Sunday, September 6, 2026
ಬೆಂಗಳೂರುರಾಜ್ಯಸುದ್ದಿ

ಇಂದು ದೇಶಾದ್ಯಂತ ಮೆಡಿಕಲ್ ಶಾಪ್‍ಗಳು ಬಂದ್ : ಅಗತ್ಯ ಔಷಧಿಗೆ ವಿಶೇಷ ಕೌಂಟರ್‌-ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಮೆಡಿಕಲ್ ಶಾಪ್‍ಗಳು ಬಂದ್  ಆಗಲಿವೆ. ಆನ್‍ಲೈನ್ ಇ-ಫಾರ್ಮಸಿಗಳು ಮತ್ತು ಕ್ವಿಕ್ ಕಾಮರ್ಸ್ ಆಪ್‍ಗಳ ಮೂಲಕ ಕಾನೂನು ಬಾಹಿರವಾಗಿ ಔಷಧಿ ಮಾರಾಟ ಮಾಡುವುದನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ (ಎಐಓಸಿಡಿ) ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಕರ್ನಾಟಕದಲ್ಲೂ ರಾಜ್ಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘ ಬಂದ್‍ಗೆ ಬೆಂಬಲ ನೀಡಿದೆ. ರಾಜ್ಯಾದ್ಯಂತ 26 ಸಾವಿರಕ್ಕೂ ಅಧಿಕ ಮೆಡಿಕಲ್‍ಗಳು ಇಂದು ಬಂದ್ ಆಗಲಿವೆ.

ಜಾಹೀರಾತು
ಒಂದು ದಿನದ ಮಟ್ಟಿಗೆ ಸಂಪೂರ್ಣ ಮೆಡಿಕಲ್‍ಗಳು ಬಂದ್ ಆಗಲಿವೆ. ಬೆಂಗಳೂರು ಒಂದರಲ್ಲಿಯೇ ಮೂರು ಸಾವಿರಕ್ಕೂ ಅಧಿಕ ಮೆಡಿಕಲ್‍ಗಳಿವೆ. ಬೆಂಗಳೂರು ಫಾರ್ಮ್‌ ರಿಟೈಲರ್ಸ್ & ಡಿಸ್ಟ್ರಿಬ್ಯೂಟರ್ಸ್ ಫೋರಂನ ಸಂಘದಿಂದ ಹೊರಬಂದ ಕೆಲವರು ಪ್ರತ್ಯೇಕ ಸಂಘ ಕಟ್ಟಿಕೊಂಡು ಬಂದ್‍ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೂ ಮೆಡಿಕಲ್ ಮಾಲೀಕರೇ ಬಂದ್‍ಗೆ ಬೆಂಬಲಿಸಿ ಮೆಡಿಕಲ್‍ಗಳನ್ನು ಕ್ಲೋಸ್ ಮಾಡಿದ್ದಾರೆ.
ಬಂದ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲವು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಒಳಗೆ ಇರುವ ಫಾರ್ಮಸಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಗಂಭೀರ ಪರಿಸ್ಥಿತಿಗಳಲ್ಲಿ ಅಗತ್ಯ ಔಷಧಿಗಳನ್ನು ಒದಗಿಸಲು ಆಯ್ದ ಪ್ರಮುಖ ಕೇಂದ್ರಗಳಲ್ಲಿ ತುರ್ತು ಕೌಂಟರ್‌ಗಳು ತೆರೆದಿರುತ್ತವೆ. ತುರ್ತು ಸಂದರ್ಭ ಬಂದ್ರೆ ಆಸ್ಪತ್ರೆಯ ಫಾರ್ಮಸಿಗಳು ಓಪನ್ ಇರಲಿದ್ದು ಜನ ಇದರ ಸೇವೆ ಪಡೆಯಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು