Recent Posts

Thursday, June 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಸಾರಿಗೆ ನೌಕರರ ಹೋರಾಟಕ್ಕೆ KSDCF ಮತ್ತು AIDWA ಬೆಂಬಲ-ಕಹಳೆ ನ್ಯೂಸ್

ಹಗರಿಬೊಮ್ಮನಹಳ್ಳಿ : ಸಾರಿಗೆ ನೌಕರರ ಹೋರಾಟಕ್ಕೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಎರಡೂ ಸಂಘಟನೆಗಳು ಜಂಟಿಯಾಗಿ ಸಾರಿಗೆ ನೌಕರರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ, ಸರ್ಕಾರಕ್ಕೆ ಒತ್ತಾಯಿಸಿದ್ದು, ಸಂಘಟನೆಗಳ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಅವರು ಪಟ್ಟಣದ ಈ.ಕ.ರಾ.ರ.ಸಾ.ನಿಗಮ ಘಟಕದ ವ್ಯವಸ್ಥಾಪಕರಿಗೆ ಮನವಿ ಪತ್ರ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಉಸ್ಮಾನ್ ಭಾಷಾ, ಮುಖಂಡರಾದ ಜಿ.ಸರೋಜಮ್ಮ, ಎಸ್.ಹುಲಿಗೆಮ್ಮ...
ಹೆಚ್ಚಿನ ಸುದ್ದಿ

ಕೋವಿಡ್ ಲಸಿಕೆ ಉಪ ಕೇಂದ್ರಕ್ಕೆ ಪುರಸಭೆ ಸದಸ್ಯರಿಂದ ಚಾಲನೆ-ಕಹಳೆ ನ್ಯೂಸ್

ಬಾಗೇಪಲ್ಲಿ : ಜಗತ್ತಿನಾದ್ಯಂತ ಮಹಾ ಮಾರಿ ಕರೋನ ಸೊಂಕು 2 ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಾಗೇಪಲ್ಲಿ ತಾಲೂಕು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪುರಸಭೆ ವ್ಯಾಪ್ತಿಯ ಪ್ರತಿಯೊಂದು ವಾರ್ಡ್‍ನಲ್ಲಿ ಕೊವಿಡ್ ಲಸಿಕೆ ನೀಡಲು ಉಪ ಕೇಂದ್ರಗಳನ್ನು ಪ್ರಾರಂಭಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು 22 ನೇ ವಾರ್ಡ್ ಪುರಸಭೆ ಸದಸ್ಯ ಜಬೀವುಲ್ಲಾ ಖಾನ್ ಹೇಳಿದರು. ಬಾಗೇಪಲ್ಲಿ ಪಟ್ಟಣದ ಪುರಸಭೆ ವಾರ್ಡ್ ನಂ.22ರ ನ್ಯೂ ಹೊರೈಜನ್ ಖಾಸಗಿ ಶಾಲೆಯಲ್ಲಿ ಭಾನುವಾರ...
ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯಲ್ಲಿ ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ರಕ್ಷಿಸುತ್ತಿದ್ದ ಉರಗ ಪ್ರೇಮಿ ನಾಗರಹಾವು ಕಚ್ಚಿ ಸಾವು-ಕಹಳೆ ನ್ಯೂಸ್

ಉಪ್ಪಿನಂಗಡಿ : ನೆಕ್ಕಿಲಾಡಿಯಲ್ಲಿ ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ರಕ್ಷಿಸುತ್ತಿದ್ದ ಉರಗ ಪ್ರೇಮಿಯೊಬ್ಬರು ನಾಗರಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು 34 ನೆಕ್ಕಿಲಾಡಿ ಬೊಳಂತಿಲ ಹೊಸ ಕಾಲನಿ ನಿವಾಸಿ ಎಂ. ಆರ್ ಮಹಮ್ಮದ್ ಮುಸ್ತಫಾ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದ ಇವರು ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು. ಸ್ನೇಕ್ ಮುಸ್ತಾ ಎಂದೇ ಚಿರಪರಿಚಿತರಾಗಿದ್ದ ಎಂ.ಆರ್ ಮಹಮ್ಮದ್ ಮುಸ್ತಫಾ...
ಹೆಚ್ಚಿನ ಸುದ್ದಿ

ನೆಲ್ಯಾಡಿಯಲ್ಲಿ ಅನ್ಯಕೋಮಿಯ ಜೋಡಿಯೊಂದನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು-ಕಹಳೆ ನ್ಯೂಸ್

ನೆಲ್ಯಾಡಿ : ನೆಲ್ಯಾಡಿಯ ಹೊಳೆಯೊಂದರ ಬಳಿ ಜೊತೆಯಾಗಿದ್ದ ಅನ್ಯಕೋಮಿಯ ಜೋಡಿಯೊಂದನ್ನು ಗ್ರಾಮಸ್ಥರು ಹಿಡಿದು ನೆಲ್ಯಾಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗ ಕಾರಿನಲ್ಲಿ ಬಂದು ನೆಲ್ಯಾಡಿಯ ಹೊಳೆಯೊಂದರ ಬದಿಯಲ್ಲಿ ಜೊತೆಯಲ್ಲಿ ಇದ್ದರು. ಇದನ್ನು ನೋಡಿದ ಊರಿನವರು ಹಿಡಿದು ನೆಲ್ಯಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ....
ಹೆಚ್ಚಿನ ಸುದ್ದಿ

