Friday, August 21, 2026
ಸುದ್ದಿ

ಬಿದದಿ ಬಳಿ ಬೃಹತ್ ನಕಲಿ ಔಷಧಿ ಜಾಲ ಭೇದಿಸಿದ ಆಹಾರ ಮತ್ತು ಔಷಧ ಆಡಳಿತ (FDA): ₹4.91 ಕೋಟಿ ಮೌಲ್ಯದ ಸರಕು ವಶ- ಕಹಳೆ ನ್ಯೂಸ್

ರಾಜಧಾನಿ ಬೆಂಗಳೂರಿನ ಹೊರವಲಯದ ಬಿದದಿ ಸಮೀಪ ನಡೆಯುತ್ತಿದ್ದ ಬೃಹತ್ ಮಟ್ಟದ ಅಕ್ರಮ ಔಷಧಿ ಮರು-ಪ್ಯಾಕಿಂಗ್ ಮತ್ತು ನಕಲಿ ಔಷಧಿ ದಂಧೆಯನ್ನು ಆಹಾರ ಮತ್ತು ಔಷಧ ಆಡಳಿತ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದಾರೆ. FDA ನಡೆಸಿ ದ ಈ ಕಾರ್ಯಾಚರಣೆಯಲ್ಲಿ ಒಟ್ಟು ₹4.91 ಕೋಟಿ ಮೌಲ್ಯದ ನಕಲಿ ಹಾಗೂ ಕಾಲಾವಧಿ ಮುಗಿದ ಔಷಧಿಗಳ ದಾಸ್ತಾನನ್ನು ಜಪ್ತಿ ಮಾಡಲಾಗಿದೆ.

ಜಾಹೀರಾತು

ದೊಡ್ಡ ಪ್ರಮಾಣದ ಇಂಜೆಕ್ಷನ್ ಜಪ್ತಿ: ವಶಪಡಿಸಿಕೊಂಡ ಸರಕಿನಲ್ಲಿ ಬಹುಪಾಲು ಎನಿಸಿದ ₹3.38 ಕೋಟಿ ಮೌಲ್ಯದ 5,640 ‘ಸೆಫಿಯಾವಿಜೆಂಟ್ 2.5’  ಇಂಜೆಕ್ಷನ್ ಸೀಸೆಗಳನ್ನು ವಶಕ್ಕೆ ಪಡೆಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ರಮ ಕಾರ್ಯಾಚರಣೆ: ಅವಧಿ ಮುಗಿದ ಹಾಗೂ ಕಳಪೆ ಗುಣಮಟ್ಟದ ಔಷಧಗಳಿಗೆ ನಕಲಿ ಲೇಬಲ್ ಮತ್ತು ಕವರ್‌ಗಳನ್ನು ಹಾಕಿ, ಹೊಸ ಸರಕಿನಂತೆ ಮಾರುಕಟ್ಟೆಗೆ ಪೂರೈಸಲು ಸಿದ್ಧತೆ ನಡೆಸಲಾಗಿತ್ತು.

ದಾಳಿಯ ವಿವರ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಫ್‌ಡಿಎ ಅಧಿಕಾರಿಗಳ ತಂಡ, ಸ್ಥಳದಲ್ಲಿದ್ದ ಮರು-ಪ್ಯಾಕಿಂಗ್ ಯಂತ್ರಗಳು, ನಕಲಿ ಲೇಬಲ್‌ಗಳು ಮತ್ತು ಮುದ್ರಣ ಸಾಮಗ್ರಿಗಳನ್ನು ವಶಪಡಿಸಿಕೊಂಡಿದೆ.

ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ ಈ ನಕಲಿ ಜಾಲದ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಡಿಎ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.