Recent Posts

Sunday, April 26, 2026
ರಾಜಕೀಯ

ವಿಡಿಯೋ ಮಾಡಿದ್ದ ಟೀಚರ್‌ ನ ‘‘ಪಕ್ಕೆಲುಬು’’ ಮುರಿಯುವಂತೆ ಕ್ರಮ ಕೈಗೊಂಡ ಶಿಕ್ಷಣ ಸಚಿವ ಸುರೇಶ್‌ಕುಮಾರ್‌..! – ಕಹಳೆ ನ್ಯೂಸ್

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮಗುವೊಂದು ಪಕ್ಕೆಲುಬು ಅನ್ನೋ ಪದವನ್ನು ಸರಿಯಾಗಿ ಉಚ್ಛಾರಣೆ ಮಾಡದೇ ‘ಕೊಪ್ಪೆಲುಬು’ ಅಂತಾ ಹೇಳೋ ವಿಡಿಯೋವೊಂದು ಹರಿದಾಡ್ತಿತ್ತು. ಮಗು ಈ ರೀತಿ ತಪ್ಪಾಗಿ ಉಚ್ಛರಿಸೋದನ್ನ ಅಲ್ಲಿನ ಶಾಲಾ ಶಿಕ್ಷಕರು ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ರು. ಆದ್ರೆ ಈ ಸಂಬಂಧ ರಿಯಾಕ್ಷನ್‌ ಮಾಡಿರೋ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ವಿಡಿಯೋ ಹರಿಬಿಟ್ಟ ಶಿಕ್ಷಕರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. .


ಮಕ್ಕಳು ತಪ್ಪು ಉಚ್ಛಾರ ಮಾಡುವುದು ಎಲ್ಲಾ ಕಡೆ ಸಹಜ. ನಿರಂತರ ಕಲಿಕೆಯ ನಂತರ ಮಕ್ಕಳಿಗೆ ಸರಿಯಾಗಿ ಉಚ್ಛಾರ ಬರುತ್ತೆ. ಆದ್ರೆ ಸರಿಯಾಗಿ ಉಚ್ಛಾರ ಮಾಡದ್ದನ್ನ ವಿಡಿಯೋ ಮಾಡಿ ವೈರಲ್‌ ಮಾಡಿದ್ದು ತಪ್ಪು. ಇದು ಒಂದು ವೇಳೆ ಮಗುವಿಗೆ ಗೊತ್ತಾದ್ರೆ ಅದರ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ಶಿಕ್ಷಕರಾದವರು ಮಕ್ಕಳಿಗೆ ಸರಿಯಾಗಿ ಉಚ್ಛಾರ ಮಾಡುವುದನ್ನ ಕಲಿಸಬೇಕು. ಅದು ಬಿಟ್ಟು ಅದನ್ನೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಿ ವಿಡಿಯೋ ಮಾಡೋದು ತಪ್ಪು. ವಿಡಿಯೋ ಹರಿಬಿಟ್ಟ ಶಿಕ್ಷಕರು ಯಾರು ಅದು ಯಾವ ಶಾಲೆ ಎಂಬುದರ ಕುರಿತು ಪತ್ತೆ ಹಚ್ಚಲಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೇ ಈ ಕುರಿತು ಸೈಬರ್‌ ಕ್ರೈಂ ಪೊಲೀಸ್‌ ಠಾಣೆ ಪೊಲೀಸರಿಗೆ ಕ್ರಮ ತೆಗೆದುಕೊಳ್ಳಲು ಸೂಚಿಸುತ್ತೇನೆ ಅಂತಾ ತಿಳಿಸಿದ್ದಾರೆ. ಈ ಒಂದು ಪ್ರಕರಣವಲ್ಲ, ಇನ್ಮುಂದೆ ಯಾವುದೇ ಶಿಕ್ಷಕರು ಈ ರೀತಿ ಮಾಡಿದ್ರೆ ಅಂತವರ ವಿರುದ್ಧವೂ ಕ್ರಮ ಜರುಗಿಸುತ್ತೇವೆ ಅಂತಾ ತಿಳಿಸಿದ್ದಾರೆ. ಅಲ್ಲದೆ ಕ್ರಿಮಿನಲ್ ಮೊಕದ್ದಮೆ, ಶಿಸ್ತು ಕ್ರಮ ಜರುಗಿಸಲು ಶಿಕ್ಷಣ ಸಚಿವರು ಸೂಚನೆ ಕೊಟ್ಟಿದ್ದಾರೆ.