Saturday, August 22, 2026
ಸುದ್ದಿ

ಇನ್ನರ್ ವೀಲ್ ಮಂಗಳೂರು ದಕ್ಷಿಣ ವತಿಯಿಂದ ನರಿಕೊಂಬು ಪ್ರಾಥಮಿಕ ಶಾಲೆಗೆ ಅಕ್ಷರ ದಾಸೋಹ ಸಾಮಗ್ರಿ ದೇಣಿಗೆ- ಕಹಳೆ ನ್ಯೂಸ್

ಇನ್ನರ್ ವೀಲ್ ಮಂಗಳೂರು ದಕ್ಷಿಣ ವತಿಯಿಂದ ನರಿಕೊಂಬು ಪ್ರಾಥಮಿಕ ಶಾಲೆಗೆ ಅಕ್ಷರ ದಾಸೋಹ ಸಾಮಗ್ರಿ ದೇಣಿಗೆ

ಜಾಹೀರಾತು


ಬಂಟ್ವಾಳ : ಇನ್ನರ್ ವೀಲ್ ಕ್ಲಬ್ ಮಂಗಳೂರು ದಕ್ಷಿಣ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿನ ಮಕ್ಕಳ ಬಿಸಿಯೂಟ ಯೋಜನೆಗೆ ಅನ್ನ ಬಡಿಸುವ ಟ್ರೋಲಿ, ಸಾಂಬಾರ್ ಬಡಿಸುವ ಟ್ರೋಲಿ, ಹಾಗೂ ಅಕ್ಷರ ದಾಸೋಹಕ್ಕೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ಕ್ಲಬ್ ಅಧ್ಯಕ್ಷೆ ಕಲಾವತಿ ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಕೆ ಯವರಿಗೆ ಹಸ್ತಾಂತರಿಸಿ ಮಾತನಾಡಿ “ಮಕ್ಕಳ ಶಿಕ್ಷಣದ ಜೊತೆಗೆ ಅವರ ಆರೋಗ್ಯವೂ ಮುಖ್ಯ. ಸ್ವಚ್ಛವಾಗಿ ಮತ್ತು ಸುಲಭವಾಗಿ ಬಿಸಿ ಊಟ ಬಡಿಸಲು ಈ ಟ್ರೋಲಿಗಳು ಸಹಾಯವಾಗಲಿವೆ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ಲಬ್ ಪದಾಧಿಕಾರಿಗಳಾದ ನಂದಿನಿ ರಘು ಚಂದ್ರ, ಗೀತಾ ಡಿ ಅಮೀನ್, ಶಬರಿ ಭಂಡಾರಿ, ಮಾಲತಿ, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು