Recent Posts

Thursday, June 18, 2026
ಸುದ್ದಿ

ಮಂಡೂಕಗಳಿಗೆ ಕಳ್ಳರ ಕಾಟ : ಗೋವಾದಲ್ಲಿ ‘ಜಂಪಿಂಗ್ ಚಿಕನ್‌’ಗೆ ಕಾರವಾರವೇ ಮಾರುಕಟ್ಟೆ -ಕಹಳೆ ನ್ಯೂಸ್

ಕಾರವಾರ: ಪ್ರವಾಸಿಗರ ಸ್ವರ್ಗ ಎಂದೇ ಕರೆಯಲ್ಪಡುವ ಗೋವಾದಲ್ಲಿ ಮಳೆಗಾಲ ಪ್ರಾರಂಭ ಆಯ್ತು ಎಂದರೆ ಜಂಪಿಂಗ್ ಚಿಕನ್‌ಗೆ ಎಲ್ಲಿಲ್ಲದ ಬೇಡಿಕೆ. ನಿಷೇಧದ ನಡುವೆ ಇವುಗಳ ಪೂರೈಕೆ ಮಾತ್ರ ಕಾರವಾರದಿಂದ ಆಗುತ್ತಿದೆ. ಅರೇ! ಇದೇನಿದು ಜಂಪಿಂಗ್ ಚಿಕನ್? ಹೊಸದಾಗಿ ಕೇಳ್ತಾ ಇದ್ದೇವೆ ಎಂದು ನೀವು ಅಂದುಕೊಳ್ಳಬಹುದು. ಚಿಕನ್ ಏನಾದ್ರು ಜಂಪ್ ಮಾಡುತ್ತಾ ಎಂದು ನೀವು ತಮಾಷೆ ಮಾಡಬಹುದು.

ಜಾಹೀರಾತು
ಜಾಹೀರಾತು

ಹೌದು, ‘ಜಂಪಿಂಗ್ ಚಿಕನ್’ ಎಂದರೆ ಕಪ್ಪೆ ಮಾಂಸ ಎಂದರ್ಥ. ಕಪ್ಪೆ ಚಿಕ್ಕದಾಗಿರುತ್ತೆ. ಅದು ಹೇಗೆ ಚಿಕನ್‌ಗೆ ಸಮ ಎನ್ನಬಹುದು. ಪಶ್ಚಿಮ ಘಟ್ಟ ಭಾಗದಲ್ಲಿ ಮಳೆಗಾಲ ಪ್ರಾರಂಭ ಆಯ್ತು ಅಂದ್ರೆ ‘ಇಂಡಿಯನ್ ಬುಲ್ ಫ್ರಾಗ್’  ತಳಿಯ ಬೃಹದಾಕಾರದ ಕಪ್ಪೆಗಳು ಸಂತಾನೋತ್ಪತ್ತಿಗೆ ತನ್ನ ಆವಾಸ ಸ್ಥಾನ ಬಿಟ್ಟು ಹೊರಬರುತ್ತವೆ. ಇವು ಗಾತ್ರದಲ್ಲಿ ದೊಡ್ಡದಿದ್ದು, ಏಳರಿಂದ ಎಂಟು ಕೆಜಿ ವರೆಗೂ ತೂಗುತ್ತವೆ. ಒಂದು ಚಿಕ್ಕ ಕೋಳಿಗೆ ಸಮವಿರುತ್ತವೆ. ಈ ಕಪ್ಪೆಗಳನ್ನ ಜೀವಂತ ಹಿಡಿದು ಗೋವಾದಲ್ಲಿ ಮಾಂಸಕ್ಕಾಗಿ ಬಳಸುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಪ್ಪೆ ಮಾಂಸ ಹೇಗೆ ಬಳಕೆ?
ದೊಡ್ಡ ದೊಡ್ಡ ಕಪ್ಪೆಗಳನ್ನ ಜೀವಂತ ಹಿಡಿಯಲಾಗುತ್ತದೆ. ಇವುಗಳನ್ನ ಜೀವಂತವಾಗಿ ಹಿಡಿದು ದೊಡ್ಡ ದೊಡ್ಡ ಹೋಟಲ್‌ಗಳಿಗೆ ಸಾವಿರಾರು ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಇಲ್ಲಿ ಈ ಕಪ್ಪೆಗಳನ್ನ ಜೀವಂತವಾಗಿಯೇ ಬೇಯಿಸಲಾಗುತ್ತದೆ. ನಂತರ ಇವುಗಳ ಕಾಲುಗಳನ್ನ ತುಂಡರಿಸಿ ಕಬಾಬ್ ರೂಪದಲ್ಲಿ ಭಕ್ಷಿಸಲಾಗುತ್ತದೆ. ರುಚಿಯಲ್ಲಿ ಚಿಕನ್‌ನಂತೆ ಇರುವುದರಿಂದ ಇದಕ್ಕೆ ಜಂಪಿಂಗ್ ಚಿಕನ್ ಎಂಬ ಹೆಸರು ಬಂದಿದೆ. ಗೋವಾದಲ್ಲಿ ಈ ಕಪ್ಪೆ ಮಾಂಸಕ್ಕೆ ಬಲು ಬೇಡಿಕೆ ಇದ್ದು, ಸಾವಿರಾರು ರೂಪಾಯಿ ನೀಡಿ ಈ ಖಾದ್ಯವನ್ನ ಗ್ರಾಹಕರು ಖರೀದಿಸುತ್ತಾರೆ.