ಯುವ ಜನತೆಯ ಜೀವನ ಅಭದ್ರತೆಯಲ್ಲಿ ಸಾಗುತ್ತಿದೆ ; ಎಂ.ಪಿ.ಮುನಿವೆಂಕಟಪ್ಪ-ಕಹಳೆ ನ್ಯೂಸ್

ಬಾಗೇಪಲ್ಲಿ : ಪ್ರಸ್ತುತ ದೇಶದ ಯುವಜನತೆಯ ಜೀವನವು ಅಭದ್ರತೆ ಮತ್ತು ಆತಂಕಗಳ ಗೂಡಾಗಿದೆ ಎಂದು ಡಿವೈಎಫ್ಐ ನ ಮಾಜಿ ಮುಖಂಡ ಎಂ.ಪಿ ಮುನಿವೆಂಕಟಪ್ಪರವರು ಆತಂಕ ವ್ಯಕ್ತಪಡಿಸಿದರು. ಇಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ನ ವತಿಯಿಂದ ಗೂಳೂರು ಹೋಬಳಿ ಮಟ್ಟದ ಸಮಾವೇಶ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಅಧಿಕಾರದ ಗದ್ದುಗೆ ಏರಿದ ಬಿಜೆಪಿಗರು ಯುವಜನರನ್ನು ಭ್ರಮೆಗಳಲ್ಲಿ , ಕನಸುಗಳಲ್ಲಿ ಬದುಕುವಂತೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೆ...
ಹೆಚ್ಚಿನ ಸುದ್ದಿ

ಹವ್ಯಕ ಮಹಾಸಭೆಗೆ ISO ಪ್ರಮಾಣಪತ್ರದ ಗರಿ – ಕಹಳೆ ನ್ಯೂಸ್

ಶ್ರೀ ಅಖಿಲ ಹವ್ಯಕ ಮಹಾಸಭೆಗೆ 'ಪಾರದರ್ಶಕ ಹಾಗೂ ಸುವ್ಯವಸ್ಥಿತ ಆಡಳಿತ ಮತ್ತು ಸಮರ್ಥ ನಿರ್ವಹಣೆಯನ್ನು ಪ್ರಾಮಾಣೀಕರಿಸುವ ಐ.ಎಸ್.ಓ ಪ್ರಮಾಣಪತ್ರ ದೊರಕಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಸಂಸ್ಥಾಪಿತವಾಗಿ; 78 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯು ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಪ್ರಸ್ತುತ ISO ಪ್ರಮಾಣಪತ್ರ ದೊರಕಿರುವುದು ಶಿಸ್ತುಬದ್ಧ ಹಾಗೂ ಅಭಿವೃದ್ಧಿಪರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ISO 9001:2015 ಪ್ರಮಾಣ ಪತ್ರ ಸಿಕ್ಕಿದ್ದು ಹೀಗೆ : ಹವ್ಯಕ ಮಹಾಸಭೆಯ...
ಹೆಚ್ಚಿನ ಸುದ್ದಿ

ಉಜಿರೆಯಲ್ಲಿ ನಡೆಯಲಿರುವ ಅಖಿಲ ಭಾರತೀಯ ಮೂರನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಹಾಗೂ ಸಮ್ಮೇಳನ ಉದ್ಘಾಟಿಸಲು ಸಮ್ಮತಿ ಸೂಚಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ-ಕಹಳೆ ನ್ಯೂಸ್

ಉಜಿರೆ : ಮುಂದಿನ ಡಿಸೆಂಬರ್ 25 ಮತ್ತು 26 ರಂದು ಉಜಿರೆಯಲ್ಲಿ ಅಖಿಲ ಭಾರತೀಯ ಮೂರನೇ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಮತ್ತು ಸಮ್ಮೇಳನ ಉದ್ಘಾಟಿಸಲು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಸಮ್ಮತಿ ಸೂಚಿಸಿದ್ದಾರೆ. ಹಾಗೂ ಎಪ್ರಿಲ್.14 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಸಮಿತಿ ಆಶ್ರಯದಲ್ಲಿ ರಾಜ್ಯ ಮಟ್ಟದ ತೃತೀಯ ಸಾಹಿತ್ಯ ಸಮ್ಮೇಳನದ...
ಹೆಚ್ಚಿನ ಸುದ್ದಿ

ವೀರಕಂಭ ಗ್ರಾಮದ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆದ ಕೋವಿಡ್ ಲಸಿಕಾ ಶಿಬಿರ -ಕಹಳೆ ನ್ಯೂಸ್

ಕಲ್ಲಡ್ಕ : ಆರೋಗ್ಯದ ವಿಚಾರವಾಗಿ ಯಾವುದೇ ರೀತಿಯ ಉದಾಸೀನ ಸಲ್ಲದು. ಸರಕಾರದ ವ್ಯವಸ್ಥೆಯು ಪ್ರತಿ ಹಂತದಲ್ಲೂ ನಿಧಿ೯ಷ್ಟತೆಯನ್ನು ಹೊಂದಿದ್ದು ಪಾರದವರ್ಶಕತೆಯನ್ನು ತೋರುತ್ತದೆ. 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ನೀಡುವ ಕೊರೋನಾ ಲಸಿಕೀರಕಣದ ಉದ್ದೇಶವೇ ಆರೋಗ್ಯ ಮತ್ತು ಸಧೃಢ ಸಮಾಜದ ನಿರ್ಮಾಣವಾಗಿದೆ. ಇದರ ಸದುಪಯೋಗ ಎಲ್ಲರೂ ಪಡೆದು ಆರೋಗ್ಯವಂತರಾಗಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇಲ್ಲಿನ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಕುಸುಮಾ ರವರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ...
1 58 59 60 61 62 174
Page 60 of 174