-ಅಪ್ಪ ಸ್ವಾರಿ, ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ: ಪತ್ರ ಬರೆದಿಟ್ಟು ಸಹೋದರಿಯರು ನಾಪತ್ತೆ -ಕಹಳೆ ನ್ಯೂಸ್

ಮಂಡ್ಯ : ಮನೆಯಲ್ಲಿ ತಾಯಿ ಬೈದಿದ್ದಕ್ಕೆ ಮನನೊಂದು ಅಪ್ರಾಪ್ತ ಸಹೋದರಿಯರು ನಾಪತ್ತೆಯಾಗಿದ್ದಾರೆ. ಮನೆ ಬಿಟ್ಟು ಹೋಗುವ ಮುನ್ನ ಆಘಾತಕಾರಿ ಪತ್ರವೊಂದು ಬರೆದಿಟ್ಟು ಹೋಗಿರುವುದು ಕುಟುಂಬದಲ್ಲಿ ಆತಂಕ ಮನೆ ಮಾಡಿದ್ದು, ಗಾಬರಿಗೊಂಡ ಪೋಷಕರು ಪತ್ರದೊಂದಿಗೆ ಪೊಲೀಸರ ಮೊರೆ ಹೋಗಿದ್ದಾರೆ.


 ತಾಯಿ ಬೈದಿದ್ದಕ್ಕೆ ಅಪ್ರಾಪ್ತ ಸಹೋದರಿಯರು (Sisters) ಭಾವುಕವಾಗಿ ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ರಾಮಚಂದ್ರ ಮಕ್ಕಳಾದ ಸುಜಾತಾ(16), ರುಕ್ಮಿಣಿ(14) ಮನೆಬಿಟ್ಟು ಹೋಗಿರುವ ಸಹೋದರಿಯರು. ಯಾವುದೋ ವಿಷಯಕ್ಕೆ ಮನೆತಲ್ಲಿ ತಾಯಿ ಬೈದಿದ್ದಾರೆ. ಇದರಿಂದ ಮನನೊಂದು ಸಹೋದರಿಯರು, ಮನೆಬಿಟ್ಟು ಹೋಗಿದ್ದಾರೆ.ಹೋಗುವ ಮುನ್ನ ಭಾವುಕ ಪತ್ರವೊಂದು ಬರೆದಿಟ್ಟಿದ್ದಾರೆ. ಅಮ್ಮ-ಅಪ್ಪ ಸ್ವಾರಿ. ನಿಮ್ಮ ಕಣ್ಣು ಮುಂದೆ ಸಾಯುವುದಕ್ಕೆ ಆಗಲ್ಲ. ಹೀಗಾಗಿ ನಾವು ದೂರ ಹೋಗಿ ಸತ್ತಿದ್ದೇವೆ ಎಂದು ಆಘಾತಕಾರಿ ಪತ್ರ ಬರೆದಿಟ್ಟು ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು