Friday, August 21, 2026
ಸುದ್ದಿ

ಶ್ರೀ ರಾಜೇಗೌಡ ಶಾಸಕ ಶೃಂಗೇರಿ ವಿಧಾನಸಭಾ ಕ್ಷೇತ್ರ ಇವರಿಂದ ಪಾಂಗಳ ವಿದ್ಯವರ್ಧಕ ಕನ್ನಡ ಮಾಧ್ಯಮ ಶಾಲೆ ಗೆ ನವಿಕೃತ ಸಭಾಂಗಣ ಸುಸಜ್ಜಿತ ಪ್ರೊಜೆಕ್ಟರ್ ಮತ್ತು ವಿದ್ಯಾರ್ಥಿಗಳ ಶಿಕ್ಷಣಅಗತ್ಯ ಸಾಮಗ್ರಿ ಗಳ ಕೊಡುಗೆ ಮತ್ತು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಕಾಗಿ ಸಹಾಯದ ಭರವಸೆ- ಕಹಳೆ ನ್ಯೂಸ್

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಹಾಯ ಮಾಡಿದ ನನ್ನ ಮಿತ್ರರಾದ ಶ್ರೀ ಭುಜೇಗೌಡರ ಸಹಾಯವನ್ನು ನಾವೆಲ್ಲರೂ ಗೌರವಿಸಲೇಬೇಕು ವಿದ್ಯಾರ್ಥಿಗಳೇ ಉತ್ತಮ ಶಿಕ್ಷಣ ಮತ್ತು ಭವಿಷ್ಯ ನಿರ್ಮಾಣ ಮಾಡಿಕೊಳ್ಳಿ ನಿಮ್ಮೊಂದಿಗೆ ಸದಾ ನಾವು ಪ್ರೋತ್ಸಾಹಕರಾಗಿ ಇರುತ್ತೇವೆ ಎಂದು ವಿದ್ಯಾವರ್ಧಕ ಶಾಲೆಗಳ ಸಂಚಾಲಕರಾದ ಬಂಗಾಳ ರಾಜೇಶ್ ರಾವ್ ಅಧ್ಯಕ್ಷೀಯವಾಗಿ ನುಡಿದರು ವಿದ್ಯಾವರ್ಧಕ ಸಂಘದ ಸ್ಥಾಪಕ ಕಾರ್ಯದರ್ಶಿಗಳಾಗಿ 50 ವರ್ಷ ಸತತ ಸೇವೆ ಸಲ್ಲಿಸುತ್ತಿರುವ ಹಿರಿಯರಾದ ಶ್ರೀ ಪಿ ಸುಬ್ಬರಾವ್ ಅವರು ನವೀಕೃತ ಸಮಾರಂಭವನ್ನು ಉದ್ಘಾಟಿಸಿದರು ಮತ್ತು ಮಕ್ಕಳ ಭವಿಷ್ಯಕ್ಕಾಗಿ ಹಾರೈಸಿದರು.

ಜಾಹೀರಾತು

ಈ ಬಾರಿಯೂ 10ನೇ ತರಗತಿಯಲ್ಲಿ ಶೇಕಡ 100 ಫಲಿತಾಂಶ ತಂದುಕೊಟ್ಟು ಶಾಲೆಯ ಗೌರವವನ್ನು ಹೆಚ್ಚಿಸಿರುವ ಎಲ್ಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಕಾರ್ಯಕ್ರಮ ಮುಖ್ಯ ಅತಿಥಿ yagiವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಕೆ ಭೋಜರಾತ್ ಶೆಟ್ಟಿ, ವಿದ್ಯಾವರ್ಧಕ ಉಪಾಧ್ಯಕ್ಷರಾದ ಶ್ರೀ ಬಿ ರಾಧಾಕೃಷ್ಣ ರಾವ್ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಬಿ ಹೆಚ್ ಗೋಪಾಲಕೃಷ್ಣ ರಾವ್ ಮತ್ತು ಶ್ರೀ ಸುರೇಂದ್ರ ಆಚಾರ್ಯ ಹಾಗೂ ಶ್ರೀಮತಿ ಯಶೋಧ ದೇವಾಡಿಗ ಇನ್ನೆಂಜೆ ವ್ಯವಸಾಯಕ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಶ್ರೀಮತಿ ವೈಶಾಲಿ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಶ್ರೀ ಶಿವಾನಂದ್ ಅಮಿನ್ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಹಳೆ ವಿದ್ಯಾರ್ಥಿ ಶ್ರೀ ಕೃಷ್ಣ ಪ್ರಸಾದ್ ಹಳೆ ವಿದ್ಯಾರ್ಥಿನಿ ಕಾವ್ಯ ಕಾವ್ಯ ಅಂಚನ್ ನಿವೃತ್ತ ಮುಖ್ಯ ಶಿಕ್ಷಕ ಶ್ರೀ ಫ್ರಾನ್ಸಿಸ್ ಮುಖ್ಯ ಶಿಕ್ಷಕಿ ಶ್ರೀಮತಿ ಕಲ್ಯಾಣಿ ಹಳೆ ವಿದ್ಯಾರ್ಥಿ ಕಾರ್ಯದರ್ಶಿ ಸಹನ್ ದೇವಾಡಿಗ ಹಾಗೂ ಸಚಿನ್ ಆಚಾರ್ಯ ಇನ್ನೆಂಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜೇಶ್ ಆಚಾರ್ಯ ಮಾಧ್ಯಮ ಮಿತ್ರ ಸಂತೋಷ್ ಎಂ ಶೆಟ್ಟಿಗಾರ್ ಕಚೇರಿ ಸಹಾಯಕ ವಿಜಯ್ ಶೇರಿಗಾರ್ ಮತ್ತು ವಿದ್ಯಾರ್ಥಿಗಳು, ಪೋಷಕರು ಶಾಲಾ ಅಭಿಮಾನಿ ಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು