ನರಿಕೊಂಬು ಯುವಕ ಮಂಡಲ (ರಿ) ಮೊಗರ್ನಾಡು ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ನಡೆಯುವ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಬಂಟ್ವಾಳ : ನರಿಕೊಂಬು ಯುವಕ ಮಂಡಲ (ರಿ) ಮೊಗರ್ನಾಡು ಇದರ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ನಡೆಯುವ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಮೊಗರ್ನಾಡು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ದ ಅರ್ಚಕರಾದ ಗೋಪಾಲ ಭಟ್ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕಿರಣ್. ಎಂ ಗೌರವ ಧ್ಯಕ್ಷರಾದ ಪ್ರಕಾಶ್ ಕುಮಾರ್. ಪ್ರಧಾನ ಕಾರ್ಯದರ್ಶಿ ವಸಂತ ಅಂತರ, ಸದಸ್ಯರಾದ ತಿಮ್ಮಪ್ಪ ಗಾಣಿಗ ಯೋಗೀಶ್ ಶಂಬೂರ್, ರಂಜಿತ್ ಕುಲಾಲ್, ಪ್ರದೀಪ್ ಸಾಲ್ಯಾನ್, ಕಮಲಾಕ್ಷ ಏಲಬೆ ಮೊದಲಾದವರು ಉಪಸ್ಥಿತರಿದ್ದರು.











