Thursday, June 18, 2026
ಬೆಂಗಳೂರುರಾಜ್ಯಸುದ್ದಿ

ಜೈಲಿನಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ : ಸಂಧ್ಯಾ ನಾಗರಾಜ್ ವಿರುದ್ಧ ದೂರು-ಕಹಳೆ ನ್ಯೂಸ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಎ1 ಆರೋಪಿ ಪವಿತ್ರಾಗೌಡ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಬೆಂಗಳೂರಿನ ಸಂಧ್ಯಾ ನಾಗರಾಜ್‌ ವಿರುದ್ಧ ದೂರು ನೀಡಲಾಗಿದೆ.

ಜಾಹೀರಾತು
ಜಾಹೀರಾತು

ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಸಂಧ್ಯಾ ನಾಗರಾಜ್‌ , ಜೈಲಿನಲ್ಲಿ ಅಧಿಕಾರಿಗಳು ಆಕೆಗೆ ಸಹಕಾರ ಕೊಡ್ತಿದ್ದಾರೆ. ಪ್ರತಿದಿನ ಬಾಕ್ಸ್‌ನಲ್ಲಿ ಊಟ ತಂದುಕೊಡ್ತಾರೆ. ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಜೈಲಿನಲ್ಲಿ ಇದ್ದ ಸಂಧ್ಯಾ ನಾಗರಾಜ್‌ ಪವಿತ್ರಾಗೌಡ ಅವರನ್ನ ಭೇಟಿ ಮಾಡಿದ್ರಂತೆ. ಹೀಗಾಗಿ ಅವರಿಗೆ ಎಲ್ಲಾ ಸೌಲಭ್ಯ ಸಿಗ್ತಿದೆ ಅಂತ ಮಾಧ್ಯಮಗಳ ಮುಂದೆ ಹೇಳಿದ್ರು. ಈ ಆರೋಪವನ್ನು ಅಲ್ಲಗಳೆದಿರುವ ಪವಿತ್ರಾಗೌಡ ಜೈಲಿನಲ್ಲಿ ಇದ್ದುಕೊಂಡೇ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೊತೆಗೆ ರಶ್ಮಿ ಎಂಬ ಆರೋಪಿಯೂ ದೂರು ನೀಡಿದ್ದಾರೆ.