Friday, September 4, 2026
ಸುದ್ದಿ

ಯುವ ದಸರಾ ಉದ್ಘಾಟಕರಾಗಿ ನಟ ಪ್ರಭುದೇವಗೆ ಆಹ್ವಾನ – ಕಹಳೆ ನ್ಯೂಸ್

ಮೈಸೂರು: ಈ ಬಾರಿಯ ಮೈಸೂರು ದಸರಾದ  ಸಾಂಸ್ಕೃತಿಕ ಕಾರ್ಯಕ್ರಮ ಯುವ ದಸರಾ ಉದ್ಘಾಟಕರಾಗಿ ನಟ ಪ್ರಭುದೇವಗೆ ಆಹ್ವಾನ ನೀಡಲಾಗಿದೆ.

ಜಾಹೀರಾತು

ನಟ ಪ್ರಭುದೇವ ಅವರಿಗೆ ಮೈಸೂರು ಜಿಲ್ಲಾಡಳಿತ ಅಧಿಕೃತ ಆಹ್ವಾನ ಕೊಟ್ಟಿದೆ. ಪೇಟಾ ತೊಡಸಿ, ಶಾಲು-ಹೂವಿನ ಹಾರ ಹಾಕಿ ನಟನಿಗೆ ಗೌರವಪೂರ್ವಕವಾಗಿ ಆಹ್ವಾನ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯುವ ದಸರಾ ಒಂದು ಪ್ರಮುಖ ಆಕರ್ಷಣೆ. ಈ ಸಮಾರಂಭದಲ್ಲಿ ಸಿನಿತಾರೆಯರು, ಖ್ಯಾತ ಗಾಯಕರು ಪಾಲ್ಗೊಂಡು ಯುವಜನತೆಗೆ ಮನರಂಜನೆಯ ರಸದೌತಣ ಉಣಬಡಿಸುತ್ತಾರೆ.

ವಿವಿಧ ಕಲಾತಂಡಗಳು ಇಲ್ಲಿ ನೃತ್ಯ ಪ್ರದರ್ಶನ ಮಾಡುತ್ತವೆ. ಖ್ಯಾತ ಗಾಯಕರು ತಮ್ಮ ಸುಮಧುರ ಗಾಯನದಿಂದ ಯುವಜನರನ್ನು ರಂಜಿಸುತ್ತಾರೆ.