
ತೆಕ್ಕಾರು: ಫ್ರೆಂಡ್ಸ್ ತೆಕ್ಕಾರು ಇದರ ಆಶ್ರಯದಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಲಾಗಿರುವ 5ನೇ ವರ್ಷದ ತೆಕ್ಕಾರು ಟೈಗರ್ಸ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಅ. 11ರಂದು ಸಂಜೆ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಜೆಂಡೆ ಮೆರವಣಿಗೆ ಹೊರಡಲಿದ್ದು, ರಾತ್ರಿ 8 ಗಂಟೆಗೆ ಊದು ಪೂಜೆ ನಡೆಯಲಿದೆ.
ಅದೇ ದಿನ ರಾತ್ರಿ 8.30ರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನು ಅಕ್ಟೋಬರ್ 12ರಂದು ತೆಕ್ಕಾರು ಟೈಗರ್ಸ್‌ನ ಹುಲಿ ವೇಷ ಹೊರಡುವ ಕಾರ್ಯಕ್ರಮ ನಡೆಯಲಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷರಾದ ನಾಗಭೂಷಣರಾವ್ ಬಾಗ್ಲೋಡಿ, ಫ್ರೆಂಡ್ಸ್ ತೆಕ್ಕಾರು ಅಧ್ಯಕ್ಷರಾದ ತುಳಸಿ ವಿ. ಕೋಟ್ಯಾನ್, ದೇವಸ್ಥಾನದ ಟ್ರಸ್ಟಿ ಅಣ್ಣು ಪೂಜಾರಿ, ಪ್ರಗತಿಪರ ಕೃಷಿಕರಾದ ದಿವಾಕರ್ ರಾವ್ ಪಿಲಿಬೈಲು, ಹಿರಿಯ ಸದಸ್ಯರಾದ ತಿಮಪ್ಪ ಮಹ್ಯ, ಕಾರ್ಯನಿರ್ವಹಣಾ ಸಮಿತಿ ಅಧ್ಯಕ್ಷರಾದ ಶರತ್ ಅನಲ್ಕೆ, ವಿವೇಕಾನಂದ ಕಾಲೇಜು ಪುತ್ತೂರಿನ ಉಪನ್ಯಾಸಕ ಅಕ್ಷತ ನಾಯಕ್ ಮರಮ, ಸಮಾಜ ಸೇವಕ ಹಾಗೂ ಪ್ರಗತಿಪರ ಕೃಷಿಕ ನವೀನ್ ರೈ ಪೋರ್ಕಳ, ಪ್ರಗತಿಪರ ಕೃಷಿಕರಾದ ಸಂದೇಶ್ ಕುಮಾರ್ ಜೈನ್ ಹೊಸಮೊಗರು ಹಾಗೂ ಜಗನ್ನಾಥ್ ಶೆಟ್ಟಿ ತೆಕ್ಕಾರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ನವರಾತ್ರಿಯ ಸಂಭ್ರಮಕ್ಕೆ ತೆಕ್ಕಾರು ಟೈಗರ್ಸ್‌ನ ಹುಲಿ ವೇಷ ಮತ್ತಷ್ಟು ಮೆರುಗು ನೀಡಲಿದೆ.











