Saturday, August 29, 2026
ಸುದ್ದಿ

ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ತೀರ್ಥ…! – ಕಹಳೆ ನ್ಯೂಸ್

ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ನಿಕಟವಾದ ನಂಟು ಇರುವುದರಿಂದ ಇದೊಂದು ಹಿಂದೂಗಳ ಪಾಲಿಗೆ ಶ್ರದ್ಧಾ ಕೇಂದ್ರವೂ ಹೌದು..
ಅಲ್ಲದೆ, ಇದೊಂದು ಪ್ರಕೃತಿಸಹಜವಾದ ಬಿಸಿ ನೀರಿನ ಚಿಲುಮೆಯಾಗಿದೆ. ಇದರಲ್ಲಿ ಚಿಮ್ಮುವ ಬಿಸಿ ನೀರು, ಸಾಮಾನ್ಯ ನೀರಿಗಿಂತಲೂ ಅಧಿಕ ಮಟ್ಟದ ಬಿಸಿ ಹೊಂದಿದ್ದು, ಖನಿಜಾಂಶಗಳನ್ನು ಒಳಗೊಂಡಿದೆ. ಕೆಲವು ಚರ್ಮ ಸಂಬಂಧಿತ ರೋಗಗಳಿಗೆ ರಾಮಬಾಣವೆನ್ನಲಾಗುತ್ತದೆ. ಅಲ್ಲದೆ ಧಾರ್ಮಿಕವಾಗಿಯೂ ಈ ತೀರ್ಥ ಮಹತ್ವ ಪಡೆದಿದ್ದು ಸ್ಥಳೀಯವಾಗಿ ಸಾಕಷ್ಟು ಜನರಿಂದ ಮತ್ತು ಹೊಸದಾಗಿ ವಿವಾಹವಾದ ನವದಂಪತಿಗಳು ಭೇಟಿ ನೀಡುವ ಸಂಪ್ರದಾಯ ಹಿಂದಿನಿಂದಲೂ ನಡೆಯುತ್ತಾ ಬಂದಿರುತ್ತದೆ.
ಆದಾಗ್ಯೂ ಈ ಬಿಸಿ ನೀರಿನ ಚಿಲುಮೆ ಅಥವಾ ತೀರ್ಥವು ದಕ್ಷಿಣ ಭಾರತದ ಒಂದು ವಿಸ್ಮಯವೆಂದೇ ಹೇಳಬಹುದು.
ಇದರ ಕುರಿತು ಅಧ್ಯಯನ ನಡೆಸಿರುವ ಭಾರತೀಯ ಪುರಾತತ್ವ ಇಲಾಖೆಯು ಇದನ್ನು ದಕ್ಷಿಣ ಭಾರತದಲ್ಲಿರುವ ಏಕೈಕ ನೈಸರ್ಗಿಕ ಬಿಸಿ ನೀರಿನ ಚಿಲುಮೆ ಎಂದು ಉಲ್ಲೇಖಿಸಿದೆ.

