Recent Posts

Sunday, April 26, 2026
ಸುದ್ದಿ

ಪುತ್ತೂರು: ಬಿಜೆಪಿ ನಗರ ಮಂಡಲದ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ CAA ಬಗೆಗಿನ ಜನಜಾಗೃತಿ ಕಾರ್ಯಕ್ರಮ- ಕಹಳೆ ನ್ಯೂಸ್

ಬಾರತ್ ಮಾತಾ ಪೂಜನಾ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ(CAA – 2019) ಬಗ್ಗೆ ಜನಜಾಗೃತಿ ಅಭಿಯಾನವು ನಿನ್ನೆ ದಿನಾಂಕ 09/01/2020ರಂದು ಬೊಳ್ಳಾಣದಲ್ಲಿ ಜರುಗಿತು.


ಸಂಪನ್ಮೂಲ ವ್ಯಕ್ತಿಯಾಗಿ ಸಭೆಯನ್ನುದ್ದೇಶಿಸಿ ಮಾತಾಡಿದ ಬಿ.ಜೆ.ಪಿ. ನಗರಮಂಡಲದ ನೂತನ ಅಧ್ಯಕ್ಷರಾದ P.G. ಜಗನ್ನಿವಾಸ್ ರಾವ್’ರವರು ನರೇಂದ್ರ ಮೋದಿ ಕಾಲಾವಧಿಯಲ್ಲಿ ಮಾಡಲ್ಪಟ್ಟ ಅದ್ಭುತ ಕಾರ್ಯಗಳಾದ 370’ನೇ ವಿಧಿ ರದ್ಧತಿ, ತ್ರಿವಳಿ ತಲಾಕ್, ರಾಮ ಮಂದಿರ ನಿರ್ಮಾಣ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರಲ್ಲದೇ ಭಾರತೀಯರಾದ ನಾವೆಲ್ಲರೂ ಒಗ್ಗಟ್ಟಾಗಿ ಬೆಂಬಲಿಸಬೇಕೆಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ತಿಂಗಳಿಗೊಂದು ಬಾರಿ ಕಾರ್ಯಕರ್ತರು ಒಟ್ಟಾಗಿ ಸೇರಿ ಸಭೆ ನಡೆಸಬೇಕಾದ ಅವಶ್ಯಕತೆಯನ್ನು ಮನದಟ್ಟು ಮಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ದೀಪ ಪ್ರಜ್ವಲನೆ, ಭಾರತ್ ಮಾತಾ ಭಾವಚಿತ್ರಕ್ಕೆ ಮಾತೆಯರಿಂದ ಪುಷ್ಪಾರ್ಚನೆ, ವಂದೇ ಮಾತರಂ ಪ್ರಾರ್ಥನೆ ನಡೆಯಿತು.

ಭಾರತ್ ಮಾತಾ ಪೂಜನಾ ಕಾರ್ಯಕ್ರಮದ ಬಗ್ಗೆ ನಗರಸಭಾ ಸದಸ್ಯೆ ಶ್ರೀಮತಿ ದೀಕ್ಷಾ ಪೈ ವಿವರಿಸಿದರು. ಇದರ ಜೊತೆಗೆ 8866288662′ ಸಂಖ್ಯೆಗೆ ಕರೆ ಮಾಡುವ ಮಾಡುವ ಮೂಲಕ ಸಾಮೂಹಿಕ ಮಿಸ್’ಕಾಲ್ ಅಭಿಯಾನ ನಡೆಸಲಾಯಿತು.

 

ಬೂತ್ ಅಧ್ಯಕ್ಷರಾದ ಭರತ್ ಕುಲಾಲ್ ಬೊಳ್ಳಾಣ, ಪ್ರ.ಕಾ. ಜಯಪ್ರಕಾಶ್ ಆಚಾರ್ಯ, ಸಮಿತಿಯ ಪದಾಧಿಕಾರಿಗಳು, ಸದಸ್ಯರು ಅಲ್ಲದೇ ನಲುವತ್ತೈದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಸತೀಶ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು, ಪ್ರಕಾಶ್ ಆಚಾರ್ಯ ಧನ್ಯವಾದ ಸಮರ್ಪಿಸಿದರು.