ಕಣಿಯೂರು ಗ್ರಾಮ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿದ ಮಾರುತಿಪುರ ರೈತಬಂಧು ಆಹಾರೋಧ್ಯಮ ಮಾಲಕರಾದ ಶಿವಶಂಕರ್ ನಾಯಕ್ – ಕಹಳೆ ನ್ಯೂಸ್

*ಕಣಿಯೂರು:ಆ 28 ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಮಾರುತಿಪುರ ರೈತಬಂಧು ಆಹಾರೋಧ್ಯಮ ಮಾಲಕರಾದ ಶಿವಶಂಕರ್ ನಾಯಕ್ ರವರು ಭೇಟಿ ನೀಡಿ ಪಾಲನಾ ಕೇಂದ್ರಕ್ಕೆ ಪ್ರತಿ ತಿಂಗಳು ಅಕ್ಕಿ ನೀಡುವ ಭರವಸೆ ನೀಡಿದರು*
ಕಣಿಯೂರು: ಆ 28 ಕಣಿಯೂರು ಗ್ರಾಮ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಮಾರುತಿಪುರ ರೈತಬಂಧು ಆಹಾರೋಧ್ಯಮ ಮಾಲಕರಾದ ಶಿವಶಂಕರ್ ನಾಯಕ್ ಭೇಟಿ ನೀಡಿ ಪಾಲನಾ ಕೇಂದ್ರಕ್ಕೆ ಪ್ರತಿ ತಿಂಗಳು ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಅಕ್ಕಿ ನೀಡುವ ಭರವಸೆ ನೀಡಿದರು, ಅಲ್ಲಿನ ಕುಂದು-ಕೊರತೆಗಳನ್ನು ಪರಿಶೀಲಿಸಿ, ಸಂತ್ರಸ್ತರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಪುಲ್ಲಚಂದ್ರ, ಮತ್ತು ಎಸ್ ಕೆ ಡಿ ಆರ್ ಡಿ ಪಿ ಯ ಕಣಿಯೂರು ವಲಯಾಧ್ಯಕ್ಷರಾದ ರಮಾನಂದ ಪೂಜಾರಿ ಮುಗೆರೋಡಿ, ಮೇಲ್ವಿಚಾರಕಿ ಶ್ರೀಮತಿ ಚಂದ್ರಿಕಾ, ಫಿಸಿಯೋಥೆರಪಿಸ್ಟ್ ರಶ್ಮಿತಾ, ಕೌಶಲ್ಯ ತರಬೇತಿ ಅಧ್ಯಾಪಕಿ ವಿನಯ,ಸಿಬ್ಬಂದಿಗಳಾದ ಶಾಲಿನಿ, ಪ್ರಮೀಳಾ, ಉಷಾ, ಶಿಕ್ಷಕಿ ಸುಜಾತ,ರಶ್ಮಿತ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