ಜಾಹೀರಾತು

ಹೌದು,!! ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿರುವ ಈ ತೀರ್ಥವು ಬೆಂದ್ರ್ ತೀರ್ಥ ಎಂಬ ಹೆಸರಿನಿಂದ ಪ್ರಸಿದ್ದಿ ಪಡೆದಿದೆ. ಇನ್ನೊಂದು ವಿಶೇಷವೆಂದರೆ ತ್ರಿವೇಣಿ ಸಂಗಮ ಕ್ಷೇತ್ರದ ಹತ್ತಿರದಲ್ಲಿ ನೆಲೆಸಿರುವುದರಿಂದ ಈ ತೀರ್ಥ ಸಾಕಷ್ಟು ಧಾರ್ಮಿಕ ಮಹತ್ವವನ್ನೂ ಪಡೆದಿದೆ ಮತ್ತು ಹತ್ತಿರದಲ್ಲಿ ಸೀರೆ ಹೊಳೆ ಇದೆ. ದಂತಕಥೆಯಂತೆ ಹಿಂದೆ ಕಣ್ವ ಮುನಿಗಳ ಶಿಷ್ಯರು ಈ ಕ್ಷೇತ್ರವನ್ನು ಗೋಪಾಲಕ್ಷೇತ್ರ ಎಂದು ಕರೆದಿದ್ದರು.
ಹೌದು!!, ಬಹು ವರ್ಷಗಳ ಹಿಂದೆ ಇಲ್ಲಿ ಕಣ್ವ ಮುನಿಗಳ ಶಿಷ್ಯರು ಸಂಚರಿಸುತ್ತಿರುವಾಗ ಇದೊಂದು ಭಯಂಕರವಾದ ಕಾಡು ಪ್ರದೇಶವಾಗಿತ್ತು. ಆದರೂ ಇಲ್ಲಿರುವ ಹುಲಿಗಳು ಇತರೆ ಪ್ರಾಣಿಗಳೊಂದಿಗೆ ಸಾಮರಸ್ಯದಿಂದ ಬದುಕುತ್ತಿರುವುದನ್ನು ನೋಡಿ ಅವರಿಗೆ ಅಚ್ಚರಿಯಾಯಿತು. ಅಲ್ಲದೆ ಈ ಕ್ಷೇತ್ರದಲ್ಲಿ ಹೆಚ್ಚಾಗಿ ದನಗಳು ಕಂಡುಬರುತ್ತಿದ್ದವು ಮತ್ತು ಈ ಬಿಸಿ ನೀರಿನ ಬುಗ್ಗೆ ಪ್ರದೇಶಕ್ಕೆ ವಿಶಿಷ್ಟ ಕಳೆ ತಂದಿತ್ತು.
ಹೀಗಾಗಿ ಆ ಶಿಷ್ಯರು ಈ ಪ್ರದೇಶ ಸಾಕಷ್ಟು ವಿಶೇಷವಾಗಿದೆ ಎಂದರಿತು ಇದನ್ನು ಗೋಪಾಲ ಕ್ಷೇತ್ರ ಎಂದು ಕರೆದರು ಹಾಗೂ ಇಲ್ಲಿ ವಿಷ್ಣುಮೂರ್ತಿಯ ದೇವಾಲಯವನ್ನು ನಿರ್ಮಿಸಿ ಪೂಜಿಸತೊಡಗಿದರು. ಕ್ರಮೇಣ ಕಾಲ ಕಳೆದಂತೆ ಈ ಗೋಪಾಲ ಕ್ಷೇತ್ರ ಎಂದು ಕರೆಯಲಾಗುವ ಬೆಂದ್ರ್ ತೀರ್ಥವಾಗಿ ಹೆಸರುವಾಸಿಯಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇತಿಹಾಸದ ಪರಂಪರೆಯಿಂದಲೂ ಪ್ರತೀ ವರ್ಷ ಶ್ರಾವಣ ಮಾಸದಲ್ಲಿ ಬರುವ ತೀರ್ಥ ಅಮವಾಸ್ಯೆ ದಿನ, ಈ ಬಿಸಿನೀರಿನ ಚಿಲುಮೆ ಎಂದೇ ಪ್ರಖ್ಯಾತ ಪಡೆದ ಪುಣ್ಯ ಕ್ಷೇತ್ರದಲ್ಲಿ ತೀರ್ಥಸ್ನಾನ ನಡೆಯುವುದು ವಾಡಿಕೆಯಾಗಿದೆ.

2026 ರ ಜನವರಿಯಿಂದ ಈ ಕ್ಷೇತ್ರವು ಅಭಿವೃದ್ಧಿ ಪಡೆದು ಹತ್ತೂರ ಜನರನ್ನು ತನ್ನತ್ತ ಸೆಳೆಯುತ್ತಿದೆ

ಹಾಗೇನೇ
*ಶ್ರಾವಣ ಮಾಸದ ಸೆಪ್ಟೆಂಬರ್ 11 ರ ತೀರ್ಥ ಅಮಾವಾಸ್ಯೆಯ ದಿನ ಪವಿತ್ರ ತೀರ್ಥ ಸ್ನಾನ ನಡೆಯಲಿದೆ

ಆದ್ದರಿಂದ ಭಕ್ತರಲ್ಲಿ ವಿನಂತಿಸುತ್ತೇವೆ
ಕ್ಷೇತ್ರದ ಪಾವಿತ್ರ್ಯತೆಯನ್ನು ಮತ್ತು ಸನಾತನದಿಂದ ಬಂದಿರುವ ನಮ್ಮ ಧಾರ್ಮಿಕ ಆಚಾರ ವಿಚಾರಗಳನ್ನು ಕಾಪಾಡುವಲ್ಲಿ ತಾವೆಲ್ಲರೂ ಸಹಕರಿಸಬೇಕು!.