Recent Posts

Thursday, June 18, 2026
ದಕ್ಷಿಣ ಕನ್ನಡಪುತ್ತೂರುಮಾರುಕಟ್ಟೆವಾಣಿಜ್ಯಸುದ್ದಿ

ಉಪ್ಪಿನಂಗಡಿ ಸಮೀಪದ ಕೆಮ್ಮಾರದ ಉಜ್ಜೀವನ ಬಡಾವಣೆಯಲ್ಲಿ ಸಾಮೂಹಿಕ ಭೂಮಿ ಪೂಜೆ – ಕಹಳೆ ನ್ಯೂಸ್

ದ್ವಾರಕಾ ಕಾರ್ಪ್. ಪ್ರೈ. ಲಿ. ಇದರ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಉಪ್ಪಿನಂಗಡಿ ಸಮೀಪದ ಕೆಮ್ಮಾರದ ಉಜ್ಜೀವನ ಬಡಾವಣೆಯಲ್ಲಿ ಸಾಮೂಹಿಕ ಭೂಮಿ ಪೂಜೆ ದಿನಾಂಕ 18-06-2026ರಂದು ಜರುಗಿತು. ಪುರೋಹಿತರಾದ ಶ್ರೀ ವೇ. ಮೂ. ಕೃಷ್ಣಕುಮಾರ ಉಪಾಧ್ಯಾಯ ಇವರ ನೇತೃತ್ವದಲ್ಲಿ ಸಾಮೂಹಿಕ ಭೂಮಿ ಪೂಜೆ ಸಂಪನ್ನಗೊಂಡಿತು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸುಮಾರು 51 ಮನೆಯ ಭೂಮಿ ಪೂಜೆ ನಡೆದಿದ್ದು, ಹಲವು ಗ್ರಾಹಕರು ತಮ್ಮ ಸೈಟ್ ನ ಭೂಮಿ ಪೂಜೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಬಡಾವಣೆಯ ದ್ವಾರಕಾ ನೆಸ್ಟ್ ನ ಲೋಕಾರ್ಪಣೆ ಪ್ರಯುಕ್ತ ಧಾರ್ಮಿಕ ಕಾರ್ಯಗಳು ನಡೆಯಿತು. ದಿನಾಂಕ 17-06-2026ರ ರಾತ್ರಿ ವಾಸ್ತು ಪೂಜೆ, ವಾಸ್ತು ಹೋಮ; ಹಾಗೆಯೇ 18-06-2026ರಂದು ಮಹಾಗಣಪತಿ ಹವನ, ಲಕ್ಷ್ಮೀ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ, ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಅಮೃತಕೃಷ್ಣ ಎನ್., ಡೈರೆಕ್ಟರ್ ಶ್ರೀಮತಿ ಅಶ್ವಿನಿ ಎನ್. ಸೇರಿದಂತೆ ಸಿಬ್ಬಂದಿ ವರ್ಗ, ಬಂಧು ಮಿತ್ರರು, ಗ್ರಾಹಕರು, ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.