ಶಾಲಾ-ಕಾಲೇಜು ತೆರೆಯಲು 8 ಎಕರೆ ಜಾಗ ಖರೀದಿಸಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ ಆರೋಪಿ -ಕಹಳೆ ನ್ಯೂಸ್
ಮುಂಬೈ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ರೇಣುಕೈ ಕೆಮಿಸ್ಟ್ರಿ ಕ್ಲಾಸಸ್ (ಆರ್ಸಿಸಿ) ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್ 8 ಎಕರೆ ಜಾಗದಲ್ಲಿ ಶಾಲೆ ಹಾಗೂ ಕಾಲೇಜು ಆರಂಭಿಸಲು ಮುಂದಾಗಿದ್ದ ವಿಚಾರ ಬಹಿರಂಗವಾಗಿದೆ. ಸಿಬಿಐ ಬಂಧನದ ಬಳಿಕ ಮೋಟೆಗಾಂವ್ಕರ್ ಆಸ್ತಿ ಹಾಗೂ ಹಣದ ಮೂಲದ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬಂದಿವೆ. ಮೋಟೆಗಾಂವ್ಕರ್ ನಡೆಸುತ್ತಿದ್ದ ಆರ್ಸಿಸಿ ಕೋಚಿಂಗ್ ಸಂಸ್ಥೆ ಮಹಾರಾಷ್ಟ್ರದ ಸುತ್ತಲೂ ಜನಪ್ರಿಯತೆ ಪಡೆದಿದ್ದು, ಲಾತೂರ್ ಸೇರಿ ಒಟ್ಟು 9 ಶಾಖೆಗಳಿವೆ....







