Recent Posts

Thursday, August 20, 2026
ಸುದ್ದಿ

ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು ಜೋಡಿಸಲು ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಈಜಿ ದಾಟಿದ ಮೆಸ್ಕಾಂ ಲೈನ್ ಮ್ಯಾನ್ ! – ಕಹಳೆ ನ್ಯೂಸ್

ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಮರು ಜೋಡಿಸಲು ಉಕ್ಕಿ ಹರಿಯುತ್ತಿದ್ದ ಹೊಳೆಯನ್ನು ಈಜಿ ದಾಟಿ ಮರು ಜೋಡಿಸುವ ಮೂಲಕ ಮೆಸ್ಕಾಂ ಲೈನ್ ಮ್ಯಾನ್ ಒಬ್ಬರು ಸಾಹಸಮಯ ಕರ್ತವ್ಯ ಪ್ರದರ್ಶಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಧೂಮಡ್ಕ ಎಂಬಲ್ಲಿ ಘಟನೆ ನಡೆದಿದೆ.

ಜಾಹೀರಾತು

ಧೂಮಡ್ಕ ಪ್ರದೇಶದಲ್ಲಿ ಹಾದು ಹೋಗುವ ಸೀರೆ ಹೊಳೆಗೆ ವಿದ್ಯುತ್ ತಂತಿ ಕಡಿದು ಬಿದ್ದಿತ್ತು. ಇದರಿಂದ ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬೆಟ್ಟಂಪಾಡಿ ಮೆಸ್ಕಾಂ ಉಪ ವಿಭಾಗದ ಲೈನ್ ಮ್ಯಾನ್ ನವಾಜ್, ಹರಿಯುತ್ತಿದ್ದ ನದಿಯಲ್ಲಿ ಈಜಿ ಸಾಗುವ ಮೂಲಕ ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು ಜೋಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಲೈನ್ ಮ್ಯಾನ್ ಬಂದೇ ನವಾಜ್ ಅವರ ಕರ್ತವ್ಯ ಪ್ರಜ್ಞೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದ್ದು, ಸಾರ್ವಜನಿಕರಿಂದ ಹಾಗೂ ಮೆಸ್ಕಾಂ ಹಿರಿಯ ಅಧಿಕಾರಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.